ಮದ್ಯದಮಲಿನಲ್ಲಿ ವಾಗ್ವಾದ: ಅಳಿಯ ಪೆಟ್ಟಿಗೆ ಮಾವ ಮೃತ್ಯು

ಪಾಲಕ್ಕಾಡ್: ಆಹಾರ ವಿತರಿಸುವುದಕ್ಕೆ ಸಂಬಂಧಿಸಿದ ವಿವಾದದ ಮಧ್ಯೆ ಮದ್ಯದಮಲಿನಲ್ಲಿ ಅಳಿಯನ ಹೊಡೆತದಿಂದ ಮಾವ ಮೃತಪಟ್ಟರು. ವಡಗರಪದಿ ವಯಲಪ್ಪದಿ ಕುಪ್ಪಾಂಡ ಕೌಂಡನ್ನೂರು ನಿವಾಸಿ ಶೆಂದಿಲ್ ಕುಮಾರ್ (45) ಮೃತಪಟ್ಟ ವ್ಯಕ್ತಿ. ಘಟನೆಯಲ್ಲಿ ಇವರ ಸಹೋದರಿಯ ಪುತ್ರ ಪ್ರಭಾಕರ (33)ನನ್ನು ಕೊಯಿಂಞಂಬಾರ ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ.

ನಿನ್ನೆ ರಾತ್ರಿ ಘಟನೆ ನಡೆದಿದೆ. ವಿವಾದದ ಮಧ್ಯೆ  ಪ್ರಭಾಕರ ಕಬ್ಬಿಣದ ಸರಳು ಉಪ ಯೋಗಿಸಿ ಶೆಂದಿಲ್ ಕುಮಾರ್‌ಗೆ ಹೊಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬೊಬ್ಬೆ ಕೇಳಿ ತಲುಪಿದ ನೆರೆಮನೆ ನಿವಾಸಿಗಳು ಶೆಂದಿಲ್ ಕುಮಾರ್‌ನನ್ನು ಆಸ್ಪತ್ರೆಗೆ ತಲುಪಿಸಿದ್ದು ಆ ವೇಳೆ ನಿಧನ ಸಂಭವಿಸಿದೆ.

You cannot copy contents of this page