ಪಾರೆ ಶ್ರೀ ಭಗವತಿ ಆಲಿ ಚಾಮುಂಡಿ ಕ್ಷೇತ್ರ, ಭಂಡಾರ ಸ್ಥಾನ ನವೀಕರಣೆಗೆ ಶಿಲಾನ್ಯಾಸ

ಕುಂಬಳೆ: ಆರಿಕ್ಕಾಡಿ ಪಾರೆ ಶ್ರೀ ಭಗವತಿ ಆಲಿ ಚಾಮುಂಡಿ ಕ್ಷೇತ್ರದ ಭಂಡಾರಸ್ಥಾನ ಮತ್ತು ಗುರುಪೀಠ ನವೀಕರಣಕ್ಕೆ ಇತ್ತೀಚೆಗೆ ಶಿಲಾನ್ಯಾಸ ನಡೆಯಿತು. ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಮತ್ತು ಬ್ರಹ್ಮಶ್ರೀ ಪುರೋಹಿತ ರಾಮಕೃಷ್ಣ ಆಚಾರ್ಯ ಆಶೀರ್ವಚನ ನೀಡಿದರು. ನವೀಕರಣ ಸಮಿತಿಯ ಗೌರವ ಅಧ್ಯಕ್ಷ ರಾಮದಾಸ ಆರಿಕ್ಕಾಡಿ  ಅಧ್ಯಕ್ಷತೆ ವಹಿಸಿದರು.ಪಾರೆ ಶ್ರೀ ಭಗವತಿ ಆಲಿ ಚಾಮುಂಡಿ ಕ್ಷೇತ್ರದ ಬಾಬು ಕಾರ್ನವರ್, ಪಾರೆ ಶ್ರೀ ಭಗವತಿ ಆಲಿಚಾಮುಂಡಿ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಮೋಹ ದಾಸ ರೈ, ಎರಿಯಾ ಕೋಟ ಭಗವತಿ ಕ್ಷೇತ್ರದ ಕಾರ್ನವರ್ ಚಂದ್ರಶೇಖರ, ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ರಘುನಾಥ ಪೈ, ಕುಂಬಳೆ ಪಂಚಾ ಯತ್ ಅಧ್ಯಕ್ಷೆ ತಾಹಿರಾ ಯೂಸುಫ್, ಕುಂಬಳೆ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರಹಿಮಾನ್, ಮಂಜುನಾಥ ಆಳ್ವ, ಸದಾಶಿವ ಉಳ್ಳಾಲ, ಎನ್. ಸುಕುಮಾರ, ಕೃಷ್ಣ ಕತ್ತರ್, ಉದಯ ಕುನ್ನಿಲ್ ತರವಾಡು, ಪಿಲಿಕುಂಜೆ ಶ್ರೀ ಐವರ್ ಭಗವತಿ ಕ್ಷೇತ್ರದ ಅಧ್ಯಕ್ಷ ಗಿರೀಶ್, ೧೮ ಕ್ಷೇತ್ರದ ಆಚಾರ ಸ್ಥಾನಿಕರು, ಆಡಳಿತ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಮೋಹನ ಪನ್ನಿಪ್ಪಾರೆ ಸ್ವಾಗತಿಸಿ, ನಾಗೇಶ ಕಾರ್ಳೆ ವಂದಿಸಿದರು.

RELATED NEWS

You cannot copy contents of this page