ಕುಂಬಳೆ: ವಾಹನಕ್ಕೆ ದಂಡ ಪಾವತಿಸಲಿದೆಯೆಂಬ ವಾಟ್ಸಪ್ ಸಂದೇಶದಲ್ಲಿ ಕ್ಲಿಕ್ ಮಾಡಿದ ಯುವತಿಯ ಖಾತೆಯಿಂದ ಹಣ ನಷ್ಟಗೊಂಡಿರುವುದಾಗಿ ದೂರಲಾಗಿದೆ. ಕುಂಬಳೆ ನಾಯ್ಕಾಪು ನಿವಾಸಿಯಾದ 28ರ ಹರೆಯದ ಯುವತಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಈ ತಿಂಗಳ 5ರಿಂದ 7ರ ಮಧ್ಯೆ ಯುವತಿಯ ಕರ್ನಾಟಕ ಬ್ಯಾಂಕ್ ಖಾತೆಯಿಂದ 41,329 ರೂ. ನಷ್ಟಗೊಂಡಿದೆ. ವಾಹನದ ದಂಡ ಪಾವತಿಸಲಿದೆಯೆಂದು ಪರಾ ಮರ್ಶಿಸುವ ಲಿಂಕ್ ಸಹಿತದ ಸಂ ದೇಶ ಫೋನ್ಗೆ ತಲುಪಿತ್ತು. ಇದೇ ಎಂದು ಪರಿಶೀಲಿಸಲು ಲಿಂಕ್ನಲ್ಲಿ ಕ್ಲಿಕ್ ಮಾಡಿದ ಬೆನ್ನಲ್ಲೇ ಖಾತೆಯಿಂದ ಹಣ ನಷ್ಟಗೊಂಡಿರುವುದಾಗಿ ಹೇಳಲಾಗಿದೆ. ಘಟನೆಯಲ್ಲಿ ಸೈಬರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.






