ಕೋಳಿಅಂಕ ಕೇಂದ್ರಕ್ಕೆ ದಾಳಿ: ಐದು  ಕೋಳಿ, ನಗದು ವಶ; ಆರು ಮಂದಿ ಸೆರೆ

ಬದಿಯಡ್ಕ: ನೀರ್ಚಾಲು ಗೋಳಿಯಡ್ಕ ಶಾಂತಿಪಳ್ಳ ಎಂಬಲ್ಲಿ  ಕೋಳಿ ಅಂಕ ಕೇಂದ್ರಕ್ಕೆ ಬದಿಯಡ್ಕ ಪೊಲೀಸರು ನಿನ್ನೆ ದಾಳಿ ನಡೆಸಿ ಕೋಳಿ ಅಂಕದಲ್ಲಿ ನಿರತರಾಗಿದ್ದ ಆರು ಮಂದಿಯನ್ನು ಸೆರೆಹಿಡಿದು ಐದು ಕೋಳಿ ಮತ್ತು 1620 ರೂ. ನಗದು ವಶಪಡಿಸಿಕೊಂಡಿದ್ದಾರೆ.  ಕಾಸರಗೋಡು ಕರಂದಕ್ಕಾಡಿನ ದಿನೇಶ (26), ನೀರ್ಚಾಲು ಮಕ್ಕಿಕ್ಕರದ ಈಶ್ವರ (62), ಬಂದ್ಯೋಡು ಮುಣ್ಚಿಯತ್ತಡ್ಕದ ಬಾಲಕೃಷ್ಣ ರೈ (46), ನೀರ್ಚಾಲು ಕೋಡಿಯಡ್ಕದ ಸರವು ರೈ (42), ಕೂಡ್ಲಿನ  ಜಯಂತ (48) ಮತ್ತು ನೀರ್ಚಾಲು ಪಡಿಯಡ್ಕದ ಅಶೋಕನ್(55) ಎಂಬವರನ್ನು ಪೊಲೀಸರು ಸೆರೆಹಿಡಿದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED NEWS

You cannot copy contents of this page