ಸರದಿ ಸಾಲಿಲ್ಲ: ಬೂತ್ ಮುಚ್ಚುವುದಕ್ಕೂ ಮುಂಚಿತ ಮತದಾರರನ್ನು ಕಾದು ಕುಳಿತ ಪೋಲಿಂಗ್ ಅಧಿಕಾರಿಗಳು

ಕಾಸರಗೋಡು: ಲೋಕಸಭಾ ಚುನಾವಣೆ ಪ್ರಕ್ರಿಯೆಯಲ್ಲಿ ಮತದಾನ ಮಾಡಲು ಕೆಲವು ಕಡೆಗಳಲ್ಲಿ ರಾತ್ರಿ ವಿಳಂಬವಾಗಿಯೂ ಸರದಿ ಸಾಲು ಕಂಡು ಬಂದರೆ ಸರಿಯಾದ ಸಮಯಕ್ಕೆ ಮತದಾನವನ್ನು ಪೂರ್ತಿಗೊಳಿಸಿದ ಹಲವು ಬೂತ್‌ಗಳು ಜಿಲ್ಲೆಯಲ್ಲಿದೆ.

ಪಿಲಿಕುಂಜೆಯ ಕಾಸರಗೋಡು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಬೂತ್‌ಗಳ ಅಧಿಕಾರಿಗಳು ಸಂಜೆ ೬ಕ್ಕೆ ಮತದಾನವನ್ನು ನಿಲುಗಡೆಗೊಳಿಸುವು ದಕ್ಕಾಗಿ ಮತದಾರರನ್ನು ಕಾಯುತ್ತಿದ್ದರು. ೧೫೪,೧೫೫ ಎಂಬೀ ಎರಡು ಬೂತ್‌ಗಳು ಈ ಶಾಲೆಯಲ್ಲಿತ್ತು. ಮೊದಲ ಮತಗಟ್ಟೆಯಲ್ಲಿ ಒಟ್ಟು ೧೧೫೮ ಮತದಾರರಿದ್ದಾರೆ. ಅವರಲ್ಲಿ ೮೫೪ ಮಂದಿ ಸಂಜೆ ೫.೫೩ರ ಒಳಗೆ ಮತದಾನಗೈದಿದ್ದಾರೆ. ಬಳಿಕ ೬ ಗಂಟೆವರೆಗೆ ಅಧಿಕಾರಿಗಳು ಕಾದು ಕುಳಿತರು. ಈ ಮಧ್ಯೆ ಇನ್ಯಾರಾದರೂ ಮತದಾನ ಮಾಡಲು ತಲುಪುವರೋ ಎಂಬ ನಿರೀಕ್ಷೆಯೂ ಇತ್ತು. ೫.೫೯ ಆಗುವಾಗ ಪಿಲಿಕುಂಜೆಯ ಪಿ.ಸಿ. ಸುಜಿತ್ ಕುಮಾರ್ ತಲುಪಿದರು. ಚಾಲಕರಾಗಿದ್ದ ಇವರು ದೀರ್ಘದೂರ ಪ್ರಯಾಣ ಕಳೆದು ತಲುಪಲು ತಡವಾಗಿರುವುದಾಗಿ ತಿಳಿಸಿದರು. ೮೫೫ ಮಂದಿ ಮತದಾನ ಮಾಡಿದಾಗ ೭೩.೮೩ ಶೇಕಡಾ ಮತದಾನ ದಾಖಲಾಯಿತು.

೧೫೫ನೇ ಬೂತ್‌ನಲ್ಲಿ ೫.೩೦ಕ್ಕೆ ಕೊನೆಯ ಮತದಾರ ತಲುಪಿ ಮತದಾನ ಮಾಡಿದ್ದಾರೆ. ಅರ್ಧ ಗಂಟೆ ಉಳಿದಿದ್ದರೂ ಮತ್ತೆ ಯಾರೂ ಇಲ್ಲಿಗೆ ಮತದಾನಕ್ಕಾಗಿ ತಲುಪಿಲ್ಲ. ಒಟ್ಟು ಮತ ನೀಡಬೇಕಾಗಿದ್ದ ೭೭೫ ಮಂದಿಯಲ್ಲಿ ೫೬೬ ಮಂದಿ ಮತದಾನ ಮಾಡಿದರು. ೭೧.೦೧ ಶೇ. ಇಲ್ಲಿ ಮತದಾನ ದಾಖಲಾಗಿದೆ. ಈ ಪ್ರದೇಶದಿಂದ ಮನೆ ಬಿಟ್ಟು  ತೆರಳಿದವರು ಮತದಾರರ ಯಾದಿಯಲ್ಲಿರುವುದೇ  ಶೇಕಡಾವಾರು ಮತದಾನದಲ್ಲಿ ಕಡಿಮೆಯಾಗಲು ಕಾರಣವೆಂದು ಸ್ಥಳೀಯರು ತಿಳಿಸುತ್ತಾರೆ.

Leave a Reply

Your email address will not be published. Required fields are marked *

You cannot copy content of this page