ಮೆಡಿಕಲ್ ಕಾಲೇಜು ಒ.ಪಿ. ವಿಭಾಗ ಮೊಟಕುಗೊಳಿಸಲಿರುವ ಯತ್ನ ಪ್ರತಿಭಟನಾರ್ಹ-ಶಾಸಕ ಕಲ್ಲಟ್ರ

ಕಾಸರಗೋಡು: ಉಕ್ಕಿನಡ್ಕ ಸರಕಾರಿ ವೈದ್ಯಕೀಯ ಕಾಲೇಜ್‌ನಲ್ಲಿ ಮುನ್ನೆಚ್ಚರಿಕೆ ಇಲ್ಲದೆ ಹೊರರೋಗ ವಿಭಾಗ ಸೇವೆಯನ್ನು ನಿಲುಗಡೆಗೊಳಿಸಲು ಪ್ರಾಂಶುಪಾಲ ನಡೆಸಿದ ಯತ್ನ ಪ್ರತಿಭಟನಾರ್ಹವೆಂದು ಶಾಸಕ ಕಲ್ಲಟ್ರ ಮಾಹಿನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆರೋಗ್ಯ ಸಚಿವ ಕೆ. ಮುರಳೀಧರನ್ ಒಂದು ವಾರದ ಹಿಂದೆ ಮೆಡಿಕಲ್ ಕಾಲೇಜಿನಲ್ಲಿ ಭಾಗವಹಿಸಿದ ಸಭೆಯಲ್ಲಿ ಒ.ಪಿ. ಸೇವೆ ನಿಲುಗಡೆಗೊಳಿಸುವುದಿಲ್ಲ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರಾಂಶುಪಾಲ ಏಕಪಕ್ಷೀಯವಾಗಿ ಕ್ರಮ ಕೈಗೊಂಡಿರುವುದು ಅತ್ಯಂತ ನಿಗೂಢವಾಗಿದೆಯೆಂದು ಅವರು ದೂರಿದರು. ಸರಕಾರಕ್ಕೆ ತಿಳಿದು ಅಥವಾ ಅನುಮತಿ ರಹಿತವಾಗಿ ಈ ರೀತಿಯ ಕ್ರಮಕ್ಕೆ ತೊಡಗಿರುವುದು ಸರಕಾರವನ್ನು ಸಾರ್ವಜನಿಕರ ಮಧ್ಯೆ ಕೆಟ್ಟದಾಗಿ ಚಿತ್ರೀಕರಿಸುವ ಯತ್ನವೋ ಎಂದು ಶಂಕಿಸಲಾಗುವುದಾಗಿ ಅವರು ಹೇಳಿದರು. ಮೆಡಿಕಲ್ ಕಾಲೇಜ್‌ನ್ನು ಆಶ್ರಯಿಸುವ ಸಾಮಾನ್ಯ ಜನರು, ಬಡ ರೋಗಿಗಳಿಗೆ ಬಹಳ ತೊಂದರೆ ಉಂಟುಮಾಡುವ ಕ್ರಮವಾಗಿದೆ ಇದು. ಆರ್ಥಿಕವಾಗಿ ಹಿಂದುಳಿದವರೇ ಹೆಚ್ಚಾಗಿ ಆಶ್ರಯಿಸುವ ಸರಕಾರಿ ಚಿಕಿತ್ಸಾ ವ್ಯವಸ್ಥೆಗಳನ್ನು ಇನ್ನಷ್ಟು ಬಲಪಡಿಸಬೇಕಾದ ಸಮಯದಲ್ಲಿ ಪ್ರಸ್ತುತಯಿರುವ ಒ.ಪಿ. ಸೇವೆಗಳನ್ನು ಕೂಡ ಮುನ್ನೆಚ್ಚರಿಕೆ ಇಲ್ಲದೆ ನಿಲುಗಡೆಗೊಳಿಸಲಿರುವ ಯತ್ನ ಅಂಗೀಕರಿಸಲು ಸಾಧ್ಯವಿಲ್ಲವೆಂದು ಅವರು ತಿಳಿಸಿದ್ದಾರೆ.

RELATED NEWS

You cannot copy contents of this page