ಮದುವೆ ವೇಷದಲ್ಲಿ ಮತ ಚಲಾಯಿಸಿದ ಬಳಿಕ ಕಲ್ಯಾಣ ಮಂಟಪಕ್ಕೆ ತೆರಳಿದ ಸುಜಿತಾ

ಬದಿಯಡ್ಕ:  ಇಂದು ಮದುವೆ ಯಾಗಿ ದಾಂಪತ್ಯಕ್ಕೇರಲಿರುವ ಸುಜಿತಾ ಹಸೆಮಣೆಗೇರುವ ಮೊದಲು ಮದುವೆವೇಷದಲ್ಲಿ ಮೊದಲು ತಲುಪಿದ್ದು ಮತಗಟ್ಟೆಗೆ. ಸರದಿಯಲ್ಲಿ ನಿಂತು ಮತ ಚಲಾಯಿಸಿದ ಬಳಿಕ ಅವರು ಕಲ್ಯಾಣ ಮಂಟಪಕ್ಕೆ ತೆರಳಿದರು.

ಅಗಲ್ಪಾಡಿ ನಿವಾಸಿಗಳಾದ ಮೋಹನ ಪುರುಷ-ಜಯಂತಿ ದಂಪತಿಯ ಪುತ್ರಿ ಸುಜಿತಾ ಯು.ಎಂ. ಅವರ ವಿವಾಹವನ್ನು ಕರ್ನಾಟಕದ ಪುತ್ತೂರು ನರಿಮೊಗರು ನಿವಾಸಿ ಸಂತೋಷ್‌ರೊಂದಿಗೆ ಎಪ್ರಿಲ್  26ರಂದು ನಡೆಸಲು ಈ ಹಿಂದೆಯೇ ನಿರ್ಧರಿಸಲಾಗಿತ್ತು.  ಅನಂತರ ಲೋಕಸಭಾ ಚುನಾವಣೆ ಇದೇ ದಿನ ನಡೆಸುವುದಾಗಿ ಘೋಷಿಸಲಾಗಿದೆ. ಮೊದಲೇ ನಿರ್ಧರಿಸಿದ ಪ್ರಕಾರ ಮದುವೆಗಿರುವ ಸಿದ್ಧತೆಗಳನ್ನು ವಧು-ವರನ ಮನೆಯವರು ನಡೆಸಿದ್ದಾರೆ. ಇಂದು ಪುತ್ತೂರಿನಲ್ಲಿ ಮದುವೆ ನಡೆಯಲಿದೆ. ಪ್ರತಿಯೊಂದು ಮತವೂ ಅಮೂಲ್ಯವಾಗಿದೆಯೆಂದು ತಿಳಿದ ಸುಜಿತಾ ಇಂದು ಬೆಳಿಗ್ಗೆ ಅಗಲ್ಪಾಡಿಯ ಮತಗಟ್ಟೆ ನಂಬ್ರ ೮೨ರಲ್ಲಿ ಮತ ಚಲಾಯಿಸಿದ ಬಳಿಕ ಪುತ್ತೂರಿನ ಕಲ್ಯಾಣ ಮಂಟಪಕ್ಕೆ ತೆರಳಿದರು.

RELATED NEWS

You cannot copy contents of this page