ಅಬ್ಬರದ ಪ್ರಚಾರ ಸಮಾಪ್ತಿ ವಿವಿಧೆಡೆ ಘರ್ಷಣೆ

ಕಾಸರಗೋಡು: ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರ ನಿನ್ನೆ ಸಂಜೆ ಸಮಾಪ್ತಿಗೊಂಡಿತು. ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ವಿವಿಧ ಪಕ್ಷಗಳು ಹಾಗೂ ಕಾರ್ಯಕರ್ತರು ಅಬ್ಬರದ ಪ್ರಚಾರ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಿದರು. ಇಂದು ನಿಶ್ಯಬ್ಧ ಪ್ರಚಾರಕಾರ್ಯದಲ್ಲಿ ವಿವಿಧ ಪಕ್ಷಗಳ ನೇತಾರರು, ಸ್ಪರ್ಧಿಗಳು ಸಕ್ರಿಯರಾಗಿದ್ದಾರೆ. ರಾಜ್ಯ ದ ೨೦ ಲೋಕಸಭಾ ಕ್ಷೇತ್ರಗಳಲ್ಲೂ ನಿನ್ನೆ ಸಂಜೆ ೬ ಗಂಟೆ ವೇಳೆ ಬಹಿರಂಗ ಪ್ರಚಾರ ಕೊನೆಗೊಂಡಿದೆ. ಪ್ರಚಾರ ಸಮಾಪ್ತಿ ಅಂಗವಾಗಿ ನಡೆದ ರೋಡ್ ಶೋದಲ್ಲಿ ಅಭ್ಯರ್ಥಿಗಳು ಕ್ರೇನ್, ಜೆಸಿಬಿ ಮೇಲೇರಿ ತಮ್ಮ ಸಂತಸ ವ್ಯಕ್ತಪಡಿಸಿರುವುದ ಕಂಡುಬಂದಿದೆ.

ಇದೇ ವೇಳೆ ಪ್ರಚಾರ ಸಮಾಪ್ತಿ ಯಾಗುತ್ತಿದ್ದಂತೆ ವಿವಿಧೆಡೆಗಳಲ್ಲಿ ಎಲ್‌ಡಿಎಫ್, ಯುಡಿಎಫ್, ಬಿಜೆಪಿ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದಿದೆ.

ಮತದಾನಕ್ಕೆ ಅಗತ್ಯವುಳ್ಳ ಸಾಮಗ್ರಿಗಳ ವಿತರಣೆ ಇಂದು  ಬೆಳಿಗ್ಗೆ ವಿವಿಧ ಕೇಂದ್ರಗಳಲ್ಲಿ ಆರಂಭಗೊಂಡಿದೆ.

RELATED NEWS

You cannot copy contents of this page