ಕಂದಾಯ ಜಿಲ್ಲಾ ಶಾಲಾ ಕಲೋತ್ಸವ 4ನೇ ದಿನಕ್ಕೆ: ಹೊಸದುರ್ಗ ಉಪಜಿಲ್ಲೆ ಮುನ್ನಡೆಯಲ್ಲಿ; ಸ್ಪರ್ಧೆಗಳು ವಿಜಿಲೆನ್ಸ್ ನಿಗಾದಲ್ಲಿ

ಕಾಸರಗೋಡು: ಪೆರಿಯದಲ್ಲಿ ನಡೆಯುತ್ತಿರುವ ಜಿಲ್ಲಾ ಶಾಲಾ ಕಲೋತ್ಸವ ಮೂರು ದಿನ ಪೂರ್ತಿಯಾದಾಗ ಹೊಸದುರ್ಗ ಉಪಜಿಲ್ಲೆ 446 ಅಂಕದೊಂದಿಗೆ ಮುನ್ನಡೆಯಲ್ಲಿದೆ. 44೦ ಅಂಕ ಪಡೆದ ಕಾಸರಗೋಡು, 403 ಅಂಕ ಪಡೆದ ಚೆರುವತ್ತೂರು ಉಪಜಿಲ್ಲೆಗಳು 2,3ನೇ ಸ್ಥಾನದಲ್ಲಿ ಮುಂದುವರಿಯುತ್ತಿದೆ. ಶಾಲಾ ಮಟ್ಟದಲ್ಲಿ ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆ ಮುಂದಿದೆ.

ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ನಿನ್ನೆ ಶಾಲಾ ಕಲೋತ್ಸವ ವನ್ನು ಔಪಚಾರಿಕವಾಗಿ ಉದ್ಘಾಟಿಸಿದರು. ಶಾಸಕ ಕೆ. ನೀಲಕಂಠನ್ ಅಧ್ಯಕ್ಷತೆ ವಹಿಸಿದರು. ಶಾಸಕ ಎಕೆಎಂ ಅಶ್ರಫ್ ಸ್ಮರಣಸಂಚಿಕೆ ಬಿಡುಗಡೆಗೊಳಿಸಿದರು. ಶಾಸಕ ಗೋವಿಂದನ್ ಪಳ್ಳಿಕಾಪಿಲ್, ಜಿಲ್ಲಾಧಿಕಾರಿ ಶ್ರೀಧನ್ಯಾ ಸುರೇಶ್, ಜಿಲ್ಲಾ ಪಂ. ಅಧ್ಯಕ್ಷ ಸಾಬು ಅಬ್ರಹಾಂ, ಉಪಾಧ್ಯಕ್ಷ ಕೆ.ಕೆ. ಸೋಯ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಮನು, ಸದಸ್ಯರಾದ ಕೆ. ಸಬೀಶ್, ಇರ್ಫಾನ ಇಕ್ಬಾಲ್, ಬ್ಲೋಕ್ ಪಂ. ಅಧ್ಯಕ್ಷೆ ಕೆ. ಸುಜಾತ, ಪಂಚಾಯತ್ ಅಧ್ಯಕ್ಷೆ ಡಾ. ಸಿ.ಕೆ. ಸಬಿತ, ಬ್ಲೋಕ್ ಪಂ. ಸದಸ್ಯೆ ಸಿಂಧು ಪದ್ಮನಾಭನ್, ಉಷಾ ಎನ್. ನಾಯರ್, ಡಿಡಿಇ ಪಿ. ಸವಿತ, ಡಿಇಒ ರಾಹುಲ್ ಆರ್. ರಾಜ್, ರಾಜನ್ ಪೆರಿಯ, ಯೂನುಸ್ ಮಾತನಾಡಿದರು.

ಕಲೋತ್ಸವದ ಸ್ಪರ್ಧೆಗಳು ವಿಜಿಲೆನ್ಸ್‌ನ ಕಠಿಣ ನಿಗಾದಲ್ಲಿ ನಡೆಯುತ್ತಿದೆ. ವಿಜಿಲೆನ್ಸ್ ಡಿವೈಎಸ್‌ಪಿ ಪಿ. ವಿಶ್ವಂಭರನ್ ನಾಯರ್‌ರ ನೇತೃತ್ವದಲ್ಲಿ  ಸ್ಪರ್ಧೆಗಳು ಹಾಗೂ ತೀರ್ಪು ಕ್ರಮಗಳನ್ನು ನಿರೀಕ್ಷಿಸಲಾಗು ವುದು. ತೀರ್ಪುಗಾರರು, ತೀರ್ಪಿನ ಅಸಹಜತೆ, ಫಲಿತಾಂಶದಲ್ಲಿನ ಅಸಾಮಾನ್ಯವಾದ ವ್ಯತ್ಯಾಸಗಳು, ಅಪೀಲುಗಳು, ಹಿಂದೆ ಆರೋಪವಿದೇ ಯರಾದ ತೀರ್ಪುಗಾರರು, ಖಾಯಂ ಆಗಿ ವಿವಿಧ ಸ್ಪರ್ಧೆಗಳಲ್ಲಿ ತೀರ್ಪುಗಾ ರರಾಗಿ ತಲುಪುವವರು ಇವರನ್ನೆಲ್ಲಾ ವಿಜಿಲೆನ್ಸ್ ತಂಡ ಪ್ರತ್ಯೇಕವಾಗಿ ನಿರೀಕ್ಷಿ ಸಲಿದೆ. ಯಾವುದಾದರೂ ವಿಧದಲ್ಲಿ ಸ್ವಾಧೀನ ಅಥವಾ ಹಸ್ತಕ್ಷೇಪ, ಲೋಪ ದೋಷ ನಡೆಯುತ್ತಿದೆಯೇ ಎಂಬ ಬಗ್ಗೆ ಯೂ ಪರಿಶೀಲನೆ ನಡೆಸ ಲಾಗುತ್ತಿದೆ. ಪ್ರತಿಭೆಗಳಿಗೆ ಅರ್ಹವಾದ ಅಂಗೀಕಾರ ಲಭಿಸುತ್ತಿದೆ ಎಂಬುದನ್ನು ಖಚಿತಪಡಿ ಸುವುದು ವಿಜಿಲೆನ್ಸ್ ನಿಗಾದ ಉದ್ದೇಶ.

RELATED NEWS

You cannot copy contents of this page