ಕಾಸರಗೋಡು:ಚೆರ್ಕಳ ಸರಕಾರಿ ಪ್ರೌಢಶಾಲೆಯಲ್ಲಿ ಜರಗಿದ ಕಾಸರಗೋಡು ಉಪಜಿಲ್ಲಾ ಶಾಲಾಕಲೋತ್ಸವದ ಯಕ್ಷಗಾನ ಸ್ಪರ್ಧೆಯಲ್ಲಿ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಎ ಗ್ರೇಡ್‌ನೊಂದಿಗೆ ಪ್ರಥಮ ಸ್ಥಾನ ಪಡೆದು ಸತತ ನಾಲ್ಕನೇ ಬಾರಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ. ತಂಡದ ತರಣಿಸೇನ ಕಾಳಗದ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು. ಖ್ಯಾತ ಯಕ್ಷಗಾನ ಕಲಾವಿದ ನಾಟ್ಯಗುರು ರಂಜಿತ್ ಗೋಳಿಯಡ್ಕ ನಿರ್ದೇಶಿಸಿದ ತಂಡದಲ್ಲಿ ಶ್ರೀರಾಮನಾಗಿ ಕೃಪಾನಿಧಿ, ಲಕ್ಷ್ಮಣನಾಗಿ ದ್ವಿತಿ, ಹನುಮಂತನಾಗಿ ಶರಣ್ ಪಾಯಿಚ್ಚಾಲು, ವಿಭೀಷಣನಾಗಿ ಮನ್ವಿತ್, ರಾವಣನಾಗಿ ಅದ್ವಿತ್, ತರಣಿಸೇನನಾಗಿ ಯಶ್ವನ್ ಶೆಟ್ಟಿ, ಸರಮೆಯಾಗಿ ಧನ್ವಿ ಅತ್ಯುತ್ತಮ ಪ್ರದರ್ಶನ ನೀಡಿದರು. ಹಿಮ್ಮೇಳದಲ್ಲಿ ಭಾಗವತರಾಗಿ ತಲ್ಪನಾಜೆ ವೆಂಕಟ್ರಮಣ ಭಟ್, ಚೆಂಡೆಯಲ್ಲಿ ಪೃತ್ವಿ ಪೆರೋಡಿ, ಮದ್ದಳೆಯಲ್ಲಿ ರಿತೇಶ್ ಅಡ್ಕ ಸಹಕರಿಸಿದರು. ಶ್ರೀ ದುರ್ಗಾಂಬ ಮಲ್ಲ ವೇಷಭೂಷಣದಲ್ಲಿ ನೀಡಿ ಸಹಕರಿಸಿದರು.




