ಕಾಸರಗೋಡು: ಕೂಡ್ಲು ಪಾರಕಟ್ಟೆಯ ಎಸ್ಪಿ ಕಚೇರಿ ಬಳಿ ಕಾಸರಗೋಡು ಪೊಲೀಸರು ನಿನ್ನೆ ಸಂಜೆ ನಡೆಸಿದ ಕಾರ್ಯಾಚರಣೆಯಲ್ಲಿ ಕರ್ನಾಟಕ ನೋಂದಾವಣೆಯ ಕಾರಿನಲ್ಲಿ ಬಚ್ಚಿಡಲಾಗಿದ್ದ 0.240 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಕಣ್ಣೂರು ಕಡಕ್ಕರ ಟೆಂಪಲ್ ರೋಡ್ ಬಳಿಯ ಸಜಿನಾಸ್ ಹೌಸ್ನ ಶಾನಿಸ್ ಕೆ.ಪಿ (35) ಮತ್ತು ದಕ್ಷಿಣಕನ್ನಡ ಜಿಲ್ಲೆಯ ಪಾಣಾಜೆ ಆರ್ಲಪದವಿನ ಮೊಹಮ್ಮದ್ ಅರ್ಶಾದ್ (34) ಎಂಬಿವರನ್ನು ಬಂಧಿಸಿ, ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಈ ಮಾಲನ್ನು ಮಾರಾಟಕ್ಕೆ ತಂದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.






