ಪತ್ನಿಯನ್ನು ಕೊಠಡಿಯೊಳಗೆ ಕೂಡಿಹಾಕಿ ಪತಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಪೆರ್ಲ: ಪತ್ನಿಯನ್ನು ಬೆಡ್‌ರೂಂ ನೊಳಗೆ ಕೂಡಿಹಾಕಿದ ಬಳಿಕ ಪತಿ ಮನೆಯ ವರಾಂಡದಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.
ಮುಳ್ಳೇರಿಯದ ಸ್ಟುಡಿಯೋ ವೊಂದರ ಫೋಟೋಗ್ರಾಫರ್ ಆಗಿರುವ ಪೆರ್ಲ ಉಕ್ಕಿನಡ್ಕ ಮೆಡಿಕಲ್ ಕಾಲೇಜು ಬಳಿಯ ಕಾರ್ಯಾಡು ನಿವಾಸಿ ಕೆ. ಪ್ರವೀಣ್ (22) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ.
ನಿನ್ನೆ ರಾತ್ರಿ 12 ಗಂಟೆ ವೇಳೆ ಘಟನೆ ನಡೆದಿದೆ. ಪ್ರವೀಣ್ ಹಾಗೂ ಮನೆಯ ವರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ತೆರಳಿದ್ದರು. ಆದರೆ ಪ್ರವೀಣರ ಪತ್ನಿ ಪೂಜೆಗೆ ತೆರಳಿರಲಿಲ್ಲ. ಪೂಜೆ ನಡೆಯುತ್ತಿದ್ದಂತೆ ಪತ್ನಿಯನ್ನು ಕರೆದುಕೊಂಡು ಬರುವುದಾಗಿ ತಿಳಿಸಿ ಪ್ರವೀಣ್ ಅಲ್ಲಿಂದ ಮನೆಗೆ ತೆರಳಿದ್ದರೆನ್ನಲಾಗಿದೆ. ಆದರೆ ಅವರು ಮರಳಿ ಬಂದಿಲ್ಲ. ಪೂಜೆ ಮುಗಿದು ಮನೆಯವರು ಮರಳಿ ಬಂದಾಗ ಪ್ರವೀಣ್ ಮನೆಯ ವರಾಂಡದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪತ್ನಿ ಮಮತ ನಿದ್ರಿಸುತ್ತಿದ್ದ ಕೊಠಡಿಗೆ ಹೊರಗಿನಂದ ಮುಚ್ಚುಗಡೆಗೊಳಿಸಿದ ಸ್ಥಿತಿಯಲ್ಲಿತ್ತು. ಪ್ರವೀಣ್‌ರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಘಟನೆ ಬಗ್ಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ದಿ| ಆನಂದ-ಶಾರದ ದಂಪತಿಯ ಪುತ್ರನಾದ ಪ್ರವೀಣ ಪತ್ನಿ ಮಮತ, ಪುತ್ರಿ ತನ್ವಿಕ, ಸಹೋದರರಾದ ಪ್ರಶಾಂತ್, ಪ್ರಕಾಶ್, ಪ್ರದೀಪ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.