ಕಾಸರಗೋಡು: 73ನೇ ಅಖಿಲ ಭಾರತ ಸಹಕಾರಿ ವಾರಾಚರಣೆಯ ರಾಜ್ಯ ಮಟ್ಟದ ಸಮಾರೋಪ ಸಮಾರಂಭ ನಾಳೆ ಹೊಸದುರ್ಗದ ಪಾಲೇಡಿಯಂ ಕನ್ವೆನ್ಶನ್ ಹಾಲ್‌ನಲ್ಲಿ ನಡೆಯಲಿದೆ. ಇದರಲ್ಲಿ 15೦೦ ಪ್ರತಿನಿಧಿಗಳು ಸೇರಿದಂತೆ ಸಹಕಾರಿ ವಲಯದ 25೦೦ ಮಂದಿ ಪಾಲ್ಗೊಳ್ಳುವರು. ನಾಳೆ ಬೆಳಿಗ್ಗೆ 1೦ ಗಂಟೆಗೆ ಆರಂಭಗೊಳ್ಳುವ ಸಮಾರೋಪ ಸಮಾರಂಭವನ್ನು ಮುಖ್ಯಮಂತ್ರಿ ವಿ.ಡಿ. ಸತೀಶನ್ ಉದ್ಘಾಟಿಸುವರು. ಸಹಕಾರಿ ಖಾತೆ ಸಚಿವ ಎಂ. ಲಿಜು ಅಧ್ಯಕ್ಷತೆ ವಹಿಸುವರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿರುವರು. ಅತ್ಯುತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿ ರುವ ಸಹಕಾರಿ ಕಾಲೇಜುಗಳು ಮತ್ತು ಸಹಕಾರಿ ತರಬೇತಿ ಕೇಂದ್ರಗಳಿಗೆ ಪುರಸ್ಕಾರ ನೀಡಲಾಗುವುದು. ನವಕೇರಳ ಹಾಗೂ ಸಹಕಾರಿ ವಲಯ ಎಂಬ ವಿಷಯದ ವಿಚಾರಗೋಷ್ಠಿ ನಡೆಯಲಿದೆ. ಇದನ್ನು ರಾಜ್ಯ ಸ್ಥಳೀಯಾಡಳಿ ಖಾತೆ ಸಚಿವ ಕೆ.ಎಂ. ಶಾಜಿ ಉದ್ಘಾಟಿಸುವರು. ಮಾರ್ಕೆಟ್ ಫೆಡ್ ಅಧ್ಯಕ್ಷ ನ್ಯಾ. ಸೋನಿ ಸೆಬಾಸ್ಟಿನ್ ಅಧ್ಯಕ್ಷತೆ ವಹಿಸುವರು. ಶಾಸಕ ಮ್ಯಾಥ್ಯು ಕುಳನಾಡನ್ ವಿಷಯ ಮಂಡಿಸುವರು. ಮಧ್ಯಾಹ್ನ 2 ಗಂಟೆಗೆ ಸಹಕಾರಿ ವಲಯದ ಬೆಳವಣಿಗೆ ಮತ್ತು ಜವಾಹರಲಾಲ್ ನೆಹರೂ ಎಂಬ ವಿಷಯದಲ್ಲಿ ಚರ್ಚೆ ನಡೆಯಲಿದೆ. ನೀಲೇಶ್ವರ ಸಹಕಾರಿ ಕಾಲೇಜು ಪ್ರಾಂಶುಪಾಲ ಪಿ.ಎ. ರಾಜೇಶ್ ವಿಷಯ ಮಂಡಿಸುವರು. ೩.೩೦ಕ್ಕೆ ಹೊಸದುರ್ಗ ನಗರದಲ್ಲಿ ಆಕರ್ಷಕ ಶೋಭಾಯಾತ್ರೆ ನಡೆಯಲಿದೆ. ಬಳಿಕ ಸಂಜೆ 6ಕ್ಕೆ ಹೊಸದುರ್ಗ ಟೌನ್‌ಹಾಲ್ ಸಮೀಪದ ಹೆರಿಟೇಜ್ ಸ್ಕ್ವಾರ್‌ನಲ್ಲಿ ಬಹಿರಂಗ ಸಭೆ ನಡೆಯಲಿದ್ದು, ಸಚಿವ ಎಂ. ಲಿಜು ಉದ್ಘಾಟಿಸುವರು. ಶಾಸಕ ಗೋವಿಂದನ್ ಪಳ್ಳಿಕ್ಕಾಪಿಲ್ ಅಧ್ಯಕ್ಷತೆ ವಹಿಸುವರು. ಶಾಸಕ ಕೆ. ನೀಲಕಂಠನ್ ಮುಖ್ಯ ಅತಿಥಿಯಾಗಿರುವರು.




