ಬಜಕೂಡ್ಲು: ಕೆರೆಯಲ್ಲಿ ಗೃಹಿಣಿಯ ಮೃತದೇಹ ಪತ್ತೆ

ಪೆರ್ಲ: ಕೃಷಿಗಾಗಿ ನೀರು ಉಪಯೋಗಿಸುವ ಕೆರೆಯಲ್ಲಿ ಗೃಹಿಣಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಎಣ್ಮಕಜೆ ಬಜಕೂಡ್ಲು ನಿವಾಸಿ ಈಶ್ವರ ನಾಯ್ಕ್‌ರ ಪತ್ನಿ ಜಯಲಕ್ಷ್ಮಿ (57) ಮೃತಪಟ್ಟವರು. ಶನಿವಾರ ಸಂಜೆ ಮನೆ ಸಮೀಪದ ತೋಟದಲ್ಲಿ ಇರುವ ಕೆರೆಯಲ್ಲಿ ಇವರನ್ನು ಪತ್ತೆಹಚ್ಚಲಾಗಿದೆ.

ಈ ಬಗ್ಗೆ ತಿಳಿದ ದಾರಿಹೋಕರು ಹಾಗೂ ಸ್ಥಳೀಯರು ಸೇರಿ ಕೆರೆಯಿಂದ ಮೇಲೆತ್ತಿ ಆಸ್ಪತ್ರೆಗೆ ತಲುಪಿಸಿದರಾದರೂ ಆ ವೇಳೆಗೆ ಮೃತಪಟ್ಟಿರುವುದಾಗಿ ಡಾಕ್ಟರ್ ತಿಳಿಸಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಮೃತರು ಪತಿ, ಮಕ್ಕಳಾದ ಅಭಿಲಾಷ, ಗೋಪಾಲಕೃಷ್ಣ, ಸಹೋದರರಾದ ರಾಮಚಂದ್ರ, ಬಾಲಕೃಷ್ಣ, ಕುಮಾರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page