ಕಾನ್ವೆಂಟ್‌ಗೆ ಕಲ್ಲೆಸೆತ: ಮಹಿಳೆಯರಿಗೆ ಹಲ್ಲೆ

ಕಣ್ಣೂರು: ಕಾನ್ವೆಂಟ್ ಹಿತ್ತಿಲಿಗೆ ನುಗ್ಗಿದ ತಂಡ ಮಹಿಳೆಯರು, ಅನಾಥಾಶ್ರಮ ವಾಸಿಗಳ ಸಹಿತ ಹಲ್ಲೆಗೈದು ಕಿಟಿಕಿ ಗಾಜುಗಳನ್ನು ಹಾನಿಗೊಳಿಸಿದ ಬಗ್ಗೆ ದೂರಲಾಗಿದೆ. ಮದರ್ ಸುಪೀರಿಯರ್ ಸಿಸ್ಟರ್ ಜ್ಯೋತ್ಸ್ನಾ ನೀಡಿದ ದೂರಿನಂತೆ ತಳಿಪರಂಬ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಿನ್ನೆ ರಾತ್ರಿ ಎರಡು ಬಾರಿಯಾಗಿ ತಳಿಪರಂಬ ಪುಷ್ಪಗಿರಿ ಗಾಂಧಿನಗರ ರಸ್ತೆಯ ಫಾತಿಮ ಮಾತಾ ಕಾನ್ವೆಂಟ್ ವಿರುದ್ಧ ಕಲ್ಲೆಸೆತ ಉಂಟಾಗಿದೆ. ಪ್ರಥಮವಾಗಿ ರಾತ್ರಿ ೯.೩೦ಕ್ಕೆ  ಆಕ್ರಮಣ ಉಂಟಾಗಿತ್ತು. ಮೂರು ಮಂದಿ ತಂಡದಲ್ಲಿದ್ದರೆನ್ನ ಲಾಗಿದೆ. ಈ ತಂಡ ಅವಾಚ್ಯ ಶಬ್ದಗಳಿಂದ ಬೈದು ಕಲ್ಲೆಸೆದು ಹಾನಿಗೊಳಿಸಿರುವುದಾಗಿ ಹೇಳಲಾಗುತ್ತಿದೆ. ಬಳಿಕ ರಾತ್ರಿ ೧೧.೩೦ಕ್ಕೆ ತಂಡ ಮತತೆ ಹಿತ್ತಿಲಿಗೆ ನುಗ್ಗಿ ಕಲ್ಲೆಸೆದು ಹಾನಿಗೊಳಿಸಿರುವುದಾಗಿ ಸಿಸ್ಟರ್ ನೀಡಿದ ದೂರಿನಲ್ಲಿ ಹೇಳಲಾಗಿದೆ.

You cannot copy contents of this page