ಅಪರಿಚಿತ ವ್ಯಕ್ತಿಯ ಮೃತದೇಹ ಕೆರೆಯಲ್ಲಿ ಜೀರ್ಣಗೊಂಡ ಸ್ಥಿತಿಯಲ್ಲಿ ಪತ್ತೆ

ಮಂಜೇಶ್ವರ:  ಕಳಿಯೂರು ಅರಂತಾಡಿ ಎಂಬಲ್ಲಿ ತಿಮ್ಮಪ್ಪ ಭಟ್ ಎಂಬವರ ಕೆರೆಯಲ್ಲಿ ಅಪರಿಚಿತ ಪುರುಷನೋರ್ವರ ಮೃತದೇಹ ಪತ್ತೆಯಾಗಿದೆ. ಆ ಬಗ್ಗೆ ತಿಮ್ಮಪ್ಪ ಭಟ್ ನೀಡಿದ ದೂರಿ ನಂತೆ ಮಂಜೇಶ್ವರ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹದ ಮಹಜರು ನಡೆಸಿ  ಆಸ್ಪತ್ರೆಗೆ ಸಾಗಿಸಿ ದ್ದಾರೆ.  ಆ  ಬಗ್ಗೆ ಪೊಲೀಸರು ಪ್ರಕ ರಣ ದಾಖಲಿಸಿ ತನಿಖೆ ಆರಂಭಿಸಿ ದ್ದಾರೆ. ಮೃತ ವ್ಯಕ್ತಿ ಯಾರೆಂದು ಈತನಕ ಗುರುತು ಹಚ್ಚಲು ಸಾಧ್ಯವಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಸುಮಾರು ಐದು ದಿನದ ಹಿಂದೆಯೇ ಮೃತಪಟ್ಟಿರಬೇಕೆಂದು ಶಂಕಿಸಲಾಗುತ್ತಿದೆ. ತೋಟಕ್ಕೆ ಕೆಲಸಕ್ಕೆ ಬಂದವರು ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಮೃತದೇಹ ಜೀರ್ಣ ಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರು ನೀಡಿದ ಮಾಹಿತಿಯಂತೆ ತಿಮ್ಮಪ್ಪ ಭಟ್ ಪೊಲೀಸರಿಗೆ ದೂರು ನೀಡಿದ್ದಾರೆ.

RELATED NEWS

You cannot copy contents of this page