ಬಾಹ್ಯಾಕಾಶ ಗಗನಯಾನ್ ಕ್ಯಾಪ್ಟನ್ ತನ್ನ ಪತಿ ಎಂದು ಘೋಷಿಸಿದ ನಟಿ ಲೆನಾ

ಪಾಲಕ್ಕಾಡ್: ನಾನು ವಿವಾಹಿ ತೆಯಾಗಿದ್ದೇನೆ ಎಂದು ಮಲೆಯಾಳ ಸಿನಿಮಾ ನಟಿ ಲೆನಾ ಬಹಿರಂಗಪಡಿ ಸಿದ್ದಾರೆ. ಭಾರತೀಯ ಬಾಹ್ಯಾಕಾಶ ಗುರಿಯಾದ ಗಗನಯಾನ್‌ನ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ಪತಿಯೆಂದು ಲೆನಾ ಇನ್‌ಸ್ಟಾ ಗ್ರಾಮ್‌ನಲ್ಲಿ ಬಹಿರಂಗಪಡಿಸಿದ್ದಾರೆ.

೨೦೨೪ ಜನವರಿ ೨೭ರಂದು ನಮ್ಮ ವಿವಾಹ ಪರಂಪರಾಗತ ರೀತಿಯಲ್ಲಿ ನಡೆದಿರುವುದಾಗಿಯೂ ನಟಿ ಪ್ರಕಟಿಸಿದ್ದಾರೆ. ಪ್ರಧಾನಮಂತ್ರಿ ಬಾಹ್ಯಾಕಾಶ ಪ್ರಯಾಣಿಕರನ್ನು ಔಪಚಾರಿಕವಾಗಿ ಘೋಷಿಸಿದ ಬಳಿಕ ನಟಿ ಲೆನಾ ಈ ವಿಷಯವನ್ನು ಪ್ರಕಟಿಸಿದ್ದಾರೆ. ಪ್ರಧಾನಮಂತ್ರಿಯ ಘೋಷಣೆ ಬರಲು ತಾನು ಕಾಯು ತ್ತಿದ್ದೆ ಎಂದು ಆಕೆ ತಿಳಿಸಿದ್ದಾರೆ. ಪ್ರಧಾನಮಂತ್ರಿಯ ಘೋಷಣೆ ನಮ್ಮ ದೇಶದ ಹಾಗೂ ಕೇರಳಕ್ಕೂ ವ್ಯಕ್ತಿಪರವಾಗಿ ತನಗೂ ಅತ್ಯಂತ ಹೆಮ್ಮೆಯ ನಿಮಿಷವೆಂದು ಆಕೆ ತಿಳಿಸಿದ್ದಾರೆ. ಕುಳಂಙಾಡ್ ವಿಳಂಬಿಲ್ ಬಾಲಕೃಷ್ಣನ್- ಪ್ರಮೀಳಾ ದಂಪತಿ ಗಳ ಪುತ್ರನಾದ ಬಾಲಕೃಷ್ಣನ್ ೧೯೯೯ರಲ್ಲಿ ಭಾರತೀಯ ವಾಯುಸೇನೆಯಲ್ಲಿ ಔದ್ಯೋಗಿಕವಾಗಿ ಸೇರಿದ್ದರು.

Leave a Reply

Your email address will not be published. Required fields are marked *

You cannot copy content of this page