ಬತ್ತಿದ ಉಪ್ಪಳ ಹೊಳೆ: ಕುಡಿಯುವ ನೀರು ವಿತರಣೆ ಮೊಟಕು

ಕುಂಬಳೆ: ಕುಂಬಳೆ ಪಿಎಚ್ ಸೆಕ್ಷನ್ ವ್ಯಾಪ್ತಿಯ ವರ್ಕಾಡಿ, ಮಂಜೇಶ್ವರ ಎಂಬೀ ಪಂ

ಚಾಯತ್‌ಗಳಲ್ಲಿ ಕುಡಿಯುವ ನೀರು ವಿತರಣೆ ನಡೆಸುವ ವರ್ಕಾಡಿ ಕುಡಿಯುವ ನೀರು ಯೋಜನೆಯ ಮೂಲವಾದ ಉಪ್ಪಳ ಹೊಳೆ ಯೋಜನೆ ಪ್ರದೇಶದಲ್ಲಿ ಪೂರ್ಣ ವಾಗಿ ನೀರು ಬತ್ತಿದ ಕಾರಣ ಪಂಪಿಂಗ್ ನಡೆಸಲು ಸಾಧ್ಯವಾಗದು. ಇದರಿಂದಾಗಿ ವರ್ಕಾಡಿ ಪಂಚಾ ಯತ್‌ನಲ್ಲೂ, ಮಂಜೇಶ್ವರ ಪಂಚಾಯತ್‌ನ ಕುಂಜತ್ತೂರು, ಚೌಕಿ, ಪಳ್ಳಂ, ಜಿಪಿಎಂ ಕಾಲೇಜಿನ ಸಮೀಪ, ಮಹಾಲಿಂಗೇಶ್ವರ, ಗೇರುಕಟ್ಟೆ ಎಂಬೀ ಪ್ರದೇಶಗಳಲ್ಲಿ ಕುಡಿಯುವ ನೀರು ವಿತರಣೆ ಮೊಟಕುಗೊಳ್ಳಲಿದೆ. ಫಲಾನುಭವಿಗಳು ಸೂಕ್ತ ಮುಂಜಾ ಗ್ರತೆಗಳನ್ನು ಕೈಗೊಳ್ಳಬೇಕೆಂದು ಕೇರಳ ವಾಟರ್ ಅಥೋರಿಟಿ ಕಾಸರಗೋಡು ಡಬ್ಲ್ಯುಎಸ್‌ಪಿ ಸಬ್ ಡಿವಿಶನ್ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಳಿಸಿದ್ದಾರೆ.

You cannot copy contents of this page