ಕೊಂಡೆವೂರು ಮಠಕ್ಕೆ ಶ್ರೀ ವಿಧುಶೇಖರ ಸ್ವಾಮೀಜಿ ಆಗಮನ 28ರಂದು
ಉಪ್ಪಳ: ಕೊಂಡೆವೂರು ಮಠಕ್ಕೆ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಈ ತಿಂಗಳ ೨೮ರಂದು ಆಗಮಿಸುವರು. ಅಂದು ಸಂಜೆ ೪ ಗಂಟೆಗೆ ಅವರು ಆಶೀರ್ವಚನ ನೀಡುವರು. ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಮಠದ ವತಿಯಿಂದ ಹಾಗೂ ವಿವಿಧ ಧಾರ್ಮಿಕ ಶ್ರದ್ಧಾಕೇಂದ್ರಗಳ ವತಿಯಿಂದ ಜರಗುವ ಕಾರ್ಯಕ್ರಮದಲ್ಲಿ ಸ್ವಾಮೀಜಿಯವರನ್ನು ಅಭಿನಂದಿಸಲಾಗುವುದು.