ಜತೆಗೆ ವಾಸಿಸುತ್ತಿದ್ದ ಯುವತಿಗೆ ಲೈಂಗಿಕ ದೌರ್ಜನ್ಯ: ಯುವಕನ ವಿರುದ್ಧ ಕೇಸು

ಕಾಸರಗೋಡು: ಜತೆಗೆ ವಾಸಿಸುತ್ತಿದ್ದ ಯುವತಿ ಮೇಲೆ ಯುವಕನೋರ್ವ ಲೈಂಗಿಕ ದೌರ್ಜನ್ಯವೆಸಗಿದ ಬಗ್ಗೆ ದೂರಲಾಗಿದೆ. 39ರ ಹರೆಯದ, ವಿವಾಹ ವಿಚ್ಛೇದನಗೊಂಡ ಯುವತಿ ನೀಡಿದ ದೂರಿನಂತೆ ತೃಕರಿಪುರದ ಮುಹಮ್ಮದ್ ಅಲಿ ಎಂಬಾತನ ವಿರುದ್ಧ ಚಂದೇರ ಪೊಲೀಸರು ಕೇಸು ದಾಖಲಿಸಿದ್ದಾರೆ. 2019ರಿಂದ ಯುವತಿ ಹಾಗೂ ಮುಹಮ್ಮದ್ ಅಲಿ ಜತೆಗೆ ವಾಸಿಸುತ್ತಿದ್ದರು. ಈ ವೇಳೆ ಆರೋಪಿ ತನಗೆ ಹಲವು ಬಾರಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆಂದೂ ಭಾರೀ ಮೊತ್ತವನ್ನೂ ಪಡೆದು ವಂಚಿಸಿದ್ದಾನೆಂದು ಯುವತಿ ಪೊಲೀಸರಿಗೆ ನೀಡಿದ ದೂರಿ ನಲ್ಲಿ ತಿಳಿಸಿದ್ದಾಳೆ. ಮುಹಮ್ಮದ್ ಅಲಿ ಯನ್ನು ಪತ್ತೆಹಚ್ಚಲು …

ಬದಿಯಡ್ಕ ಪಂ. ಅಧ್ಯಕ್ಷಸ್ಥಾನ: ಬಿಜೆಪಿಯಿಂದ ಡಿ. ಶಂಕರ ಸ್ಪರ್ಧೆಗೆ: ಯುಡಿಎಫ್‌ನಲ್ಲಿ ಚರ್ಚೆ ಮುಂದುವರಿಕೆ; ಮತದಾನ ವೇಳೆ ಸಿಪಿಎಂ ನಿಲುವು ನಿರ್ಣಾಯಕ

ಬದಿಯಡ್ಕ: ಸ್ಥಳೀಯಾಡಳಿತ ಚುನಾವಣೆಯಲ್ಲಿ ಗ್ರಾಮ ಪಂಚಾಯ ತ್‌ಗಳಲ್ಲಿ ಚುನಾಯಿತರಾದವರ ಪೈಕಿ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆ ನಾಳೆ ನಡೆಯಲಿರುವಂತೆಯೇ ಬಹುತೇಕ ಮಂದಿಯ ಗಮನ ಬದಿಯಡ್ಕ ಗ್ರಾಮ ಪಂಚಾಯತ್‌ನತ್ತ ಹರಿದಿದೆ. ಪ್ರಸ್ತುತ ಪಂಚಾಯತ್‌ನಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಯಾವ ಪಕ್ಷದಿಂದ ಆಯ್ಕೆಗೊ ಳ್ಳುವರು ಎಂದು ತಿಳಿಯಲು ಮತದಾರರು ಕಾತರದಿಂದ  ಕಾದು ನಿಂತಿದ್ದಾರೆ. ಒಟ್ಟು ೨೧ ವಾರ್ಡ್‌ಗಳಿರುವ ಬದಿಯಡ್ಕ ಪಂಚಾಯತ್‌ನಲ್ಲಿ ಬಿಜೆಪಿ ಹಾಗೂ ಯುಡಿಎಫ್‌ಗೆ ತಲಾ 10 ಸೀಟುಗಳು, ಸಿಪಿಎಂಗೆ ಒಂದು ಸೀಟು ಲಭಿಸಿದೆ. ಸ್ಪಷ್ಟ ಬಹುಮತ ದೊಂದಿಗೆ ಅಧಿಕಾರಕ್ಕೇರಬೇಕಾದರೆ …

ಕೆಎಸ್‌ಆರ್‌ಟಿಸಿ- ಬೈಕ್ ಢಿಕ್ಕಿ: ಹೊಡೆದು ಖಾಸಗಿ ಬಸ್ ಚಾಲಕ ಮೃತ್ಯು

ಹೊಸದುರ್ಗ: ಚಿತ್ತಾರಿಕಲ್ ಕುನ್ನುಂಗೈಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ಮಧ್ಯೆ ಉಂಟಾದ ಅಪಘಾತದಲ್ಲಿ ಯುವಕ ಮೃತಪಟ್ಟಿದ್ದಾರೆ. ಕಾಞಂಗಾಡ್ ಚೆರುವತ್ತೂರು- ಚೀಮೇನಿ ರೂಟ್ ನಲ್ಲಿ ಸಾಗುವ ಖಾಸಗಿ ಬಸ್‌ನ ಚಾಲಕನಾಗಿರುವ ಕುನ್ನುಂಗೈ ಮುಳ್ಳಿಕ್ಕಾಡ್ ನಿವಾಸಿ ಪ್ರವೀಣ್ (28) ಮೃತಪಟ್ಟ ಯುವಕ. ನಿನ್ನೆ ಸಂಜೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ಹೊಳೆಗೆ ತ್ಯಾಜ್ಯ ಉಪೇಕ್ಷೆ: ಕುಬಣೂರು ಸುವರ್ಣಗಿರಿ ಹೊಳೆ ಪರಿಸರ ದುರ್ವಾಸನೆ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಕುಬಣೂರು ಸುವರ್ಣಗಿರಿ ಹೊಳೆಯಲ್ಲಿ ವ್ಯಾಪಕ ತ್ಯಾಜ್ಯವನ್ನು ಎಸೆದು ಪರಿಸರ ದುರ್ವಾಸನೆಯಿಂದ ಸಮಸ್ಯೆ ಉಂಟಾಗುತ್ತಿರುವುದಾಗಿ ದೂರಲಾಗಿದೆ. ಗೋಣಿ ಚೀಲ, ಪ್ಲಾಸ್ಟಿಕ್ ಚೀಲದಲ್ಲಿ ಆಹಾರ ತ್ಯಾಜ್ಯ ಸಹಿತ ವಿವಿಧ ತ್ಯಾಜ್ಯಗಳನ್ನು ತಂದು ಉಪೇಕ್ಷಿಸಲಾಗುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಇದರಿಂದ ನೀರು ಮಲಿನಗೊಳ್ಳುತ್ತಿದೆ. ಶಾಂತಿಗುರಿಯಿAದ ಕುಬಣೂರು ವಿದ್ಯಾನಗರಕ್ಕೆ ಸಾಗುವ ಸೇತುವೆ ಇದಾಗಿದ್ದು, ಹೊಳೆ ಪರಿಸರದಲ್ಲಿ ದೇವಸ್ಥಾನ, ಮಸೀದಿ ಸಹಿತ ಹಲವಾರು ಮನೆಗಳು ಹಾಗೂ ನೂರಾರು ಮಂದಿ ಈ ರಸ್ತೆ ಮೂಲಕ ಸಂಚರಿಸÀÄತ್ತಿದ್ದಾರೆ. ರಾತ್ರಿ ಹೊತ್ತಲ್ಲಿ ತ್ಯಾಜ್ಯಗಳನ್ನು ವಾಹನದ …

ಅಟಲ್‌ಜಿ ಸೇವಾಸಂಘ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಸುಶಾಸನ ದಿನಾಚರಣೆ

ಬದಿಯಡ್ಕ: ಮಾಜಿ ಪ್ರಧಾನಿ  ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಾಬ್ದಿ ಹಿನ್ನೆಲೆಯಲ್ಲಿ ಸುಶಾಸನ ದಿನವಾಗಿ ಅಟಲ್‌ಜಿ ಸೇವಾಸಂಘ ಚಾರಿಟೇಬಲ್ ಟ್ರಸ್ಟ್ ಬದಿಯಡ್ಕ ಇದರ ಆಶ್ರಯದಲ್ಲಿ ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಆಚರಿಸಲಾಯಿತು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ಹರೀಶ್ ನಾರಂಪಾಡಿ ಅತಿಥಿಯಾಗಿ ಪಾಲ್ಗೊಂಡು ಮಾತ ನಾಡಿ, ಹಸಿವುಮುಕ್ತ, ದಾರಿದ್ರ್ಯಮುಕ್ತ, ಭಯಮುಕ್ತ ವಾತಾವರಣದ ಕನಸು ಕಂಡಿದ್ದ ಅಟಲ್ ಬಿಹಾರಿ ವಾಜಪೇಯಿ ಬಿತ್ತಿದ ರಾಷ್ಟ್ರಭಕ್ತಿಯ ಬೀಜ ಇಂದು ವಿಶ್ವದಲ್ಲೇ ಗುರುತಿಸುವ ಪಕ್ಷವಾಗಿ ಬಿಜೆಪಿ ಬೆಳೆದಿದೆ ಎಂದರು. ಆಶ್ರಮದ ಅಧ್ಯಕ್ಷ ಶ್ರೀಕೃಷ್ಣ …

ರೀಲ್ ಚಿತ್ರೀಕರಣಕ್ಕಾಗಿ ರೈಲನ್ನು ನಿಲ್ಲಿಸಿದ ಪ್ಲಸ್ ಟು ವಿದ್ಯಾರ್ಥಿಗಳ ಸೆರೆ

ಕಣ್ಣೂರು: ಅಪಾಯಕರವಾದ ರೀತಿಯಲ್ಲಿ ಟ್ರೈನ್‌ನ್ನು ತಡೆದು ನಿಲ್ಲಿಸಿ ಸಂಚಾರಕ್ಕೆ ತಡೆಯೊಡ್ಡಿದ ಇಬ್ಬರು ಪ್ಲಸ್ ಟು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ತಲಶ್ಶೇರಿ- ಮಾಹಿ ಮಧ್ಯೆ ಇರುವ ಹಳಿಯಲ್ಲಿ ವಿದ್ಯಾರ್ಥಿಗಳು ತಮಾಷೆ ಗಾಗಿ ರೀಲ್ ಚಿತ್ರೀಕರಿಸುತ್ತಿರುವಾಗ ಅಪರಿಮಿತ ವೇಗದಿಂದ ಸಂಚರಿಸುತ್ತಿದ್ದ ರೈಲಿಗೆ ಕೆಂಪು ದೀಪ ತೋರಿಸಿದ್ದು, ಈ ಹಿನ್ನೆಲೆಯಲ್ಲಿ ಲೋಕೋ ಪೈಲೆಟ್ ರೈಲನ್ನು ಸಡನ್ ಬ್ರೇಕ್ ಹಾಕಿ ನಿಲ್ಲಿಸಿದ್ದಾರೆ. ರೈಲು ನಿಂತ ಕೂಡಲೇ ಕ್ಯಾಮರಾ ಸಹಿತ ರೀಲ್ ಚಿತ್ರೀಕರಿಸಲು ಆರಂಭಿಸಿದ ವಿದ್ಯಾರ್ಥಿಗಳನ್ನು ಪೊಲೀಸರು ಸಾಹಸಿಕವಾಗಿ ಸೆರೆ ಹಿಡಿದರು. ಈ ಮಧ್ಯೆ ಓರ್ವ …

ಪೆರ್ಲ: ಅಭಿನಂದನೆ ಹಾಗೂ ಅಟಲ್ ಬಿಹಾರಿ ವಾಜಪೇಯಿ ಸಂಸ್ಮರಣೆ

ಪೆರ್ಲ: ಬಿಜೆಪಿಯ ಧೀಮಂತ ನಾಯಕ, ಮಾಜಿ ಪ್ರಧಾನಿ ದಿ| ಅಟಲ್ ಬಿಹಾರಿ ವಾಜಪೇಯಿ ಅವರ ಸಂ ಸ್ಮರಣೆಯೊಂದಿಗೆ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಎಣ್ಮಕಜೆ ಪಂ.ನ 9ನೇ ವಾರ್ಡ್ ವಾಣಿನಗರದಿಂದ ವಿಜೇತರಾದ ನಳಿನಾಕ್ಷಿ ರವೀಶ್ ಹಾಗೂ ಪಕ್ಷದ ಅಭ್ಯರ್ಥಿಗಳ ಗೆಲುವಿ ಗಾಗಿ ದುಡಿದ ಕಾರ್ಯಕರ್ತರಿಗೆ ಬಿಜೆಪಿ ವಾಣಿನಗರ ವಾರ್ಡ್ ಸಮಿತಿ ವತಿಯಿಂದ ಅಭಿನಂದನಾ ಸಭೆ ಹಿರಿಯ ಕಾರ್ಯಕರ್ತ ಜಗದೀಶ್ ಕುತ್ತಾಜೆ ಅವರ ನಿವಾಸದಲ್ಲಿ ಜರುಗಿತು.ವಾಣಿನಗರ ವಾರ್ಡ್ ಸಮಿತಿ ಅಧ್ಯಕ್ಷ ಮಹೇಶ್ ಕುಂಡಾಪು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ವಿಧಾನ ಪರಿಷತ್ …

ಮೃತ ವ್ಯಕ್ತಿಯ ಚರ್ಮದಾನ: ರಾಜ್ಯದಲ್ಲಿ ಮೊದಲ ಬಾರಿಗೆ ಯಶಸ್ವೀ ಶಸ್ತ್ರಚಿಕಿತ್ಸೆ

ತಿರುವನಂತಪುರ: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮೃತ ವ್ಯಕ್ತಿಯೊಬ್ಬರ ಚರ್ಮವನ್ನು ದಾನ ಮಾಡಿದ ಘಟನೆ ತಿರುವನಂತಪುರ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದೆ. ರಸ್ತೆ ಅಪಘಾತದಿಂದಾಗಿ ಮೆದುಳಿನ ಆಘಾತ ಸಂಭವಿಸಿ ಮೃತಪಟ್ಟ ಕೊಲ್ಲಂ ಚಿರಯ್ಕರ ಇಡವಟ್ಟ ನಿವಾಸಿಯಾದ 46ರ ಹರೆಯದ ವ್ಯಕ್ತಿಯೊಬ್ಬರ ಚರ್ಮವನ್ನು ಕುಟುಂಬ ದಾನ ಮಾಡಲು ಮುಂದಾ ಗಿದೆ. ಹೀಗೆ ದಾನವಾಗಿ ಲಭಿಸುವ ಚರ್ಮವನ್ನು ಮಾರಕವಾಗಿ ಸುಟ್ಟು ಗಾಯಗೊಳ್ಳುವವರ ಸಹಿತ ಚರ್ಮ ಅಗತ್ಯವುಳ್ಳವರಿಗೆ ಅಳವಡಿಸುವ ಮೂಲಕ ಅವರ ಜೀವ ರಕ್ಷಿಸಲು ಸಾಧ್ಯವಿದೆ. ಚರ್ಮ ಸಂಗ್ರಹಿಸಿ ಭದ್ರವಾಗಿರಿಸುವ ಸ್ಕಿನ್ …

ಕಾಞಂಗಾಡ್ ವಿಧಾನಸಭಾ ಮಂಡಲ ಈ ಬಾರಿ ಸಿಪಿಎಂ ವಶಪಡಿಸಲಿದೆಯೇ? ಚರ್ಚೆ ಸಕ್ರಿಯ

ಹೊಸದುರ್ಗ: ಜಿಲ್ಲೆಯ ೫ ವಿಧಾನಸಭಾ ಮಂಡಲಗಳಲ್ಲಿ ಎಡಪಕ್ಷ ಹಾಗೂ ಸಿಪಿಎಂ 100 ಶೇಕಡಾ ಜಯ ಸಾಧ್ಯತೆ ಇರಿಸಿ ಕೊಂಡಿರುವ ಮಂಡಲವಾಗಿದೆ ಕಾಞಂಗಾಡ್. ಹಳೆಯ ಹೊಸ ದುರ್ಗ ಮಂಡಲ ಹೆಸರು ಬದಲಿಸಿ ಕಾಞಂಗಾಡ್ ಎಂದು ಕರೆಸಿ ಕೊಂಡಿದೆ. ಆ ಬಳಿಕ ಎಡಪಕ್ಷದ ಅಭ್ಯರ್ಥಿ ಸತತವಾಗಿ ಮೂರು ಬಾರಿ ಆಯ್ಕೆಯಾಗಿದ್ದಾರೆ. ಜಿಲ್ಲೆಯ ಸಿಪಿಐ ಪಕ್ಷದ ಉನ್ನತ ಮುಖಂಡ, ರಾಜ್ಯ ಕಂದಾಯ ಸಚಿವರೂ ಆಗಿದ್ದ ಇ. ಚಂದ್ರಶೇಖರನ್ ಇಲ್ಲಿಂದ ಮೂರು ಬಾರಿ ಆಯ್ಕೆಯಾಗಿದ್ದಾರೆ. ಅದಕ್ಕಿಂತಲೂ ಮುಂಚಿತ ಹೊಸ ದುರ್ಗ ಮಂಡಲವಾಗಿದ್ದಾಗಲೂ ಸಿಪಿಐಯ …

ಎಕೆಪಿಎ ಕಾಸರಗೋಡು ಈಸ್ಟ್ ಘಟಕದಿಂದ ಕ್ರಿಸ್ಮಸ್ ಆಚರಣೆ

ಬದಿಯಡ್ಕ: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋ ಸಿಯೇಶನ್ ಕಾಸರಗೋಡು ಈಸ್ಟ್ ಘಟಕದ ಕ್ರಿಸ್ಮಸ್ ದಿನಾಚರಣೆ ಬದಿಯಡ್ಕ ಬೀಜಂತಡ್ಕದ ಸ್ನೇಹಾಲಯದಲ್ಲಿ ಜರಗಿತು. ಕೇಕ್ ತುಂಡರಿಸಿ, ಸ್ನೇಹಾಲಯದ ನಿವಾಸಿಗಳಿಗೆ ಆಹಾರ ವಿತರಿಸಿ ಸಂಭ್ರಮಿಸಲಾಯಿತು. ಯೂನಿಟ್ ಅಧ್ಯಕ್ಷ ರಾಜಶೇಖರ ಅಧ್ಯಕ್ಷತೆ ವಹಿಸಿದರು. ರಾಜ್ಯ ಸಮಿತಿ ಸದಸ್ಯ ರಾಜೇಂದ್ರನ್ ವಿ.ಎನ್, ವಲಯ ಕೋಶಾಧಿಕಾರಿ ಅಜಿತ್ ಕುಮಾರ್, ಕೋಶಾಧಿಕಾರಿ ಶ್ರೀಕಾಂತ್, ಪಿಆರ್‌ಒ ಮನೀಶ್, ಜೊತೆ ಕಾರ್ಯದರ್ಶಿ ಸುರೇಶ್ ಚಂದ್ರ, ಸ್ನೇಹಾಲಯದ ಮದರ್ ಬೀನ, ಸಿಸ್ಟರ್ ಬಿಂದು, ರೋಸ್‌ಮೇರಿ, ಸಿಸ್ಟರ್ ಮೇರಿಮಾತ ಭಾಗವಹಿಸಿದರು. ಕಾರ್ಯದರ್ಶಿ ಅಖಿಲ್ …