ತ್ಯಾಜ್ಯ ನೀರನ್ನು ಪಂಚಾಯತ್‌ನ ಚರಂಡಿಗೆ ಹರಿಯಬಿಟ್ಟ ಹೋಟೆಲ್‌ಗೆ ೨೦,೦೦೦ ರೂ. ದಂಡ
ಕುಂಬಳೆ: ತ್ಯಾಜ್ಯ ನೀರನ್ನು ಪಂ ಚಾಯತ್‌ನ ಚರಂಡಿಗೆ ಹರಿಯಬಿಟ್ಟ ಹೋಟೆಲ್‌ಗೆ ಪಂಚಾಯತ್ ಅಧಿಕಾರಿಗಳು ೨೦ ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ಕುಂಬಳೆ ಪೇಟೆಯ ಪೊಲೀಸ್ ಠಾಣೆ ರಸ್ತೆಯಲ್ಲಿರುವ ಸುಧೀಂದ್ರ ಹೋಟೆಲ್‌ಗೆ ದಂಡ ವಿಧಿಸಲಾಗಿದೆ. ಈ ಹೋಟೆಲ್‌ನಿಂದ ತ್ಯಾಜ್ಯ ನೀರನ್ನು ನಳಿಗೆಗಳ ಮೂಲಕ ಪಂಚಾಯತ್‌ನ ಚರಂಡಿಗೆ ಹರಿಯಬಿಟ್ಟಿರುವುದಾಗಿ ದೂರಲಾಗಿದೆ. ಇದರಿಂದ ಚರಂಡಿಯಲ್ಲಿ ತ್ಯಾಜ್ಯ ನೀರು ತುಂಬಿ ಅದು ಸ್ಲ್ಯಾಬ್‌ನ ಎಡೆಯಲ್ಲಾಗಿ ಹೊರಗೆ ಹೋಗಿದ್ದು, ಇದರಿಂದ ಪರಿಸರ ಪ್ರದೇಶದಲ್ಲಿ ದುರ್ನಾತಕ್ಕೆ ಕಾರಣವಾಗಿತ್ತೆನ್ನಲಾಗಿದೆ. ಈ ಬಗ್ಗೆ ಸ್ಥಳೀಯರು ಆರೋಗ್ಯ ಅಧಿಕಾರಿ ಗಳಿಗೂ, ಫುಡ್ ಸೇಫ್ಟಿ ಅಧಿಕಾರಿಗ ಳಿಗೂ ದೂರು ನೀಡಿದ್ದರು. ಆದರೆ ಅವರ ಭಾಗದಿಂದ ಕ್ರಮ ಉಂಟಾಗಿಲ್ಲವೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪಂಚಾಯತ್ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಇದರಂತೆ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಗಮನಿಸಿದ ಬಳಿಕ ಹೋಟೆಲ್‌ಗೆ ದಂಡ ವಿಧಿಸಿದ್ದಾರೆ. ಹೋಟೆಲ್‌ನ ತ್ಯಾಜ್ಯ ನೀರನ್ನು ತುಂಬಿಸಿಡಲು ಸ್ವಂತವಾಗಿ ಹೊಂಡ ನಿರ್ಮಿಸಬೇಕೆಂದೂ, ಅಲ್ಲದೆ ಪಂಚಾ ಯತ್‌ನ ಚರಂಡಿಗೆ ಹರಿಯಬಿಟ್ಟರೆ ಹೋಟೆಲ್‌ನ ಲೈಸನ್ಸ್ ರದ್ದುಪಡಿಸುವುದಾಗಿ ಪಂಚಾಯತ್ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ.