ಅಡಿಕೆ ಕೃಷಿಕರ ಸಮಸ್ಯೆ: ಸಚಿವರಿಗೆ ಕಿಸಾನ್ ಸೇನೆ ಮನವಿ

ಕಾಸರಗೋಡು: ಅಡಿಕೆ ಕೃಷಿಕರು ಎದುರಿಸುತ್ತಿರುವ ಎಲೆಚುಕ್ಕೆ ರೋಗ ಸಹಿತ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಕಿಸಾನ್ ಸೇನೆ ಪ್ರತಿನಿಧಿ ಮಂಡಳಿ ಶಾಸಕ ಎನ್.ಎ. ನೆಲ್ಲಿಕುನ್ನು ರವರ ಮುಖಾಂತರ ಕೃಷಿ ಸಚಿವರನ್ನು ಭೇಟಿಯಾಗಿ ಮನವಿ ನೀಡಲಾಯಿತು. ಅಡಿಕೆ ಕೃಷಿಕರ ಸಂಕಷ್ಟ, ಉಚಿತ ವಿದ್ಯುತ್ ಸರಬರಾಜು ಬಗ್ಗೆ ಸಚಿವರಿಗೆ ತಿಳಿಸಲಾಯಿತು. ತಂಡ ದಲ್ಲಿ ಕಿಸಾನ್ ಸೇನೆ ಜಿಲ್ಲಾ ಅಧ್ಯಕ್ಷ ಗೋವಿಂದ ಭಟ್ ಕೊಟ್ಟಂಗುಳಿ, ಕಾರ್ಯದರ್ಶಿ ಸಚಿನ್ ಕುಮಾರ್ ಎಂ.ಪಿ, ಕಲ್ಲಗ ಚಂದ್ರಶೇಖರ ರಾವ್,ಕೋಶಾಧಿಕಾರಿ  ರಾಜೇಂದ್ರ ಪ್ರಸಾದ್ ಬಿ, ನ್ಯಾಯವಾದಿ ಬಿಜು ಕೆ.ವಿ ಭಾಗವಹಿಸಿದರು.

RELATED NEWS

You cannot copy contents of this page