ಕ್ರಿಯಾ ಸಮಿತಿ ಒತ್ತಾಯಕ್ಕೆ ಮಣಿದ ಅಧಿಕಾರಿಗಳು : ಆರಿಕ್ಕಾಡಿ ಟೋಲ್ ಗೇಟ್ ತೆರವು ಪ್ರಕ್ರಿಯೆ ಆರಂಭ

ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಆರಿಕ್ಕಾಡಿಯಲ್ಲಿ ನಿರ್ಮಿಸಲಾದ ಟೋಲ್ ಗೇಟ್‌ನ್ನು ಮುರಿದು ತೆಗೆಯುವ ಕೆಲಸ  ಆರಂಭಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಅಥೋರಿಟಿಯ ನೌಕರರು  ಇಂದು ಬೆಳಿಗ್ಗೆ ಇಲ್ಲಿಗೆ ತಲುಪಿ ಟೋಲ್ ಗೇಟ್ ಮುರಿಯುವ ಕೆಲಸ ಆರಂಭಿಸಿದ್ದಾರೆ.  ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಬಳಿಕ ಇಲ್ಲಿ ಟೋಲ್ ಗೇಟ್ ನಿರ್ಮಿಸಿ ವಾಹನಗಳಿಂದ ಶುಲ್ಕ ವಸೂಲಿ ಆರಂಭಿಸಲಾಗುತ್ತಿತ್ತು. ಇದು ಭಾರೀ ವಿವಾದಗಳಿಗೆ ಕಾರಣವಾಗಿತ್ತು.  ವಾಹನಗಳಿಂದ ಶುಲ್ಕ ವಸೂಲಿ  ವಿರುದ್ಧ ಕ್ರಿಯಾ ಸಮಿತಿ ಬೃಹತ್ ಪ್ರತಿಭಟನೆ ನಡೆಸಿತ್ತು.  ಅಲ್ಲದೆ ಕೇಂದ್ರ ಸಚಿವರಿಗೂ ದೂರು ಸಲ್ಲಿಸಿ ಇಲ್ಲಿ ಶುಲ್ಕ ಸಂಗ್ರಹ ನಿಲ್ಲಿಸುವಂತೆ   ಒತ್ತಾಯಿಸಲಾಗಿತ್ತು. ಪ್ರತಿಭಟನೆ ಅನಿರ್ಧಿಷ್ಟವಾಗಿ ಮುಂದು ವರಿದ  ಹಿನ್ನೆಲೆಯಲ್ಲಿ    ಶುಲ್ಕ ವಸೂಲಿ ಮಾಡುವುದನ್ನು ರಾಷ್ಟ್ರೀಯ ಹೆದ್ದಾರಿ ಅಥೋರಿಟಿ ನಿಲ್ಲಿಸಿತ್ತು. ಆದರೆ ಟೋಲ್ ಗೇಟ್ ಮುರಿದು ತೆಗೆಯುವ ಕೆಲಸ ನಡೆದಿರಲಿಲ್ಲ. ಇದನ್ನು   ಶೀಘ್ರ ಮುರಿದು ತೆಗೆಯಬೇಕೆಂದು ಕ್ರಿಯಾ ಸಮಿತಿ ಒತ್ತಾಯಿಸಿತ್ತು. ಈ ಹಿನ್ನೆಲೆಯಲ್ಲಿ ಇದನ್ನು ಮುರಿದು ತೆಗೆಯುವ ಕೆಲಸಕ್ಕೆ ಚಾಲನೆ ನೀಡಲಾಗಿದೆ.

You cannot copy contents of this page