ಹಣ ವ್ಯವಹಾರ ತರ್ಕದಿಂದ ಘರ್ಷಣೆ: ಕೋಳಿ ಅಂಗಡಿ ಮಾಲಕ ಸಹಿತ ಇಬ್ಬರಿಗೆ ಇರಿತ; ಆರೋಪಿಗಾಗಿ ಶೋಧ
ಕುಂಬಳೆ: ಹಣದ ವ್ಯವಹಾರಕ್ಕೆ ಸಂಬಂಧಿಸಿ ಉಂಟಾದ ತರ್ಕದಿಂದ ಘರ್ಷಣೆ ನಡೆದಿದ್ದು, ಇದರಿಂದ ಇಬ್ಬರು ಇರಿತದಿಂದ ಗಾಯಗೊಂ ಡಿದ್ದಾರೆ. ಕುಂಬಳೆ ಮಾರ್ಕೆಟ್ ರೋಡ್‌ನಲ್ಲಿ ಕೋಳಿ ಅಂಗಡಿ ನಡೆಸುವ ಮಾಟೆಂಗುಳಿ ನಿವಾಸಿ ಅನ್ವರ್ ಕೆ.ಎ(೪೪), ಕಂಚಿಕಟ್ಟೆ ನಿವಾಸಿ ಇಬ್ರಾಹಿಂ ಕೆ.ಎ(೪೩) ಎಂಬಿವರು ಇರಿತದಿಂದ ಗಾಯಗೊಂಡಿದ್ದಾರೆ. ಇವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇದೇ ವೇಳೆ ಈ ಇರಿತ ಪ್ರಕರಣಕ್ಕೆ ಸಂಬಂಧಿಸಿ ಶಾಂತಿಪಳ್ಳದ ಹಾರಿಫ್ ಎಂಬಾತನ ವಿರುದ್ಧ ಕುಂಬಳೆ ಪೊಲೀಸರು ಅಂಗಡಿಗೆ ನುಗ್ಗಿ ಹಲ್ಲೆ, ಹತ್ಯೆಯತ್ನ ಕೇಸು ದಾಖಲಿ ಸಿಕೊಂಡಿದ್ದಾರೆ. ಈತ ಇದೀಗ ತಲೆಮರೆಸಿಕೊಂಡಿದ್ದು, ಈತನಿಗಾಗಿ ಶೋಧ ನಡೆಸಲಾಗುತ್ತಿದೆ ಯೆಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ಸಂಜೆ ೬ ಗಂಟೆ ವೇಳೆ ಅನ್ವರ್‌ರ ಕೋಳಿ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಶಾಂತಿಪಳ್ಳದ ಹಾರಿಫ್‌ನಿಂದ ಅನ್ವರ್‌ಗೆ ಹಣ ಸಿಗಲು ಬಾಕಿಯಿದೆಯೆಂದು ಹೇಳಲಾ ಗುತ್ತಿದೆ. ನಿನ್ನೆ ಸಂಜೆ ಅಂಗಡಿ ಮುಂದೆ ನಡೆದು ಹೋಗುತ್ತಿದ್ದ ಹಾರಿಫ್‌ನಲ್ಲಿ ಅನ್ವರ್ ಹಣ ಕೇಳಿದ್ದು, ಇದರಿಂದ ಅವರೊಳಗೆ ವಾಗ್ವಾದ ನಡೆದಿದೆ. ವಾಗ್ವಾದ ತೀವ್ರಗೊಂಡು ಅನ್ವರ್ ಹಾಗೂ ಹಾರಿಫ್ ಹೊಡೆದಾಡಿ ಕೊಂಡಿದ್ದಾರೆ. ಈ ವೇಳೆ ಅಂಗಡಿಯಲ್ಲಿದ್ದ ಕೋಳಿ ತುಂಡರಿಸುವ ಕತ್ತಿಯನ್ನು ತೆಗೆದು ಹಾರಿಫ್ ಯದ್ವಾತದ್ವಾ ಕಡಿದಿದ್ದಾನೆನ್ನಲಾಗಿದೆ. ಘಟನೆ ವೇಳೆ ಇಬ್ರಾಹಿಂ ಅಂಗಡಿ ಗೆ ತಲುಪಿದ್ದರು. ಅನ್ವರ್‌ನ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ತಡೆಯಲು ಇಬ್ರಾಹಿಂ ಯತ್ನಿ ಸಿದ್ದು, ಈ ವೇಳೆ ಅವರಿಗೂ ಇರಿತದಿಂದ ಗಾಯಗಳಾ ಗಿವೆ. ಅನ್ವರ್‌ರ ತಲೆ, ಕೈ, ಕಾಲಿಗೆ ಹಾ ಗೂ ಇಬ್ರಾಹಿಂರ ಕಾಲಿಗೆ ಇರಿತ ದಿಂದ ಗಂಭೀರ ಗಾಯಗಳಾಗಿವೆ.