ಕಾಸರಗೋಡು: ಪಲ್ಸ್ ಪೋಲಿಯೋ ಇಮ್ಯುನೈಸೇಶನ್ ಕಾರ್ಯಕ್ರಮದ ಅಂಗವಾಗಿ ನಿನ್ನೆ ಜಿಲ್ಲೆಯ ಐದು ವರ್ಷಕ್ಕಿಂತ ಕೆಳಗಿನ 9೦,136ಮಕ್ಕಳಿಗೆ ಪೋಲಿಯೋ ಬಿಂದು ಔಷಧಿ ನೀಡಲಾಯಿತು. ಪಲ್ಸ್ ಪೋಲಿಯೋ ದಿನವಾದ ನಿನ್ನೆ ಔಷಧಿ ಸ್ವೀಕರಿಸಲು ಸಾಧ್ಯವಾಗದ ಐದು ವರ್ಷಕ್ಕಿಂತಕೆಳಗಿನ ಮಕ್ಕಳಿಗೆ ಇಂದು, ನಾಳೆ ಆರೋಗ್ಯ ಕಾರ್ಯಕರ್ತರು ಮನೆಗಳನ್ನು ಸಂದರ್ಶಿಸಿ ಬಿಂದು ಔಷಧಿ ನೀಡುವರು. ಕಾರ್ಯಕ್ರಮದ ಜಿಲ್ಲಾಮಟ್ಟದ ಉದ್ಘಾಟನೆಯನ್ನು ಶಾಸಕ ಕೆ. ನೀಲಕಂಠನ್ ಉದುಮ ಮಂಡಲದಲ್ಲಿ ನೆರವೇರಿಸಿದರು. ಪಂಚಾಯತ್ ಅಧ್ಯಕ್ಷ ಚಂದ್ರನ್ ನಾಲಂವಾದುಕ್ಕಲ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ವೈದ್ಯಾಧಿಕಾರಿ ಡಾ| ರೇಖಾ ಕೆ.ಟಿ. ಪ್ರಧಾನ ಭಾಷಣ ಮಾಡಿದರು. ರಾಷ್ಟ್ರೀಯ ಆರೋಗ್ಯ ದೌತ್ಯಂ, ಜಿಲ್ಲಾ ಮೆಡಿಕಲ್ ಆಫೀಸ್ ಎಂಬಿವುಗಳ ಆಶ್ರಯದಲ್ಲಿ ಐಎಪಿ, ರೋಟರಿಗಳ ಸಹಕಾರದೊಂದಿಗೆ ಉದುಮ ಕುಟುಂಬ ಆರೋಗ್ಯ ಕೇಂದ್ರದಲ್ಲಿ ಕಾರ್ಯಕ್ರಮ ನಡೆಯಿತು.
2011ರಲ್ಲಿ ದೇಶದಲ್ಲಿ ಕೊನೆಯದಾಗಿ ಪೋಲಿಯೋ ವರದಿಯಾಗಿದ್ದರೂ 2014ರಲ್ಲಿ ದೇಶದ ಪೋಲಿಯೋ ಮುಕ್ತವೆಂದು ಘೋಷಿಸಲಾಯಿತು. ಆದರೆ ಅನ್ಯದೇಶಗಳಲ್ಲಿ ಈಗಲೂ ಪೋಲಿಯೋ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಐದು ವರ್ಷಕ್ಕಿಂತ ಕೆಳಗಿನ ಎಲ್ಲಾ ಮಕ್ಕಳಿಗೂ ಪ್ರತಿರೋಧ ಸಾಮರ್ಥ್ಯ ಖಚಿತಪಡಿಸಲು ಪಲ್ಸ್ ಪೋಲಿಯೋ ಬಿಂದು ಔಷಧಿ ವಿತರಣೆ ಮುಂದುವರಿಸಲಾಗುತ್ತಿದೆ.
ಜಿಲ್ಲೆಯ ಅಂಗನವಾಡಿಗಳು, ಶಾಲೆಗಳು, ಆರೋಗ್ಯ ಕೇಂದ್ರಗಳು, ಬಸ್ ನಿಲ್ದಾಣಗಳು, ರೈಲ್ವೇ ನಿಲ್ದಾಣಗಳು ಮೊದಲಾದ ಕಡೆಗಳಲ್ಲಿ ಬೂತ್ಗಳನ್ನು ಸಜ್ಜುಗೊಳಿಸಲಾಗಿತ್ತು. ಅಲ್ಲದೆ ಜನರಿಗೆ ತಲುಪಲು ಅಸಾಧವಾಗುವಂತಹ ಸ್ಥಳಗಳಲ್ಲಿ, ಅನ್ಯರಾಜ್ಯ ಕಾರ್ಮಿಕರ ಶಿಬಿರಗಳಲ್ಲಿ ಮಕ್ಕಳಿಗೆ ಬಿಂದು ಔಷಧಿ ನೀಡುವುದಕ್ಕಾಗಿ ಮೊಬೈಲ್ ತಂಡಗಳನ್ನು ಸಜ್ಜುಗೊಳಿಸಲಾಗಿತ್ತು.





