ಜಿಲ್ಲಾ ಶಾಲಾ ಕಲೋತ್ಸವ  ಕೂಡ್ಲು ಶಾಲಾ ತಂಡ ರಾಜ್ಯಮಟ್ಟಕ್ಕೆ

ಕಾಸರಗೋಡು: ಪೆರಿಯ ಸರಕಾರಿ ಪ್ರೌಢ ಶಾಲೆಯಲ್ಲಿ ಜರಗಿದ ಕಂದಾಯ ಜಿಲ್ಲಾಮಟ್ಟದ ಶಾಲಾ ಕಲೋತ್ಸವದ ಯಕ್ಷಗಾನ ಸ್ಪರ್ಧೆಯಲ್ಲಿ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆ ತಂಡ ಎ ಗ್ರೇಡ್‌ನೊಂದಿಗೆ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಒಟ್ಟು ನಾಲ್ಕು ತಂಡಗಳು ಭಾಗವಹಿಸಿದ್ದು, ಕೂಡ್ಲು ಶಾಲೆಯ ತಂಡ ‘ತರಣಿ ಸೇನ ಕಾಳಗ’ ಪ್ರದರ್ಶಿಸಿತ್ತು. ಇವರ ಪ್ರದರ್ಶನ ಪ್ರೇಕ್ಷಕರ ಮನ ಮುದಗೊಳಿಸಿತು. ಗುರು ರಂಜಿತ್ ಗೋಳಿಯಡ್ಕ ನಿರ್ದೇಶಿಸಿದ ತಂಡದಲ್ಲಿ ಕೃಪನಿಧಿ, ದ್ವಿತಿ, ಶರಣ್ ಪಾಯಿಚ್ಚಾಲ್, ಮನ್ವಿತ್,  ಅದ್ವಿತ್, ಯಶ್ವನ್ ಶೆಟ್ಟಿ, ಧನ್ವಿ ವಿವಿಧ ಕಥಾಪಾತ್ರಗಳಿಗೆ ಜೀವ ತುಂಬಿದರು. ಭಾಗವತರಾಗಿ ತಲ್ಪನಾಜೆ ವೆಂಕಟ್ರಮಣ ಭಟ್, ಚೆಂಡೆಯಲ್ಲಿ ಪೃಥ್ವಿ ಪೇರೊಡಿ, ಮದ್ದಳೆಯಲ್ಲಿ ರಿತೇಶ್ ಅಡ್ಕ ಸಹಕರಿಸಿದರು. ದುರ್ಗಾಂಬ ಮಲ್ಲ ವೇಷಭೂಷಣ ನೀಡಿದ್ದರು. ಅರ್ಜುನ್ ಕೂಡ್ಲು, ಹರ್ಷ ಕುಮಾರ್ ಬೆಳಿಂಜ, ಕಿರಣ್‌ಪ್ರಸಾದ್ ಕೂಡ್ಲು, ರಂಜನ್ ಐಲ, ರಾಧಿಕಾ, ರಂಜಿನಿ ನೇತೃತ್ವ ನೀಡಿದರು. ಶಾಲಾ ವ್ಯವಸ್ಥಾಪಕ ಕೆ.ಜಿ. ಶ್ಯಾನುಭೋಗ್, ಪಿಟಿಎ ಸಂಘದ ಅಧ್ಯಕ್ಷ ಶ್ರೀಧರ, ಮಾತೃ ಸಂಘದ ಅಧ್ಯಕ್ಷೆ ವಿಜಯಶ್ರೀ ಅಭಿನಂದಿಸಿದರು.

RELATED NEWS

You cannot copy contents of this page