ಸ್ವಂತ ಹಿತ್ತಿಲಿನಿಂದ ತೆಂಗಿನಕಾಯಿ ಕೊಯ್ಯಲು ತಡೆ: ಮೂರು ಪ್ರಕರಣ ದಾಖಲು
ಕಾಸರಗೋಡು: ನೀಲೇಶ್ವರ ಪಾಲಾಯಿಯಲ್ಲಿ ಎ.ಕೆ. ರಾಧಾ (೭೦) ಎಂಬವರ ಹಿತ್ತಿಲಿನಿಂದ ತೆಂಗಿನ ಕಾಯಿ ಕೊಯ್ಯುವುದನ್ನು ತಡೆಗಟ್ಟಿದ ದೂರಿನಂತೆ ನೀಲೇಶ್ವರ ಪೊಲೀಸರು ಮೂರು ಪ್ರಕರಣ ಗಳನ್ನು ದಾಖಲಿಸಿಕೊಂಡಿದ್ದಾರೆ.
ಹಿತ್ತಿಲ ಮಾಲಕಿ ರಾಧಾ, ಅವರು ಮಗಳು ಮತ್ತು ತೆಂಗಿನ ಕಾಯಿ ಕೊಯ್ಯುವ ಕಾರ್ಮಿಕ ನೀಡಿದ ದೂರಿನಲ್ಲಿ ಈ ಪ್ರಕರಣ ದಾಖಲಿಸಲಾಗಿದೆ. ಈ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಅಗತ್ಯದ ಸ್ಥಳ ಬಿಟ್ಟು ಕೊಡದ ಹೆಸರಲ್ಲಿ ೨೦೧೬ರಲ್ಲಿ ನೀಡಲಾದ ದೂರಿನಂತೆ ಕೇಸೊಂದು ದಾಖಲಿಸಲ್ಪಟ್ಟಿದೆ. ಅದರ ಹೆಸರಲ್ಲಿ ತನ್ನನ್ನು ಆಡಳಿತ ಪಕ್ಷದ ಕೆಲವು ಕಾರ್ಯಕರ್ತರು ತನ್ನ ಹಿತ್ತಿಲಿಗೆ ಪ್ರವೇಶಿಸದಂತೆ ಗಡಿಪಾರು ಮಾಡುವ ಆದೇಶ ಹೊರಡಿಸಿದ್ದರು. ತನ್ನ ಹಿತ್ತಿಲಿನಿಂದ ತೆಂಗಿನ ಕಾಯಿ ಕೊಯ್ಯ ಲೆಂದು ನಾನು ನಿನ್ನೆ ಬೆಳಿಗ್ಗೆ ಮಗಳ ಸಹಿತ ಹೋದಾಗ ಒಂದು ಗುಂಪು ನಮ್ಮನ್ನು ತಡೆದು ನಿಲ್ಲಿಸಿ, ನಮ್ಮನ್ನು ಮತ್ತು ತೆಂಗಿನಕಾಯಿ ಕಾರ್ಮಿಕನನ್ನು ತೀವ್ರವಾಗಿ ನಿಂದಿಸಿ ತೆಂಗಿನಕಾಯಿ ಕೊಯ್ಯಲು ತಡೆಯೊಡ್ಡಿದರೆಂದು ರಾಧಾ ದೂರಿದ್ದಾರೆ.