ಕಾಸರಗೋಡು: ರೈಲು ನಿಲ್ದಾಣದಲ್ಲಿ ಅಬಕಾರಿ ತಂಡ ಕಾಸರಗೋಡು ಡಿ.ಸಿ ಸ್ಕ್ವಾಡ್ ಮತ್ತು ರೈಲ್ವೇ ಭದ್ರತಾ ಪಡೆ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ಕು ಕಿಲೋ ಗಾಂಜಾ ಪತ್ತೆಹಚ್ಚಿದೆ.
ಹೊಸದುರ್ಗ ಎಕ್ಸೈಸ್ ಸರ್ಕಲ್ ಪ್ರಸನ್ನ ವಿ.ವಿ ನೇತೃತ್ವದ ತಂಡ ನಿನ್ನೆ ಹೊಸದುರ್ಗ ರೈಲು ನಿಲ್ದಾಣದಲ್ಲಿ ಈ ಕಾರ್ಯಾಚರಣೆ ನಡೆಸಿದೆ. ಆವೇಳೆ ರೈಲು ನಿಲ್ದಾಣದ ಪ್ಲಾಟ್ ಫಾಂನಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಬಚ್ಚಿಟ್ಟಿದ್ದ ಗಾಂಜಾ ಪತ್ತೆಯಾಗಿದೆ. ಅದನ್ನು ಯಾರು ತಂದಿರಿಸಿದ್ದಾರೆಂಬುವುದು ಸ್ಪಷ್ಟಗೊಂಡಿಲ್ಲವೆಂದೂ ಆ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಎಂ. ರಾಜೀವನ್, ಪ್ರಿವೆಂಟೀವ್ ಆಫೀಸರ್ ಮನೀಶ್ ಕುಮಾರ್ ಎಂ.ಪಿ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಅರುಣ್ ಆರ್.ಕೆ, ಶ್ಯಾಮ್‌ಜಿತ್ ಎಂ, ಬಂದಡ್ಕ ರೇಂಜ್ ಇನ್‌ಸ್ಪೆಕ್ಟರ್ ಜೋಸೆಫ್ ಜೆ, ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಜನಾರ್ದನನ್ ಕೆ.ಎ, ರಾಧಾಕೃಷ್ಣನ್ ಎಂ.ಕೆ, ಪಾಲಕ್ಕಾಡ್ ಆರ್.ಪಿ.ಎಫ್ ಕ್ರೈಂ ಇಂಟೆಲಿಜೆನ್ಸ್ ಬ್ರಾಂಚ್ ಎಸ್‌ಐಗಳಾದ ದೀಪಕ್ ಎ.ಪಿ, ಎ.ಪಿ. ಅಜಿತ್ ಅಶೋಕ್, ಎಎಸ್‌ಐ ಶಿಜು ಕೆ.ಎಂ ಪಾಲಕ್ಕಾಡ್, ಸಿಪಿಡಿಎಸ್ ಕಾನ್‌ಸ್ಟೇಬಲ್‌ಗಳಾದ ಅಬ್ದುಲ್ ಸತ್ತಾರ್, ವಿನೋಜ್ ಕೆ, ಆರ್‌ಪಿಎಫ್ ಕಾನ್‌ಸ್ಟೇಬಲ್ ವಿ.ಟಿ. ರಾಜೇಶ್‌ಎಂಬಿವರು ಒಳಗೊಂಡಿದ್ದರು.






