ಲೈಂಗಿಕ ಚೇಷ್ಠೆ ತೋರಿಸಿದ ಪ್ರಕರಣ: ಆರೋಪಿಗೆ ಸಜೆ, ಜುಲ್ಮಾನೆ

ಕಾಸರಗೋಡು:  ಒಂಭತ್ತು ಮತ್ತು ಆರು ವರ್ಷದ ಬಾಲಕಿ ಯರ ಮುಂದೆ ಲೈಂಗಿಕ ಚೇಷ್ಠೆ ತೋರಿದ ಪ್ರಕರಣದ ಆರೋಪಿಗೆ ಹೊಸದುರ್ಗ ಕ್ಷಿಪ್ರ ವಿಶೇಷ ಪೋಕ್ಸೋ ನ್ಯಾಯಾಲಯ ಒಂದು ವರ್ಷ ಸಜೆ ಮತ್ತು ಮೂರು ತಿಂಗಳ ಸಜೆ ಹಾಗೂ 10,500 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ.ಚಿತ್ತಾರಿಕ್ಕಲ್ ಪಾರಕಡವಿನ ಕುದಿರುಮ್ಮಲ್ ಹೌಸ್‌ನ ಸಂದೀಪ್ (40) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಆರು ತಿಂಗಳು ಮತ್ತು ಒಂದು ವಾರ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಯೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. …

ರಾಜ್ಯದಲ್ಲಿ ಮತ್ತೆ ಮಳೆ: ಐದು ಜಿಲ್ಲೆಗಳಲ್ಲಿ ಜಾಗ್ರತಾ ನಿರ್ದೇಶ

ಕಾಸರಗೋಡು: ರಾಜ್ಯದಲ್ಲಿ ಅಲ್ಪ ವಿರಾಮದ ಬಳಿಕ ಮತ್ತೆ ಮಳೆ ತೀವ್ರ ಗೊಳ್ಳಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಮುಂದಿನ ಐದು ದಿನ ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆ ಹಾಗೂ ಇಂದು, ನಾಳೆ, ಶನಿವಾರಗ ಳಂದು ಕೆಲವು ಕಡೆ ತೀವ್ರ ಮಳೆಗೆ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ತೀವ್ರ ಮಳೆಯನ್ನು ಗಣನೆಗೆ ತೆಗೆದು ಕೇಂದ್ರ ಹವಾಮಾನ ಇಲಾಖೆ ವಿವಿಧ ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಿದೆ. ಇಂದು ಆಲಪ್ಪುಳ, ಕೋಟಯಂ, ಇಡುಕ್ಕಿ, ಎರ್ನಾಕುಳಂ, …

ಅಸೌಖ್ಯ: ಚಿಕಿತ್ಸೆಯಲ್ಲಿದ್ದ ಮಹಿಳೆ ನಿಧನ

ಕುಂಬಳೆ: ಕೊಡ್ಯಮ್ಮೆ ಊಜರ್‌ನ ದಿವಂಗತ ಮುಹ ಮ್ಮದ್ ಕುಂಞಯವರ ಪತ್ನಿ ಬೀಫಾತಿಮಾ (67) ನಿಧನರಾದರು. ಅಸೌಖ್ಯ ನಿಮಿತ್ತ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಮಕ್ಕಳಾದ ಹಮೀದ್ ದುಬೈ, ಇಬ್ರಾಹಿಂ, ಸಿದ್ದಿಕ್, ಜೈನಬಾ, ಜಮೀಲಾ, ಮಿಸ್ರಿಯಾ. ಅಳಿಯಂದಿರಾದ ಮುಹಮ್ಮದ್ ಕುಂಞ ಪೆರಿಂಗಡಿ, ಅಬ್ದುಲ್ಲಾ ಕುಂಬಳೆ (ಕಾರವಲ್), ಮುಹಮ್ಮದ್, ಸೊಸೆಯಂದಿರಾದ ನಸೀಮ, ಆಸೀನಾ, ಮುರ್ಷಿತಾ. ಒಡಹುಟ್ಟಿದವರಾದ ಬಾಪಿಂಞÂ, ಅಸ್ಯುಮ್ಮ, ಮುಹಮ್ಮದ್ ಕುಂಞ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ನಿರ್ಮಾಣಪೂರ್ತಿಗೊಳ್ಳುತ್ತಿರುವ ಉಪ್ಪಳ ಅಗ್ನಿಶಾಮಕದಳ ಕಟ್ಟಡ

ಉಪ್ಪಳ: ಕಳೆದ 15 ವರ್ಷಗಳಿಂದ ಚೆರುಗೋಳಿ ರಸ್ತೆಯ ಪಂಚಾಯತ್ ಕಟ್ಟಡದಲ್ಲಿ ಕಾರ್ಯಚರಿಸುತ್ತಿರುವ ಉಪ್ಪಳ ಅಗ್ನಿಶಾಮಕ ದಳಕ್ಕೆ ಮಂಗಲ್ಪಾಡಿ ಪಂಚಾಯತ್‌ನ ಪ್ರತಾಪನಗರ 7ನೇ ವಾರ್ಡ್ ಗುಳಿಗ ಬನದ ಪರಿಸರದಲ್ಲಿ ನೂತನ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಕಳೆದ ಏಳು ತಿಂಗಳಿAದ ಕಾಮಗಾರಿ ನಡೆಯುತ್ತಿದೆ. ಕಟ್ಟಡ ನಿರ್ಮಾಣಗೊಂಡು ಸಾರಣೆ ಕೆಲಸಗಳು ನಡೆಯುತ್ತಿದ್ದು, ಶ್ರೀಘ್ರದಲ್ಲಿ ಕಟ್ಟಡ ನಿರ್ಮಾಣ ಕೆಲಸಗಳು ಪೂರ್ತಿಗೊಳ್ಳಲಿದೆ. ಈಗ ಕಾರ್ಯಚರಿಸುತ್ತಿ ರುವ ಕೇಂದ್ರ 2010 ಎಪ್ರಿಲ್‌ನಲ್ಲಿ ಆರಂ ಭಗೊಂಡಿತ್ತು. ಇಲ್ಲಿ ಸೌಕರ್ಯದ ಕೊರತೆ ಉಂಟಾಗಿದ್ದು, ಇದರಿಂದ ಅಧಿಕಾರಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಈಗ ನಿರ್ಮಾಣಗೊಳ್ಳುತ್ತಿರುವ …

ತಲೆಮರೆಸಿಕೊಂಡಿದ್ದ ಕಾಪಾ ಪ್ರಕರಣದ ಆರೋಪಿ ಸೆರೆ

ಹೊಸದುರ್ಗ: ತಲೆಮರೆಸಿ ಕೊಂಡಿದ್ದ ಕಾಪಾ ಪ್ರಕರಣ ಸಹಿತ ಕುಖ್ಯಾತ ಅಪರಾಧಿ, ಮಾದಕ ಪದಾರ್ಥ ವ್ಯಾಪಾರಿಯಾಗಿದ್ದ ಆರೋಪಿಯನ್ನು ಅಂಬಲತ್ತರ ಪೊಲೀಸರು ಸೆರೆ ಹಿಡಿದು ಜೈಲಿಗಟ್ಟಿದರು. ೭ನೇ ಮೈಲು ಕಾಯಲಡ್ಕಂ ನಿವಾಸಿ ರಂಶೀದ್ ಅಲಿಯಾಸ್ ಕಿಚ್ಚು 33)ನನ್ನು ಸೆರೆ ಹಿಡಿಯಲಾಗಿದೆ. ಕಾಪಾ ಹೇರಿದ ಹಿನ್ನೆಲೆಯಲ್ಲಿ ಈತ ಪರಾರಿಯಾಗಿ ವಿದೇಶದಲ್ಲಿದ್ದನು. ಆ ಬಳಿಕ ಬೆಂಗಳೂರಿಗೆ ತಲುಪಿ ರೈಲು ಮೂಲಕ ಕಾಞಂಗಾಡ್ ರೈಲ್ವೇ ನಿಲ್ದಾಣಕ್ಕೆ ತಲುಪಿದಾಗ ಈತನನ್ನು ಸೆರೆ ಹಿಡಿಯಲಾಗಿದೆ. ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯಭರತ್ ರೆಡ್ಡಿಯವರಿಗೆ ಲಭಿಸಿದ ರಹಸ್ಯ …

ಬಿಜೆಪಿ ಬದಿಯಡ್ಕ ಪಂಚಾಯತ್ ಕಾರ್ಯಕರ್ತರ ಸಮಾವೇಶ, ರಜತ ಶಂಕರ ಗೌರವಾಭಿನಂದನೆ

ಬದಿಯಡ್ಕ: ಬಿಜೆಪಿ ಬದಿಯಡ್ಕ ಪಂಚಾಯತ್ ಕಾರ್ಯಕರ್ತರ ಸಮಾವೇಶ ಹಾಗೂ ರಜತ ಶಂಕರ ಗೌರವಾಭಿನಂದನೆ ಕಾರ್ಯಕ್ರಮ ಅಕ್ಟೋಬರ್ 5 ರಂದು ಬೆಳಗ್ಗೆ 9.30 ರಿಂದ ಬೇಳ ವಿಷ್ಣುಮೂರ್ತಿ ನಗರದ ವಿ.ಎಂ ಸಭಾಂಗಣದಲ್ಲಿ ನಡೆಯಲಿದೆ. 25 ವರ್ಷಗಳ ಕಾಲ ಜನಪ್ರತಿನಿಧಿಯಾಗಿ, ಶಂಕರ ಮೆಂಬರ್ ಎಂದೇ ಪರಿಚಿತರಾಗಿರುವ ಡಿ.ಶಂಕರ ಅವರಿಗೆ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಗೌರವಾಭಿನಂದನೆ ಸಲ್ಲಿಸುವರು. ಕಾರ್ಯಕ್ರಮವನ್ನು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಸುರೇಂದ್ರನ್ ಉದ್ಘಾಟಿಸುವರು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆ …

ಪ್ರೆಸ್‌ಕ್ಲಬ್ ಜಂಕ್ಷನ್‌ನಲ್ಲಿ ಸಂಚಾರ ನಿಯಂತ್ರಣ

ಕಾಸರಗೋಡು: ಕಾಸರಗೋಡು ಪ್ರಸ್‌ಕ್ಲಬ್ ಜಂಕ್ಷನ್‌ನಲ್ಲಿ ಇಂದಿನಿಂದ ಅ.15ರವರೆಗೆ ಸಂಚಾರ ನಿಯಂತ್ರಣ ಏರ್ಪಡಿಸಲಾಗಿದೆ. ರಸ್ತೆ ಕಾಮಗಾರಿ ಯಂಗವಾಗಿ ಫ್ರೀಲೆಫ್ಟ್ ಭಾಗವನ್ನು ಪೂರ್ಣವಾಗಿ ಮುಚ್ಚುಗಡೆಗೊಳಿಸಿ ಸಂಚಾರ ನಿಯಂತ್ರಣ ಏರ್ಪಡಿಸಲಾಗುತ್ತಿದೆ. ಕಾಸರಗೋಡು ಎಚ್‌ಪಿ ಗ್ಯಾಸ್ ಅಂಗಡಿಯಿಂದ ಕಿಡ್ಸ್ ಗೋಲ್ಡ್ ಜ್ಯುವೆಲ್ಲರಿವರೆಗಿರುವ ಎಡಭಾಗದ ರಸ್ತೆಯಲ್ಲಿ ಹಾನಿಗೊಂಡ ಭಾಗವನ್ನು ದುರಸ್ತಿ ನಡೆಸಲಾಗುವುದು. ಸಂಚಾರ ನಿಯಂತ್ರಣವನ್ನು ಪಾಲಿಸಬೇಕೆಂದು ಲೋಕೋಪಯೋಗಿ ವಿಭಾಗ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಳಿಸಿದ್ದಾರೆ.

ನಿಧನ

ಪೆರ್ಲ: ಮಣಿಯಂ ಪಾರೆ ಶ್ರೀ ದುರ್ಗಾ ನಗರದ ನಿವಾಸಿ ಚೋಮ ನಾಯ್ಕರ ಪತ್ನಿ ಸೀತು (70) ಇಂದು ಮುಂಜಾನೆ ನಿಧನ ಹೊಂದಿದರು. ಹೃದಯಾಘಾ ತವುಂಟಾಗಿ ಆಸ್ಪತ್ರೆಗೆ ಕೊಂಡೊಯ್ಯಲಾ ಗಿತ್ತು. ಮೃತರು ಪತಿ, ಮಕ್ಕಳಾದ ವಸಂತ, ಮೋಹಿನಿ, ಸೊಸೆ ನಳಿನಾಕ್ಷಿ, ಅಳಿಯ ಈಶ್ವರ, ಸಹೋದರರಾದ ಚನಿಯ ನಾಯ್ಕ, ಕೃಷ್ಣ ನಾಯ್ಕ, ಸಹೋದರಿಯ ರಾದ ಅಕ್ಕು, ಪಾರ್ವತಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಕಾಸರಗೋಡು ದಸರಾ ಸಂಭ್ರಮ ಇಂದು

ಕಾಸರಗೋಡು: ಪೇಟೆ ಶ್ರೀ ವೆಂಕಟ್ರಮಣ ದೇವಾಲಯದ ವ್ಯಾಸಮಂಟಪದಲ್ಲಿ ಇಂದು ಸಂಜೆ 6.30 ರಿಂದ ಕಾಸರಗೋಡು ದಸರಾ ಕಾರ್ಯಕ್ರಮ ನಡೆಯಲಿದೆ. ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ, ಪೇಟೆ ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಕಲಾಸಂಘದ ಆಶ್ರಯದಲ್ಲಿ ಕಾರ್ಯಕ್ರಮ ಜರಗಲಿದ್ದು, ಸಂಜೆ 6.30ಕ್ಕೆ ವೆಂಕಟ್ರಮಣ ಬಾಲಗೋಕುಲದ ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭಗೊಳ್ಳಲಿದೆ. ಕೆ.ಎನ್. ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ದೀಪ ಪ್ರಜ್ವಲನೆಗೈಯ್ಯುವರು. ಮಂಜುನಾಥ ಮಾನ್ಯ ಉಪಸ್ಥಿತರಿರುವರು. ಗುರುಪ್ರಸಾದ್ ಕೋಟೆಕಣಿ ಪ್ರಸ್ತಾಪಿಸುವರು. ಇದೇ …

ಸಿಪಿಐ ಪ್ರಧಾನ ಕಾರ್ಯದರ್ಶಿಯಾಗಿ ಡಿ. ರಾಜ ಮುಂದುವರಿಕೆ

ಚಂಡೀಘಡ್: ಸಿಪಿಐ ಪ್ರಧಾನ ಕಾರ್ಯದರ್ಶಿಯಾಗಿ ಡಿ. ರಾಜ ಮುಂದು ವರಿಯುವರು. ಪ್ರಾಯಮಿತಿ ವಿಷಯದಲ್ಲಿ ಇವರಿಗೆ ರಿಯಾಯಿತಿ ನೀಡಲು ರಾಷ್ಟ್ರೀಯ ಎಕ್ಸಿಕ್ಯೂಟಿವ್ ತೀರ್ಮಾ ನಿಸಿತ್ತು. ಈ ಬಗ್ಗೆ ರಾಷ್ಟ್ರೀಯ ಕೌನ್ಸಿಲ್ ಇಂದು ಚರ್ಚೆ ನಡೆಸಿ ಅಂತಿಮ ತೀರ್ಮಾ ನ ಕೈಗೊಳ್ಳಲಿದೆ. ನೂತನ ಸೆಕ್ರೆಟರಿಯೇಟ್ ಸದಸ್ಯರನ್ನು ಕೂಡಾ ಇಂದು ತೀರ್ಮಾ ನಿಸಲಾಗುವುದು. ಕೇರಳ ಸಹಿತ ರಾಜ್ಯಗಳಲ್ಲಿ 75 ವರ್ಷ ಪೂರ್ತಿಗೊಂಡವರನ್ನು ಹೊರತುಪಡಿಸಲಾಗುವುದು ಎಂಬ ನಿಯಮ ಜ್ಯಾರಿಗೊಳಿಸಲಾಗಿತ್ತು. ಆದರೆ ಡಿ. ರಾಜರನ್ನು ಈ ವಿಷಯದಿಂದ ಹೊರತುಪಡಿಸುವ ಬಗ್ಗೆ ಇಂದು ತೀರ್ಮಾನ ಕೈಗೊಳ್ಳಲಾಗುವುದು. …