ಕಾಸರಗೋಡು: ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಇದರ ನೇತೃತ್ವದಲ್ಲಿ ಕೇರಳ ರಾಜ್ಯ ೮ನೇ ಕನ್ನಡ ಸಮ್ಮೇಳನ-2026, ಕೇರಳ-ಕರ್ನಾಟಕ ಉತ್ಸವ ಕಾಸರಗೋಡು ಕನ್ನಡ ಗ್ರಾಮದಲ್ಲಿ ಇಂದು ಬೆಳಿಗ್ಗೆ ಸಾಂಸ್ಕೃತಿಕ ಮೆರವಣಿಗೆ ಯೊಂದಿಗೆ ಆರಂಭಗೊಂಡಿತು. ಮೆರವಣಿಗೆಯನ್ನು ಮಧೂರು ಪಂಚಾಯತ್ ಅಧ್ಯಕ್ಷೆ ಸುಜ್ಞಾನಿ ಶ್ಯಾನುಭೋಗ್ ಉದ್ಘಾಟಿಸಿ ದರು. ಕೆ.ಎನ್. ವೆಂಕಟ್ರಮಣ ಹೊಳ್ಳ, ಜಯಾನಂದ ಕುಮಾರ್ ಕಾಸರಗೋಡು ಮೊದಲಾದವರು ಉಪಸ್ಥಿತರಿದ್ದರು. ಬಳಿಕ ರಾಷ್ಟ್ರಧ್ವಜಾರೋಹಣ ಹಾಗೂ ಕನ್ನಡ ಧ್ವಜಾರೋಹಣ ನಡೆಯಿತು. ಅನಂತರ ಕೇರಳ ರಾಜ್ಯ ೮ನೇ ಕನ್ನಡ ಸಮ್ಮೇಳನ, ಕೇರಳ-ಕರ್ನಾಟಕ ಉತ್ಸವ ಉದ್ಘಾಟನೆಗೊಂಡಿತು. ಬೆಂಗಳೂರು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಜಗದ್ಗುರು ಶ್ರೀ ಡಾ. ನಿಶ್ಚಲಾನಂದನಾಥ ಮಹಾಸ್ವಾಮಿ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಾರೆ. ಇದೇ ಸಂದರ್ಭದಲ್ಲಿ ಕೇರಳ-ಕರ್ನಾಟಕ ಭವನದ ಭೂಮಿಪೂಜೆ-ಶಿಲಾನ್ಯಾಸ, ಕಾಸರಗೋಡು ಗೋ ಕುಟೀರದ ಪ್ರವೇಶೋತ್ಸವ, ಲೋಕಾರ್ಪಣೆ ನಡೆಯಿತು.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಉಪಸ್ಥಿತರಿದ್ದು ಆಶೀರ್ವಚನ ನೀಡಿ ದರು. ಹಲವರು ಗಣ್ಯರು ಭಾಗವಹಿ ಸುತ್ತಿದ್ದಾರೆ. ಮಧ್ಯಾಹ್ನ 12.30ಕ್ಕೆ ಅಂತರ್‌ರಾಜ್ಯ ಮಟ್ಟದ ಮಾಧ್ಯಮ ಗೋಷ್ಠಿ, 1.30ರಿಂದ ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ-ಶತಕವಿಗೋಷ್ಠಿ, ಸಂಜೆ 5ರಿಂದ ನೃತ್ಯ ಸಂಭ್ರಮ, 5.30ರಿಂದ ಸುಗಮ ಸಂಗೀತ ಗಾಯನ, 6.30ಕ್ಕೆ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ, 7ಕ್ಕೆ ನಾಟ್ಯಾರ್ಚನೆ, 7.45ರಿಂದ ಸಾಂಸ್ಕೃ ತಿಕ ಕಲಾ ವೈಭವ, ಕಲಾವಿದರ ಕಲರವ, 9ಕ್ಕೆ ಗೀತಾಗಾಯನ, 9.30ರಿಂದ ಜಾನಪದ ಕಲಾ ಸಂಭ್ರಮ, 10ರಿಂದ ಜೋಗಿ ಪದ ಸಂಭ್ರಮ, 10.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವ. ನಾಳೆ ಬೆಳಿಗ್ಗೆ 9ಕ್ಕೆ ಸಮೂಹ ಭಜನಾ ಸಂಕೀರ್ತನಾ ಗಾಯನ, 10ಕ್ಕೆ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವ, ಕೇರಳ-ಕರ್ನಾಟಕ ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಮಕ್ಕಳ ಶತಕವಿ ಗೋಷ್ಠಿ ನಡೆಯಲಿರುವುದು. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಸಿ.ಎನ್. ಅಶೋಕ್ ಉದ್ಘಾಟಿಸುವರು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಇದರ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸುವರು. ಹಲವರು ಗಣ್ಯರು ಉಪಸ್ಥಿತರಿರುವರು. ಬಳಿಕ ಗಡಿನಾಡು-ಹೊರನಾಡು-ಅನಿವಾಸಿ ಭಾರತೀಯ ಕನ್ನಡಿಗರು-ಕನ್ನಡ ಸಂಘಟನೆಗಳ ಭಾಷಾ ಬಾಂಧವ್ಯ-ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ.
ಅಪರಾಹ್ನ ೩ಕ್ಕೆ ಕೇರಳ ರಾಜ್ಯ ೮ನೇ ಕನ್ನಡ ಸಮ್ಮೇಳನ, ಕೇರಳ-ಕರ್ನಾಟಕ ಉತ್ಸವದ ಸಮಾರೋಪ-ಪ್ರಶಸ್ತಿ ಪ್ರದಾನ ನಡೆಯಲಿರುವುದು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯಿಲಿ ಮುಖ್ಯ ಅತಿಥಿಯಾಗಿರುವರು. ಸಮ್ಮೇಳನ ಸರ್ವಾಧ್ಯಕ್ಷ ಜಗದ್ಗುರು ಶ್ರೀ ಡಾ. ನಿಶ್ಚಲಾನಂದನಾಥ ಮಹಾಸ್ವಾಮಿ ಆಶೀರ್ವಚನ ನೀಡುವರು. ಸಂಜೆ 6.30ರಿಂದ ‘ಸಾಕ್ಷಿಕಲ್ಲು’ ನಾಟಕ, ಸಾಂಸ್ಕೃತಿಕ ಕಲಾ ಪ್ರದರ್ಶನ ನಡೆಯಲಿದೆ.






