ರಾಮನವಮಿಯಿಂದ ಹನುಮಜಯಂತಿ ತನಕ ಭಜನಾ ಕಾರ್ಯಕ್ರಮ

ಕಾಸರಗೋಡು: ವಿಶ್ವಹಿಂದೂ ಪರಿಷತ್‌ನ ಕಾಸರಗೋಡು ಸಮಿತಿ ನೇತೃತ್ವದಲ್ಲಿ ನಗರದ ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ರಾಮನವಮಿಯನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು. ವಿಎಚ್‌ಪಿ ನೇತಾರರಾದ ಎ.ಟಿ. ನಾಯ್ಕ, ವೆಂಕಟ್ರಮಣ ಹೊಳ್ಳ,  ಲಕ್ಷ್ಮೀಕಾಂತ, ರಾಮಕೃಷ್ಣ ಹೊಳ್ಳ, ರವಿ ಕೇಸರಿ ಉಪಸ್ಥಿತರಿದ್ದರು.

ರಾಮನವಮಿಯ ದಿನದಿಂದ ಹನುಮಜಯಂತಿ (ಎ. ೨೩)ರ ತನಕ ಪ್ರತಿದಿನ ಸಂಜೆ 6.30ರಿಂದ ರಾತ್ರಿ 8 ಗಂಟೆ ತನಕ ವಿವಿಧ ಸಂಘಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಎಲ್ಲರೂ ಭಾಗವಹಿಸಬೇಕೆಂದು ವಿಎಚ್‌ಪಿ ವಿನಂತಿಸಿಕೊಂಡಿದೆ.

You cannot copy contents of this page