ಶಬರಿಮಲೆಯಲ್ಲಿ ವಿಷು ಪೂಜೆ 11ರಿಂದ

ಶಬರಿಮಲೆ: ವಿಷು ಪೂಜೆಯ ಅಂಗವಾಗಿ ಶಬರಿಮಲೆ ಶ್ರೀ ಅಯ್ಯಪ್ಪ ಕ್ಷೇತ್ರ ಬಾಗಿಲು ಎ.೧೦ರಂದು ತೆರೆಯಲಾಗುವುದು. ೧೧ರಿಂದ ೧೮ರವರೆಗೆ ಪ್ರತಿ ದಿನ ಬೆಳಿಗ್ಗೆ ತುಪ್ಪಾಭಿಷೇಕ ನಡೆಯಲಿರುವುದು. ಮುಂಜಾನೆ ೫.೩೦ರಿಂದ ಅಭಿಷೇಕ ಆರಂಭಗೊಳ್ಳುವುದು. ೧೦ರಂದು ಸಂಜೆ ೫ಕ್ಕೆ ಮುಖ್ಯ ಅರ್ಚಕ ಪಿ.ಎಸ್. ಮಹೇಶ್ ಕ್ಷೇತ್ರದ ಬಾಗಿಲು ತೆರೆಯುವರು. ೧೪ರಂದು ಮುಂಜಾನೆ ೪ರಿಂದ ೭ ಗಂಟೆವರೆಗೆ ವಿಷುಕಣಿ ದರ್ಶನವಿರುವುದು. ತಂತ್ರಿ ಹಾಗೂ ಮುಖ್ಯ ಅರ್ಚಕರು ಭಕ್ತರಿಗೆ ವಿಷು ಕಾಣಿಕೆ ನೀಡುವರು. ೧೩ರಂದು ರಾತ್ರಿ ಅತ್ತಾಳ ಪೂಜೆ ಬಳಿಕ ಗರ್ಭಗುಡಿಯಲ್ಲಿ ವಿಷುಕಣಿ ಸಿದ್ಧಪಡಿಸಿ ಬಾಗಿಲು ಮುಚ್ಚಲಾಗುವುದು.  ೧೪ರಂದು ಮುಂಜಾನೆ ೪ಕ್ಕೆ ಕ್ಷೇತ್ರ ಬಾಗಿಲು ತೆರೆದ ಬಳಿಕ ಗರ್ಭಗುಡಿಯ ದೀಪ ಬೆಳಗಿಸಿ ಮೊದಲು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ನಂತರ ಭಕ್ತರಿಗಾಗಿ ವಿಷುಕಣಿ ಕಾಣಲು ಅವಕಾಶವಿ ರುವುದು. ಪೂಜೆಗಳು ಮುಗಿದು ೧೮ರಂದು ರಾತ್ರಿ ೧೦ಕ್ಕೆ ಬಾಗಿಲು ಮುಚ್ಚಲಾಗುವುದು.

RELATED NEWS

You cannot copy contents of this page