ಯುವ ನಟಿ ಆರೋಪಿಯಾದ ಆಕ್ರಮಣ ಕೇಸು: 50ರ ಹರೆಯದ ಮಹಿಳೆಯನ್ನು ಮಾನಭಂಗಗೈದ ಡಾಕ್ಟರ್‌ನ ಫೋನ್‌ನಲ್ಲಿ ಅಶ್ಲೀಲ ದೃಶ್ಯಗಳು ಪತ್ತೆ: ತಲೆಮರೆಸಿಕೊಂಡ ಡಾಕ್ಟರ್

ಕೊಚ್ಚಿ: ಯುವನಟಿಯ ಸಂಬಂಧಿಕೆಯನ್ನು ದೌರ್ಜನ್ಯಗೈದ ಪ್ರಕರಣದಲ್ಲಿ ಆರೋಪಿಯಾದ ಡಾಕ್ಟರ್ ಜೋನ್ಸನ್ ಜೆ. ವರ್ಗೀಸ್‌ನ ಫೋನ್‌ನಲ್ಲಿ ಅಶ್ಲೀಲ ದೃಶಗಳು ಪತ್ತೆಯಾಗಿದೆ. ೧೨ ಮಹಿಳೆಯರ ಜೊತೆಗಿರುವ ಈತನ ಖಾಸಗಿ ದೃಶ್ಯಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಇನ್ನಷ್ಟು ಹೆಚ್ಚು ಮಹಿಳೆಯರೊಂದಿಗೆ ಈತನಿಗೆ ಸಂಪರ್ಕವಿದೆಯೋ, ಪ್ರಕರಣದಲ್ಲಿ ಇನ್ನೂ ದೂರುದಾರರಿದ್ದಾರೆಯೇ, ಫೋನ್‌ನಲ್ಲಿ ಯಾವುದಾದರೂ ದೃಶ್ಯಗಳನ್ನು ಡಿಲೀಟ್ ಮಾಡಲಾಗಿದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವತಿಯರೊಂದಿಗಿರುವ ಖಾಸಗಿ ಸಂಪರ್ಕಗಳನ್ನು ಡಾಕ್ಟರ್ ಮೊಬೈಲ್‌ನಲ್ಲಿ ಚಿತ್ರೀಕರಿಸಿ ತೆಗೆದಿರಿಸಿರುವುದಾಗಿ ಪೊಲೀಸರು ತಿಳಿಸುತ್ತಾರೆ. ಇದರಲ್ಲಿ ಒಳಗೊಂಡ ಯುವತಿಯರ ದೂರು ಲಭಿಸಿದರೆ ಡಾಕ್ಟರ್ ವಿರುದ್ಧ ಇನ್ನಷ್ಟು ಕೇಸುಗಳನ್ನು ದಾಖಲಿಸಲಾಗುವುದು. ಇದೇ ವೇಳೆ ಯುವ ನಟಿಯ ಸಂಬಂಧಿಕೆಯಾದ 50ರ ಹರೆಯದ ಮಹಿಳೆಯ ದೂರಿನಂತೆ ದೌರ್ಜನ್ಯ ಪ್ರಕರಣ ನೋಂದಾಯಿಸಲಾಗಿದೆ. ಇದರ ಬೆನ್ನಲ್ಲೇ ಡಾಕ್ಟರ್ ಜೋನ್ಸನ್ ಕೆ. ವರ್ಗೀಸ್ (41) ತಲೆಮರೆಸಿಕೊಂಡಿರುವುದಾಗಿಯೂ, ಈತನ ಪತ್ತೆಗಾಗಿ ಲುಕೌಟ್ ನೋಟೀಸ್ ಪ್ರಕಟಿಸುವುದಕ್ಕಾಗಿ ಪೊಲೀಸರು ಯತ್ನ ಆರಂಭಿಸಿದ್ದಾರೆ.

ಅಕ್ಟೋಬರ್ 10ರಂದು ಸಂಜೆ 7.30ರ ವೇಳೆ ಇನ್ಫೋಪಾರ್ಕ್‌ನ ಹೋಟೆಲೊಂದರ ಸಮೀಪದಿಂದ ಆರೋಪಿಯಾದ ಡಾಕ್ಟರ್ ದೂರುದಾರೆಯನ್ನು ಸ್ವಂತ ಕಾರಿನಲ್ಲಿ ಹತ್ತಿಸಿಕೊಂಡು ತೆರಳಿದ್ದನು. ಸಮೀಪದ ಬಾರ್‌ಗೆ ಕೊಂಡೊಯ್ದು ಮದ್ಯ ನೀಡಿ ಆಕೆ ಅಸ್ವಸ್ಥತೆಗೊಂಡ ಬಳಿಕ ಇನ್ನೊಂದು ಹೋಟೆಲ್ ಕೊಠಡಿಗೆ ಕೊಂಡೊಯ್ದು ಲೈಂಗಿಕವಾಗಿ ದೌರ್ಜನ್ಯಗೈದಿರುವು ದಾಗಿ ದೂರಿನಲ್ಲಿ ಹೇಳಲಾಗಿದೆ. ಈ ಮಧ್ಯೆ ಈ ತಿಂಗಳ ೨ರಂದು ಡಾಕ್ಟರ್ ವಿರುದ್ಧ ಯುವನಟಿ ಹಾಗೂ ತಂಡ ಆಕ್ರಮಣ ನಡೆಸಿದೆ. ೫೦ರ ಹರೆಯದ ಮಹಿಳೆಯನ್ನು ಲೈಂಗಿಕ ದೌರ್ಜನ್ಯಗೈದ ಮಾಹಿತಿ ಬಹಿರಂಗಪಡಿಸದಿರಲು ನಟಿ ಹಾಗೂ ತಂಡ ೩ ಕೋಟಿ ರೂ. ಆಗ್ರಹಿಸಿತ್ತೆಂದು ಡಾಕ್ಟರ್ ದೂರಿದ್ದನು. ಡಾಕ್ಟರನ್ನು ಆಕ್ರಮಿಸಿದ ಪ್ರಕರಣದಲ್ಲಿ ನಟಿ ಹಾಗೂ ಮೋಡೆಲ್ ಆದ ಅತುಲ್ಯಚಂದ್ರ, ನಟ ಬಿಬಿನ್ ಪೆರುಂಬಿಳ್ಳಿ, ಸಹಾಯಕ ವಿಷ್ಣು ಎಂಬಿವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

You cannot copy contents of this page