ನೆಲ್ಲಿಕುಂಜೆಯಲ್ಲಿ ಎರಡು ಆಡುಗಳನ್ನು ಕಚ್ಚಿ ಕೊಂದ ಬೀದಿನಾಯಿಗಳು

ಕಾಸರಗೋಡು: ನಗರದ ನೆಲ್ಲಿಕುಂಜೆಯಲ್ಲಿ ಬೀದಿ ನಾಯಿಗಳ ಉಪಟಳ ಇತ್ತೀಚೆಗಿನಿಂದ ಹೆಚ್ಚಾಗುತ್ತಿದೆ. ಬೀದಿನಾಯಿಗಳ ಗುಂಪೊಂದು ಎರಡು ಆಡುಗಳನ್ನು ಕಚ್ಚಿ ಕೊಂದಿದೆ. ನೆಲ್ಲಿಕುಂಜೆ ಬಂಗಾರ್‌ಗುಡ್ಡೆ ಶಾಹಿಲಾ ಎಂಬವರ ಆಡುಗಳಾಗಿವೆ ಇವು. ಇವರು ತಮ್ಮ ಆಡುಗಳನ್ನು  ಮೇಯಲು ಬಿಟ್ಟಿದ್ದರು. ಆಡುಗಳು ಅಲ್ಲೇ ಪಕ್ಕದ  ಕುದ್ರು ಬಯಲಿನಲ್ಲಿ ಹುಲ್ಲು ಮೇಯುತ್ತಿದ್ದಾಗ ಅಲ್ಲಿಗೆ ಬಂದ ಬೀದಿ ನಾಯಿಗಳ ಗುಂಪೊಂದು ಆಡುಗಳನ್ನು ಕಚ್ಚಿ ಅಲ್ಲೇ ಕೊಂದು ಹಾಕಿವೆ. ಈ ಪ್ರದೇಶದಲ್ಲಿ ಬೀದಿ ನಾಯಿಗಳ ಕಾಟ ಇತ್ತೀಚೆಗಿನ ಕೆಲವು ದಿನಗಳಿಂದ ಮಿತಿಮೀರತೊಡಗಿದೆ. ಇದು ಜಾನುವಾರುಗಳಿಗೆ  ಮಾತ್ರವಲ್ಲ ಈ ಪ್ರದೇಶದ ಜನರಿಗೂ ಒಂದು ದೊಡ್ಡ ಬೆದರಿಕೆಯಾಗಿ ತಲೆಯೆತ್ತಿ ದೆಯೆಂದು ಪ್ರದೇಶವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

You cannot copy contents of this page