ಅಸಂಘಟಿತ ಕಾರ್ಮಿಕರ ಕ್ಷೇಮ ಯೋಜನೆಯಸೌಲಭ್ಯಗಳನ್ನು ಪರಿಷ್ಕರಿಸಬೇಕು-ಬಿಎಂಎಸ್
ಕಾಸರಗೋಡು: ಕೇರಳದ ಅಸಂಘಟಿತ ಕಾರ್ಮಿಕರ ಕ್ಷೇಮನಿಧಿ ಬೋರ್ಡ್ನಲ್ಲಿ ಸದಸ್ಯತ್ವ ಪಡೆದುಕೊಂಡ ಕಾರ್ಮಿಕರು ಪ್ರತಿ ತಿಂಗಳು ಮೂರು ರೂ. ಅಂಶಾದಾಯ ಪಾವತಿಸುವಾಗ ೫೦ ರೂ. ಪ್ರತಿ ತಿಂಗಳು ಅಂಶಾದಾಯ ಪಾವತಿಸುವ ನಿರ್ಮಾಣ ಕಾರ್ಮಿಕರ ಕ್ಷೇಮನಿಧಿ ಬೋರ್ಡ್ ನೀಡುವ ಸೌಲಭ್ಯದ ಅರ್ಧದಷ್ಟು ಕೂಡಾ ನೀಡಲು ಸಾಧ್ಯವಾಗದಿರುವುದು ಕಾರ್ಮಿಕರನ್ನು ವಂಚಿಸುವುದಕ್ಕೆ ಸಮಾನವೆಂದು ಅಸಂಘಟಿತ ವಲಯದಲ್ಲೂ ಆಕರ್ಷಕ ಸೌಲಭ್ಯಗಳನ್ನು ಕಾರ್ಮಿಕರಿಗೆ ನೀಡುವ ತುರ್ತು ಕ್ರಮ ಕೈಗೊಳ್ಳಬೇಕೆಂದು ಕೇರಳ ಪ್ರದೇಶ್ ಅಸಂಘಟಿತ ಕಾರ್ಮಿಕರ ಫೆಡರೇಶನ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎನ್. ವಿಜಯನ್ ಆಗ್ರಹಿಸಿದರು. ನಾಮಮಾತ್ರವಾಗಿ ಚಿಕಿತ್ಸಾ ಸಹಾಯ ನೀಡುತ್ತಿರುವ ಈ ವಿಭಾಗದ ಕಾರ್ಮಿಕರನ್ನು ಆಯುಷ್ಮಾನ್ ಭಾರತ್ ಯೋಜನೆಯ ವ್ಯಾಪ್ತಿಯಲ್ಲಿ ಸೇರಿಸಲು ಬೋರ್ಡ್ ಹಾಗೂ ಸರಕಾರ ಸಿದ್ಧವಾಗಬೇಕೆಂದು ಅವರು ಆಗ್ರಹಿಸಿದರು. ಕಾಸರಗೋಡು ಜಿಲ್ಲಾ ಅಸಂಘಟಿತ ಕಾರ್ಮಿಕರ ಸಂಘ (ಬಿಎಂಎಸ್) ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡುತ್ತಿ ದ್ದರು. ಅಧ್ಯಕ್ಷ ಎಂ.ಕೆ. ರಾಘವನ್ ಅಧ್ಯಕ್ಷತೆ ವಹಿಸಿದರು. ಪೊಯಿನಾಚಿ ಸರಸ್ವತಿ ವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ಸುನಿಲ್ ಕುಮಾರ್ ಶುಭಕೋರಿದರು. ಲತಾ ದಾಮೋದರನ್ ಚಟುವಟಿಕಾ ವರದಿ ಮಂಡಿಸಿದರು. ಕೋಶಾಧಿಕಾರಿ ಅವಿನಾಶ್ ಕೂಡ್ಲು ಆಯ-ವ್ಯಯ ಲೆಕ್ಕ, ಕೆ. ಬಾಬು ಮೋನ್ ಠರಾವು ಮಂಡಿಸಿದರು. ಸಂತೋಷ್ ಕಿನಾನೂರ್ ಬೆಂಬಲಿಸಿದರು. ಜಿಲ್ಲಾ ಉಪಾಧ್ಯಕ್ಷೆ ಗೀತಾ ಬಾಲಕೃಷ್ಣನ್ ಸಂಘಟನಾ ಚರ್ಚೆಗೆ ನೇತೃತ್ವ ನೀಡಿದರು. ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ಪ್ರದೀಪ್ ಕೋಡೋತ್ ನೂತನ ಪದಾಧಿಕಾರಿಗಳನ್ನು ಘೋಷಿಸಿದರು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಸಮಾರೋಪ ಭಾಷಣ ನಡೆಸಿದರು. ಸುರೇಶ್ ದೇಳಿ, ಕೃಷ್ಣನ್ ಟಿ ಮಾತನಾಡಿದರು. ನೂತನ ಸಮಿತಿಗೆ ಅಧ್ಯಕ್ಷರಾಗಿ ಎಂ.ಕೆ. ರಾಘವನ್, ಉಪಾಧ್ಯಕ್ಷರಾಗಿ ರವಿ ಕೋಳಿಯೂರು, ಲತಾ ದಾಮೋದರನ್ ಕೊಟ್ಟೋಡಿ, ಶಿವನ್ ಪುದಿಯಕಂಡ, ಅಪ್ಪೋಜಿ ಮುಳ್ಳೇರಿಯ, ಪ್ರಧಾನ ಕಾರ್ಯ ದರ್ಶಿಯಾಗಿ ಕೆ.ಎ. ಶ್ರೀನಿವಾಸನ್, ಜೊತೆಕಾರ್ಯದರ್ಶಿಗಳಾಗಿ ಅನೀಶ್ ಪರಕ್ಲಾಯಿ, ಸಂತೋಷ್ ಪುದುಕುನ್ನು, ತಾರಾನಾಥ್ ನೀರ್ಚಾಲ್, ಮನೋಜ್ ಜೆ.ಪಿ ನಗರ್, ಭಾಸ್ಕರನ್ ಪೊಯಿನಾಚಿ, ಕೋಶಾಧಿಕಾರಿಯಾಗಿ ಅವಿನಾಶ್ ಕೆ ಕೂಡ್ಲು ಆಯ್ಕೆಯಾದರು. ಕೆ.ಎ. ಶ್ರೀನಿವಾಸನ್ ಸ್ವಾಗತಿಸಿ, ಭಾಸ್ಕರನ್ ವಂದಿಸಿದರು.