ಕಾಸರಗೋಡು: ಕಾಸರಗೋಡು ನಗರಸಭೆಯ ನೌಕರೆ ಮನೆಯೊಳಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಕಾಞಂಗಾಡ್, ಪಡನ್ನಕ್ಕಾಡ್ ಕರುವಳಂ ನಿವಾಸಿ ಹಾಗೂ ಪ್ರಸ್ತುತ ನೀಲೇಶ್ವರ ತಟ್ಟಾಚೇರಿಯಲ್ಲಿ ವಾಸಿಸುವ ರಮ್ಯ (40) ಮೃತಪಟ್ಟ ಯುವತಿ. ಇಂದು ಬೆಳಿಗ್ಗೆ ಮನೆಯ ಮೇಲ್ಮಹಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇವರನ್ನು ಪತ್ತೆಹಚ್ಚಲಾಗಿದೆ. ಕಲ್ಲಿಕೋಟೆ ಫರೂಕ್ ನಗರಸಭಾ ಕಾರ್ಯದರ್ಶಿಯಾದ ಶ್ರೀಜಿತ್ರ ಪತ್ನಿಯಾಗಿದ್ದಾರೆ ಇವರು. ರಮ್ಯ ಹಾಗೂ ಮಕ್ಕಳು ಮನೆಯಲ್ಲಿ ವಾಸವಾಗಿದ್ದರು. ಬೆಳಿಗ್ಗೆ ನೋಡಿದಾಗ ಬಾಗಿಲು ಒಳಗಿನಿಂದ ಹಾಕಿದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಬಳಿಕ ಪರಿಸರ ನಿವಾಸಿಗಳು ಬಾಗಿಲು ಮುರಿದು ಒಳ ಹೋಗಿ ನೋಡಿದಾಗ ರಮ್ಯ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಾಹಿತಿ ತಿಳಿದು ನೀಲೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ.







