ಯುವಕನಿಗೆ ಹಲ್ಲೆ: ಓರ್ವನ ವಿರುದ್ಧ ಕೇಸು
ಮುಳಿಯಾರು: ಮುಳಿಯಾರಿಗೆ ಸಮೀಪದ ಇರಿಯಣ್ಣಿಯಲ್ಲಿ ಅರಣ್ಯ ಪಕ್ಕದ ಎನ್‌ಎಚ್ ರಸ್ತೆಯಲ್ಲಿ ಮಾರ್ಚ್ ೮ರಂದು ಬೈಕ್‌ನ ಜೊತೆ ನಿಂತಿದ್ದ ಕುತ್ತಿಕ್ಕೋಲ್ ಬೇತೂರುಪಾರ ಕಾವಿಂಡಡಿ ಹೌಸ್‌ನ ಜಿತೇಶ್ ಕೆ.ಎಚ್ (೨೨)ರ ಮೇಲೆ ಹಲ್ಲೆ ನಡೆಸಿದ ದೂರಿನಂತೆ ಮೂವರ ವಿರುದ್ಧ ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಳಿಯಾರು ನಿವಾಸಿಗಳಾದ ರಾಜೇಶ್, ಸನಲ್, ಗೋಪು ಕುಟ್ಟನ್ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಪಿಕಪ್ ವಾಹನದಲ್ಲಿ ಬಂದ ಆರೋಪಿಗಳು ತನ್ನನ್ನು ಬೈದು ಕೈ ಮತ್ತು ಹೆಲ್ಮೆಟ್‌ನಿಂದ ಹೊಡೆದು ಹಲ್ಲೆ ನಡೆಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಜಿತೇಶ್ ದೂರಿದ್ದಾರೆ.