ಕಾಸರಗೋಡು: ನಗರದಲ್ಲಿ ಕ್ಲಿನಿಕ್‌ವೊಂದಕ್ಕೆ ಕಳ್ಳರು ನುಗ್ಗಿ ಹಣ ಹಾಗೂ ಮೊಬೈಲ್ ಫೋನ್ ದೋಚಿದ್ದಾರೆ. ನಗರದ ನಾಯಕ್ಸ್ ರಸ್ತೆಯಲ್ಲಿರುವ ಚರ್ಮರೋಗ ತಜ್ಞ ಡಾ| ನರಹರಿಯವರ ಕ್ಲಿನಿಕ್‌ನಿಂದ ಕಳವು ನಡೆದಿದೆ. ಕ್ಲಿನಿಕ್‌ನ ಕಪಾಟಿನ ಲ್ಲಿಟ್ಟಿದ್ದ 25,000 ರೂಪಾಯಿ, ಒಂದು ಮೊಬೈಲ್ ಫೋನ್ ಹಾಗೂ ಸಿಸಿ ಟಿವಿಯ ಉಪಕರಣಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ. ಇಂದು ಬೆಳಿಗ್ಗೆ ಕ್ಲಿನಿಕ್‌ನ ಶುಚೀಕರಣ ನೌಕರೆ ತಲುಪಿದಾಗ ಬಾಗಿಲು ಮುರಿದ ಸ್ಥಿತಿಯಲ್ಲಿ ಕಂಡುಬಂದಿತ್ತು. ಈ ಬಗ್ಗೆ ಅವರು ನೀಡಿದ ಮಾಹಿತಿಯಂತೆ ಡಾ| ನರಹರಿ ತಲುಪಿ ಪೊಲೀಸರಿಗೆ ದೂರು ನೀಡಿದ್ದಾರೆ. ನಿನ್ನೆ ರಾತ್ರಿ ಇಲ್ಲಿಗೆ ಕಳ್ಳರು ನುಗ್ಗಿರಬಹುದೆಂದು ಅಂದಾಜಿ ಸಲಾಗಿದೆ.
ಪೊಲೀಸರು ತಲುಪಿ ತನಿಖೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು ತಲುಪಿ ಪರಿಶೀಲನೆ ನಡೆಸಲಿ ದ್ದಾರೆಂದು ತಿಳಿದುಬಂದಿದೆ.







