ಕಾಸರಗೋಡು: ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಎಡಪಕ್ಷದ ಬೆಂಬಲಿತ ಸಂಘಟನೆಯಲ್ಲಿ ಒಳಗೊಂಡ ವ್ಯಕ್ತಿಯನ್ನು ನೇಮಕಗೊಳಿಸಿರುವುದರಿಂದ ಯೂತ್ ಕಾಂಗ್ರೆಸ್‌ನಲ್ಲಿ ಭಾರೀ ಭಿನ್ನಮತ ಸ್ಫೋಟಗೊಂಡಿದೆ. ಪಕ್ಷಕ್ಕೆ ಬೇಕಾಗಿ ದುಡಿದವರನ್ನು ಅವಗಣಿಸಲಾಗಿದೆಯೆಂದು ಆರೋಪ ಹೊರಿಸಲಾಗಿದೆ. ಕಾಂಗ್ರೆಸ್ ಜಿಲ್ಲಾ ಸಮಿತಿ ನೀಡಿದ ಯಾದಿಯನ್ನು ತಿರಸ್ಕರಿಸಿ ನೇಮಕಾತಿಯನ್ನು ನಡೆಸಲಾಗಿದೆಯೆಂದು ಅಕ್ಷೇಪಿಸಲಾಗಿದೆ. ಎಡ ಬೆಂಬಲಿತ ಸಂಘಟನೆಯೊಂದಿಗೆ ಕಾರ್ಯಾಚರಿಸುವ ವಿದ್ಯಾಧರನ್ ನಂಬ್ಯಾರ್‌ರನ್ನು ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕಗೊಳಿಸಿರುವುದನ್ನು ಯೂತ್ ಕಾಂಗ್ರೆಸ್ ಟೀಕಿಸಿದೆ. ಯೂತ್ ಕಾಂಗ್ರೆಸ್‌ನ ಕಾರ್ಯಕರ್ತರಿಗಾಗಿ ಕೇಸ್‌ಗಳನ್ನು ನ್ಯಾಯಾಲಯದಲ್ಲಿ ವಾದಿಸುತ್ತಿದ್ದ ನ್ಯಾಯವಾದಿ ಶ್ರೀಜಿತ್ ಮಾಳವನ್‌ರಿಗೆ ಈ ಹುದ್ದೆ ಲಭಿಸಬಹುದೆಂದು ಕಾರ್ಯಕರ್ತರು, ಮುಖಂಡರು ನಿರೀಕ್ಷಿಸಿದ್ದರು.
ಕಾಂಗ್ರೆಸ್ ಕಾರ್ಯಕರ್ತರಿಗೆ ಬೇಕಾಗಿ ಶುಲ್ಕ ಪಡೆಯದೆ ಪ್ರಕರಣಗಳಲ್ಲಿ ವಾದ ಮಂಡಿಸಿದ ನ್ಯಾಯವಾದಿಗಳ ಹೆಸರುಗಳನ್ನು ಚರ್ಚಿಸಿ ಮುಖಂಡರಿಗೆ ನೀಡಲಾಗಿತ್ತು. ಆದರೆ ಅದೆಲ್ಲವನ್ನೂ ಅವಗಣಿಸಿ ಎಡಪಕ್ಷ ಬೆಂಬಲಿತ ವ್ಯಕ್ತಿಯನ್ನು ಅಡಿಶನಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕಗೊಳಿಸಲಾಗಿದೆಯೆಂದು ಆರೋಪವಿದೆ. ಈ ಬಗ್ಗೆ ಮಾಜಿ ರಾಜ್ಯಕಾರ್ಯದರ್ಶಿ ಉನೈಸ್ ಸಹಿತವಿರುವ ಮುಖಂಡರು ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಸಣ್ಣಿಜೋಸೆಫ್, ಮುಖ್ಯಮಂತ್ರಿ ವಿ.ಡಿ. ಸತೀಶನ್‌ರಿಗೆ ಜಿಲ್ಲಾ ಅಧ್ಯಕ್ಷ ಕಾರ್ತಿಕೇಯನ್ ದೂರು ನೀಡಿದ್ದಾರೆ.






