ಕಾರ್ಮಿಕರ ದಿನಾಚರಣೆ: ವಿವಿಧೆಡೆ ಕಾರ್ಮಿಕ ಸಂಘಟನೆಗಳಿಂದ ರ‍್ಯಾಲಿ, ಸಭೆ

ಕಾಸರಗೋಡು: ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಕಾಸರಗೋ ಡಿನಲ್ಲಿ ನಿನ್ನೆ ಮೇ ದಿನ ರ‍್ಯಾಲಿ ನಡೆ ಯಿತು. ಎಡಪಕ್ಷ ಟ್ರೇಡ್ ಯೂನಿ ಯನ್, ಸರ್ವೀಸ್ ಸಂಘಟನೆಗಳ ನೇತೃತ್ವದಲ್ಲಿ ಕಾಸರಗೋಡು ನಗರದಲ್ಲಿ ರ‍್ಯಾಲಿ ನಡೆಸಲಾಯಿತು. ಕೆಎಸ್‌ಆರ್ ಟಿಸಿ ಬಸ್ ನಿಲ್ದಾಣ ಪರಿಸರದಿಂದ ಆರಂಭಿಸಿದ ರ‍್ಯಾಲಿ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಸಮಾಪ್ತಿಗೊಂ ಡಿತು. ಬಳಿಕ ನಡೆದ ಸಭೆಯನ್ನು ಸಿಐಟಿಯು ರಾಜ್ಯ ಕಾರ್ಯದರ್ಶಿ ಟಿ.ಕೆ. ರಾಜನ್ ಉದ್ಘಾಟಿಸಿದರು. ಎಐಟಿಯುಸಿ ಜಿಲ್ಲಾ ಸೆಕ್ರೆಟರಿ ಬಿಜು ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸಿದರು. ಟ್ರೇಡ್ ಯೂನಿಯನ್ ನೇತಾರರಾದ ಟಿ. ಕೃಷ್ಣನ್ ಸಿ.ಎಂ., ಜಲೀಲ್,  ನ್ಯಾಯ ವಾದಿ ಸುರೇಶ್ ಬಾಬು, ಹನೀಫ್ ಕಡಪ್ಪುರ, ಕೆ. ಭಾಸ್ಕರನ್, ಕೆ. ರವೀಂದ್ರನ್, ಜಾನಕಿ, ಗಿರಿಕೃಷ್ಣನ್, ಸೇವಾ ಸಂಘಟನೆಯ ಕೆಎಸ್‌ಟಿಎ ನೇತಾರರಾದ  ಪ್ರಕಾಶನ್ ಮಾಸ್ತರ್, ಪ್ರತೀಶ್, ಎಲ್.ಐ.ಸಿ. ನೇತಾರ ಅರವಿಂದನ್, ಎನ್‌ಜಿಒ ಯೂನಿಯನ್ ಜಿಲ್ಲಾಧ್ಯಕ್ಷೆ ಶೋಭಾ ಮಾತನಾಡಿದರು. ಸಿಐಟಿಯು ಏರಿಯಾ ಸೆಕ್ರೆಟರಿ ಪಿ.ವಿ. ಕುಂಞಂಬು ಸ್ವಾಗತಿಸಿದರು. ಕುಂಬಳೆಯಲ್ಲಿ ನಡೆದ ರ‍್ಯಾಲಿಗೆ ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ವಿ.ವಿ. ರಮೇಶನ್, ಏರಿಯಾ ಸೆಕ್ರೆಟರಿ ಸಿ.ಎ. ಸುಬೈರ್ ನೇತೃತ್ವ ನೀಡಿದರು.

You cannot copy contents of this page