ಮಂಜೇಶ್ವರ: ನಾಳೆ ನಡೆಯಲಿರುವ ಪಲ್ಸ್ ಪೋಲಿಯೋ ಲಸಿಕೆ ವಿತರಣೆಯ ಪ್ರಚಾರಾರ್ಥ ಪೋಲಿಯೋ ಬಾಧಿ ತನೂ, ಸಾಮಾಜಿಕ ಕಾರ್ಯಕರ್ತನಾದ ಹಕೀಂ ಕಂಬಾರು ಬಿಡುಗಡೆಗೊಳಿಸಿದ ತಿಳುವಳಿಕಾ ವೀಡಿಯೋ ಗಮನಸೆಳೆಯು ತ್ತಿದೆ. ಸ್ವಂತ ಜೀವನದ ಅನುಭವಗಳನ್ನು ಮುಂದಿರಿಸಿ ಹಕೀಂ ನೀಡಿದ ಹೇಳಿಕೆ ಗಳು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಗಿಟ್ಟಿಸಿಕೊಂಡಿದ್ದು, ಹಲವರು ಅದನ್ನು ಸ್ಟಾಟಸ್‌ಗಳಾಗಿಯೂ ಬಳಸಿಕೊಂಡಿದ್ದಾರೆ.
ಹಕೀಂ ಕಂಬಾರು ವರ್ಕಾಡಿ ಕುಟುಂಬಾರೋಗ್ಯ ಕೇಂದ್ರದ ಅಟೆಂ ಡೆಂಟ್ ಗ್ರೇಡ್-2 ನೌಕರನಾಗಿದ್ದಾರೆ. “ತಿಳುವಳಿಕೆ ಇಲ್ಲದಿರುವ ಕಾರಣ ನಮ್ಮಂತಹ ಹಲವಾರು ಮಂದಿಗೆ ಅಂದು ಪೋಲಿಯೋ ಬಿಂದು ಮದ್ದು ಲಭಿಸಿರಲಿಲ್ಲ. ಅದರ ಫಲವಾಗಿ ಹಲವರು ಸಾವಿಗೀಡಾಗಿದ್ದಾರೆ. ಇನ್ನೂ ಕೆಲವರು ಸಂಕಷ್ಟ ಅನುಭವಿಸುತ್ತಾ ಜೀ ವನ ಸಾಗಿಸುತ್ತಿದ್ದಾರೆ. ಇನ್ನು ಮುಂದಿನ ತಲೆಮಾರು ನಮ್ಮಂತಾಗಕೂಡದು. ಪೋಲಿಯೋದಿಂದ ಇನ್ನು ಮುಂದೆ ಯಾರೂ ನೋವು ಅನುಭವಿಸ ಕೂಡದು” ಎಂಬ ಹಕೀಂರ ಮಾತುಗಳು ಎಲ್ಲರ ಕಣ್ಣಿನಲ್ಲಿ ನೀರಿಳಿಸುವಂತೆ ಮಾಡುತ್ತಿದೆ.
ಐದು ವರ್ಷಕ್ಕಿಂತ ಕೆಳಪ್ರಾಯದ ಎಲ್ಲಾ ಮಕ್ಕಳಿಗೂ ಪೋಲಿಯೋ ಪ್ರತಿರೋಧ ಬಿಂದು ಮದ್ದು ಕಡ್ಡಾಯ ವಾಗಿ ನೀಡಬೇಕೆಂದೂ ಪೋಲಿಯೋ ವೈರಸ್‌ನ್ನು ಈ ಭೂಮಿಯಿಂದ ಪೂರ್ಣವಾಗಿ ನಾಶಗೊಳಿಸುವವರೆಗೆ ಜಾಗ್ರತೆ ಮುಂದುವರಿಸಬೇಕೆಂದು ಹಕೀಂ ವೀಡಿಯೋ ಮೂಲಕ ಜನರಿಗೆ ಅವರು ತಿಳಿಸಿದ್ದಾರೆ. “ ಆ ಎರಡು ಬಿಂದು ಮದ್ದು ಪ್ರತಿಯೊಂದು ಮಗುವಿನ ಹಕ್ಕಾಗಿದೆ. ಜತೆಗೆ ಸಮಾಜದ ಹೊಣೆಗಾರಿಕೆಯೂ ಆಗಿದೆ” ಎಂಬ ಸಂದೇಶದೊಂದಿಗೆ ವೀಡಿಯೋ ಕೊನೆಗೊಂಡಿದೆ. ಕಳೆದ ಮೂರು ವರ್ಷ ನಿರಂತರವಾಗಿ ತನ್ನ ನಾಲ್ಕು ಚಕ್ರದ ಸ್ಕೂಟರ್‌ನಲ್ಲಿ ಸಂಚರಿಸಿ ಹಕೀಂ ಕಂಬಾರು ಪೋಲಿಯೋ ಬಗ್ಗೆ ತಿಳುವಳಿಕಾ ಪ್ರಚಾರ ಯಾತ್ರೆಗಳನ್ನು ಹಮ್ಮಿಕೊಂಡಿದ್ದರು. ಇದರ ಬೆನ್ನಲ್ಲೇ ಈ ಬಾರಿ ಸಾಮಾಜಿಕ ಜಾಲತಾ ಣಗಳಲ್ಲಿ ಪೋಲಿಯೋ ವಿರುದ್ಧ ಪ್ರಚಾರದೊಂದಿಗೆ ಅವರು ರಂಗಕ್ಕಿಳಿದಿದ್ದಾರೆ.






