ಲಾಲ್‌ಭಾಗ್- ಕುರುಡಪದವು ರಸ್ತೆ ಅಭಿವೃದ್ಧಿಗೆ 1 ತಿಂಗಳ ಆಯುಷ್ಯ: ಡಾಮರು ಎದ್ದು ಶೋಚನೀಯ ಸ್ಥಿತಿಗೆ ತಲುಪಿದ ರಸ್ತೆ : ಕಳಪೆ ಕಾಮಗಾರಿ ಆರೋಪ
ಪೈವಳಿಕೆ: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಲಾಲ್‌ಭಾಗ್-ಕುರುಡಪದವು ಲೋಕೋಪಯೋಗಿ ಇಲಾಖೆ ರಸ್ತೆಯಲ್ಲಿ ಅಮ್ಮೇರಿ ತನಕ ಅಭಿವೃದ್ದಿಗೊಳಿಸಿದ ರಸ್ತೆ ಒಂದೇ ತಿಂಗಳಲ್ಲೇ ಅಲ್ಲಲ್ಲಿ ಡಾಮಾರು ಎದ್ದು ಶೋಚನೀಯಾವಸ್ಥೆಗೆ ತಲುಪಿದೆ. ಇದು ಕಳಪೆ ಕಾಮಗಾರಿಯಿಂದ ಎಂದು ಊರವರು ಆರೋಪಿಸಿದ್ದಾರೆ. ಅಲ್ಲದೆ ಪ್ರತಿಭಟನೆಗೂ ಸಿದ್ದತೆ ನಡೆಸಲಾಗುತ್ತಿದೆ. ಸುಮಾರು ನಾಲ್ಕುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಮೂರು ಮುಕ್ಕಾಲು ಕಿಲೋ ಮೀಟರ್ ರಸ್ತೆಯನ್ನು ಅಭಿವೃದ್ದಿಗೊಳಿಸಲಾಗಿದೆ. ಆದರೆ ಒಂದು ತಿಂಗಳಲ್ಲೇ ಹದಗೆಡಲು ಆರಂಭಿಸಿದ್ದು, ಊರವರಲ್ಲಿ ಆತಂಕ ಉಂಟುಮಾಡಿದೆ. ಈ ರಸ್ತೆಯಲ್ಲಿ ವ್ಯವಸ್ಥಿತ ಚರಂಡಿ, ಸಂಕ, ತಡೆಗೋಡೆಗಳು ನಿರ್ಮಿಸದಿರುವುದು …