ಅಡ್ವಕೇಟ್ ಕ್ಲರ್ಕ್ಸ್ ಅಸೋಸಿಯೇಶನ್ ಜಿಲ್ಲಾ ಸಮ್ಮೇಳನ

ಕಾಸರಗೋಡು: ಕೇರಳ ಅಡ್ವಕೇಟ್ ಕ್ಲರ್ಕ್ಸ್ ಜಿಲ್ಲಾ ಸಮ್ಮೇಳನ ಕಾಸರಗೋಡು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಜರಗಿತು. ರಾಜ್ಯಾಧ್ಯಕ್ಷ ವಿ. ರವೀಂದ್ರನ್ ಪೇರಾಂಬ್ರ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಎ. ರಘುನಾಥ್ ಅಧ್ಯಕ್ಷತೆ ವಹಿಸಿದರು. ಕೆಎಸಿಎ ರಾಜ್ಯ ಕಾರ್ಯದರ್ಶಿ ಪಿ. ರಾಜ್‌ಮೋಹನ್, ಮುಖಂಡರಾದ ಶ್ರೀಕುಮಾರ್ ಕುನ್ನಮಂಗಲಂ, ವಿ.ಎಂ. ಜಯದೇವನ್, ಸಿ. ರವಿ, ಜಯರಾಮ್ ಶೆಟ್ಟಿ, ವಿ.ವಿ. ಬಾಲನ್ ಮಾತನಾಡಿದರು.

ನಿವೃತ್ತರಾಗುವ ಹಿರಿಯ ಸದಸ್ಯ ಸೂರ್ಯನಾರಾಯಣ ಮಯ್ಯರನ್ನು  ಈ ವೇಳೆ ಗೌರವಿಸಲಾಯಿತು. ಜಿಲ್ಲಾ ಕಾರ್ಯದರ್ಶಿ ವಿ. ಬಾಬು ಸ್ವಾಗತಿಸಿ, ಜಿಲ್ಲಾ ಜೊತೆ ಕಾರ್ಯ ದರ್ಶಿ ಬಿ. ಜಗದೀಶ್ ವಂದಿಸಿದರು.

RELATED NEWS

You cannot copy contents of this page