ವೃದ್ಧರ ದಿನದಂದು ಸಿಪಿಎಂನ ಕೊಲೆ ಬೆದರಿಕೆ ಖಂಡನೀಯ- ಎಂ.ಎಲ್. ಅಶ್ವಿನಿ

ಕಾಸರಗೋಡು: ವೃದ್ಧರ ದಿನದಂದು ಹಿರಿಯ ನಾಗರಿಕರನ್ನು ಗೌರವಿಸುವುದಕ್ಕಾಗಿ ತಲುಪಿದ ಪುರುಷ ಸ್ವ-ಸಹಾಯ ಸಂಘದ ಕಾರ್ಯಕರ್ತರನ್ನು ತಡೆದು ಕೊಲೆ ಬೆದರಿಕೆಯೊಡ್ಡಿದ ಸಿಪಿಎಂ ಮುಖಂಡನ ಕ್ರಮ ಖಂಡನೀಯವೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಕಮ್ಯೂನಿಸ್ಟ್ ಶಕ್ತಿ ಕೇಂದ್ರಗಳಲ್ಲಿ ನೆಲೆಗೊಂಡಿರುವ ಪ್ರಜಾಪ್ರಭುತ್ವ ವಿರುದ್ಧ  ನೀತಿಯ ದೃಷ್ಟಾಂತವಾಗಿದೆ ಈ ರೀತಿಯ ಘಟನೆಗಳೆಂದು ಅವರು ನುಡಿದರು. ಕಳೆದ ಸ್ಥಳೀಯಾಡಳಿತ ಚುನಾವಣೆಯಲ್ಲಿ ಮಡಿಕೈ ಪಂಚಾಯತ್‌ನ 13ನೇ ವಾರ್ಡ್‌ನಿಂದ ಸ್ಪರ್ಧಿಸಿದ ಪಿ. ಸುರೇಶನ್ 263 ಮತಗಳನ್ನು ಗಳಿಸಿರುವುದರಲ್ಲಿರುವ ರಾಜಕೀಯ ದ್ವೇಷವೇ ಘಟನೆಯ ಹಿಂದಿರುವುದು ಎಂದು ಅಶ್ವಿನಿ …

ಯೂತ್ ಕಾಂಗ್ರೆಸ್ ವಿರುದ್ಧ ಕುಂಬಳೆಯಲ್ಲಿ  ಬಿಜೆಪಿಯಿಂದ ಪ್ರತಿಭಟನಾ ಮೆರವಣಿಗೆ

ಕುಂಬಳೆ:  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇರಳಕ್ಕೆ ಬಂದಾಗ   ಕಪ್ಪು ಬಾವುಟ ತೋರಿಸಿ ದೇಶದ ಭದ್ರತೆಗೆ ಸವಾಲೊಡ್ಡಿದ ಹಾಗೂ  ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್‌ರಿಗೆ  ನೆಯ್ಯಾಟಿಂಗರದಲ್ಲಿ ತಡೆಯೊಡ್ಡಿ ಅವರ ವಾಹನಕ್ಕೆ ಹಾನಿಗೈದು ಬಿಯರ್ ಬಾಟ್ಲಿ ಎಸೆದು ಶಾರೀರಿಕ ವಾಗಿ ಹಲ್ಲೆಗೆ ಮುಂದಾಗಿರುವ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಕೃತ್ಯವನ್ನು ಖಂಡಿಸಿ ಬಿಜೆಪಿ ಕುಂಬಳೆ ಮಂಡಲ ಮತ್ತು ಪಂಚಾಯತ್ ಸಮಿತಿಗಳ ನೇತೃತ್ವದಲ್ಲಿ ಕುಂಬಳೆಯಲ್ಲಿ ಪ್ರತಿಭಟನಾ   ಮೆರವಣಿಗೆ  ನಡೆಸಲಾಯಿತು. ಬಳಿಕ ನಡೆದ ಸಭೆಯಲ್ಲಿ ಬಿಜೆಪಿ ಮಂಡಲ …

ಯಾದವ ಸಮಾಜದ ಹಿರಿಯ ನಿಧನ

ಬೆಳ್ಳೂರು: ಯಾದವ ಸಮಾಜದ ಹಿರಿಯ ಸದಸ್ಯ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಆರ್ಲಪದವು ದೇವಸ್ಯ ನಿವಾಸಿ ಮಹಾಲಿಂಗ ಮಣಿಯಾಣಿ (95) ಸ್ವ-ಗೃಹದಲ್ಲಿ ನಿಧನ ಹೊಂದಿದರು.  ಆರ್ಲಪದವಿನಲ್ಲಿ ತರಕಾರಿ ಅಂಗಡಿ ಹಾಗೂ ದೇವಸ್ಯದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದರು. ಯಾದವ ಸಮುದಾಯದ ಮಾರ್ಗದರ್ಶಕರಾಗಿದ್ದ ಇವರು ಆರ್ಲಪದವಿನಲ್ಲಿ ಪ್ರಥಮ ಬಾರಿಗೆ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಆರಂಭಿಸಲು ಕಾರಣಕರ್ತರಾಗಿ ದ್ದರು. ಆರ್ಲಪದವು ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇಗುಲದ ಜೀರ್ಣೋದ್ಧಾರ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು. ಮೃತರು ನಾಲ್ವರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು …

ಪಿ.ಕೆ. ಕೃಷ್ಣದಾಸ್, ಬಿಜೆಪಿ ರಾಜ್ಯ ಕಚೇರಿ ಮೇಲೆ ದಾಳಿ : ಕಾಸರಗೋಡಿನಲ್ಲಿ ಬಿಜೆಪಿಯಿಂದ ಪ್ರತಿಭಟನೆ

ಕಾಸರಗೋಡು: ಬಿಜೆಪಿ ರಾಷ್ಟ್ರೀಯ ನಿರ್ವಾಹಕ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್ ಹಾಗೂ ಬಿಜೆಪಿ ರಾಜ್ಯ ಕಚೇರಿಯಾದ ಮಾರಾರ್ಜಿ ಭವನ್‌ನ ಮೇಲೆ ನಡೆದ ದಾಳಿಯನ್ನು ಪ್ರತಿಭಟಿಸಿ ಬಿಜೆಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಸರಗೋಡಿನಲ್ಲಿ ಇಂದು ಬೆಳಿಗ್ಗೆ ಬೃಹತ್ ಮೆರವಣಿಗೆ ನಡೆಸಲಾಯಿತು. ಪ್ರತಿಭಟನಾ ಮಾರ್ಚ್‌ನ್ನು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಉದ್ಘಾಟಿಸಿದರು. ಅವರು ಮಾತನಾಡಿ, ಗೌರವಾನ್ವಿತ ಉಪರಾಷ್ಟ್ರಪತಿ ಹಾಗೂ ಕೇಂದ್ರ ಗೃಹ ಸಚಿವರಿಗೆ ಕೂಡಾ ಸಂರಕ್ಷಣೆ ಖಚಿತಪಡಿಸಲು ಸಾಧ್ಯವಾಗದ ಗೃಹ ಖಾತೆ ಕೇರಳದ್ದಾಗಿದೆ ಎಂದು     ಆರೋಪಿಸಿದರು.  ಬಿಜೆಪಿ ನೇತಾರರು ಹಾಗೂ …

ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆತ್ನಿಸಿದ ವ್ಯಾಪಾರಿ ಮೃತ್ಯು

ಬೋವಿಕಾನ: ಸೀಮೆಎಣ್ಣೆ ಹೊಯ್ದು ಬೆಂಕಿ ಹಚ್ಚಿಕೊಂಡ ವ್ಯಾಪಾರಿ ಮೃತಪಟ್ಟರು. ಬೋವಿಕಾನ ಮುಂಡಕೈಯ ನಿವಾಸಿ ಬಾಲಕೃಷ್ಣನ್ (57) ಮೃತಪಟ್ಟವರು. ಕಳೆದ ಆದಿತ್ಯವಾರ ಇವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಪರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಮಧ್ಯೆ ನಿನ್ನೆ ರಾತ್ರಿ ನಿಧನ ಹೊಂದಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಮನೆಗೆ ತರಲಾಗುವುದು. ಮುಂಡಕೈ ಮಳಿಕ್ಕಲ್‌ನಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದರು. ಮೃತರು ಪತ್ನಿ ಸುಶೀಲ, ಮಕ್ಕಳಾದ ಜಿತೇಶ್ (ಆಟೋ ಚಾಲಕ), ಚೈತನ್ಯ (ಜ್ಯೂನಿಯರ್ ಹೆಲ್ತ್ ಇನ್ಸ್‌ಪೆಕ್ಟರ್), ಅಳಿಯ ಭರತನ್, ಸಹೋದರಿ ರಮಣಿ …

ಕೋಳಿ ಅಂಕ : ಮೂವರ ಸೆರೆ, ಎರಡು ಕೋಳಿಗಳ ವಶ

ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಪುತ್ತಿಗೆ ಬಾಡೂರಿನ  ಆಮಿನ ಎಂಬಲ್ಲಿ ಕೋಳಿ ಅಂಕದಲ್ಲಿ ನಿರತವಾಗಿದ್ದ ತಂಡವನ್ನು ಬಂಧಿಸಲಾಗಿದೆ. ಬಾಡೂರುಪದವಿನ ಸತೀಶ (40), ಅಂಗಡಿಮೊಗರು ಆಮಿನ ಹೌಸ್‌ನ ಎ. ಚಂದ್ರ (47), ಕುರುಡಪದವು ಕೊಮ್ಮಂಗಳದ ಗಣೇಶ್ (35) ಎಂಬಿವರನ್ನು ಕುಂಬಳೆ ಎಸ್‌ಐ ಎನ್. ಅನೂಪ್ ನೇತೃತ್ವದಲ್ಲಿ ಬಂಧಿಸಲಾಗಿದೆ. ಸ್ಥಳದಿಂದ ಎರಡು ಕೋಳಿಗಳನ್ನು ವಶಪಡಿಸಲಾಗಿದೆ. ಹಿತ್ತಿಲಲ್ಲಿ ಕೋಳಿ ಅಂಕ ನಡೆಯುವ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಎಸ್‌ಐ ನೇತೃತ್ವದಲ್ಲಿ ನಿನ್ನೆ ಸಂಜೆ 6 ಗಂಟೆಗೆ ಪೊಲೀಸರು ಅಲ್ಲಿಗೆ ದಾಳಿ ನಡೆಸಿದ್ದಾರೆ. …

ಶಾಲೆಗೆ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಮೂವರು ಬಾಲಕಿಯರಿಗೆ ಲೈಂಗಿಕ ಕಿರುಕುಳ : ಆಟೋ  ಚಾಲಕರ ವಿರುದ್ಧ  ಕಾಸರಗೋಡು, ಬದಿಯಡ್ಕ, ವೆಳ್ಳೇರಿಕುಂಡ್‌ನಲ್ಲಿ ಪೋಕ್ಸೋ ಪ್ರಕರಣ

ಕಾಸರಗೋಡು: ವ್ಯತ್ಯಸ್ಥ ದೂರುಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ಪೊಲೀಸರು ಮೂರು ಪೋಕ್ಸೋ ಪ್ರಕರಣಗಳನ್ನು ದಾಖಲಿಸಿಕೊಂ ಡಿದ್ದಾರೆ. 11ರ ಹರೆಯದ  ಬಾಲಕಿಯ ದೂರಿನಂತೆ  ಕಾಸರಗೋಡು  ಮಹಿಳಾ ಪೊಲೀಸ್ ಠಾಣೆಯಲ್ಲಿ ಒಂದು ಕೇಸು ದಾಖಲಿಸ ಲಾಗಿದೆ. ಇದರಲ್ಲಿ ಮುಹಮ್ಮದ್ ಎಂಬಾತ ಆರೋಪಿಯಾಗಿದ್ದಾನೆ. ಶಾಲೆಗೆ  ಹೋಗುತ್ತಿದ್ದ ವೇಳೆ ಆಟೋ ಚಾಲಕನಾದ ಮುಹಮ್ಮದ್  ದೈಹಿಕ ವಾಗಿ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. 11ರ ಹರೆಯದ ಇನ್ನೋರ್ವ ಬಾಲಕಿ ನೀಡಿದ ಇದೇ ರೀತಿಯ ದೂರಿನಂತೆ ಈತನ ವಿರುದ್ಧ ಬದಿಯಡ್ಕ ಪೊಲೀಸರು ಪೋಕ್ಸೋ  ಕೇಸು ದಾಖಲಿಸಿಕೊಂಡಿದ್ದಾರೆ. 15ರ …

ಕಾರಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ಸಹಿತ ಮೂವರ ಬಂಧನ

ಕಾಸರಗೋಡು: ಪೊಲೀಸರು ನಿನ್ನೆ ನಡೆಸಿದ ಕ್ಷಿಪ್ರ ಕಾರ್ಯಾಚರ ಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 79 ಗ್ರಾಂ ಎಂಡಿಎಂಎ ಸಹಿತ ಮೂವ ರನ್ನು ಬಂಧಿಸಲಾಗಿದೆ. ಮಡಿಕೇರಿ ನಿವಾಸಿಯೂ, ಪ್ರಸುತ್ತ ಪುತ್ತಿಗೆ ಕಟ್ಟತ್ತಡ್ಕದಲ್ಲಿ ವಾಸಿಸುವ ಶರೀಫ್, ಪುತ್ತಿಗೆಯ ಅಬ್ದುಲ್ ಶಹೀರ್, ಕುಂಬಳೆ ದಂಡೆಗೋಳಿಯ ಮುಹಮ್ಮದ್ ನಾಸರ್ ಎಂಬಿವರು  ಬಂಧಿತ ಆರೋಪಿಗಳಾಗಿದ್ದಾರೆ. ರಾಜಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಕೋಳಿಚ್ಚಾಲ್‌ನಿಂದ ಇವರನ್ನು ಸೆರೆಹಿಡಿಯಲಾಗಿದೆ. ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ  ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿಯ ಅಧೀನದಲ್ಲಿರುವ ಡಾನ್ಸಾಪ್ ಟೀಂ ಹಾಗೂ ರಾಜಪುರಂ ಪೊಲೀಸರು ಸಂಯುಕ್ತ …

ಮೋಡಲಿಂಗ್, ಇನ್ನಷ್ಟು ಕಲಿಯಬೇಕೆಂಬ ಹಂಬಲಕ್ಕೆ ತಡೆ:  ಮಕ್ಕಳನ್ನು ಟ್ಯಾಂಕ್‌ನ ನೀರಿಗೆ ಮುಳುಗಿಸಿ ಕೊಲೆಗೈದ ಹೆತ್ತಮ್ಮ

ಪಾಲಕ್ಕಾಡ್:  ಕೊಳಿಂಙಂಬಾರ, ಮೇನೋನ್‌ಪ್ಪಾರ ಎಂಬಲ್ಲಿ ನೀರಿನ ಟ್ಯಾಂಕ್‌ಗೆ ಬಿದ್ದು ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಕೊಲೆಕೃತ್ಯವಾಗಿz ಯೆಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಮಕ್ಕಳ ತಾಯಿ  ನಿವೇ ದ್ಯಳೇ ಈ ಕೊಲೆ ಕೃತ್ಯ ನಡೆಸಿದ್ದಾಳೆಂದು ತಿಳಿದುಬಂದಿದ್ದು, ಈ ಹಿನ್ನೆಲೆಯಲ್ಲಿ ಆಕೆಯನ್ನು ಪೊಲೀಸರು  ಬಂಧಿಸಿದ್ದಾರೆ.  ಬಳಿಕ ನಡೆಸಿದ  ಮಾಹಿತಿ ಸಂಗ್ರಹ ವೇಳೆ ಮೋಡಲಿಂಗ್ ಆಗಲು ಆಗ್ರಹಿಸಿರುವುದಾ ಗಿಯೂ, ಅದಕ್ಕೆ ತಡೆಯಾಗುವರೆಂದು ಭಾವಿಸಿ ಮಕ್ಕಳನ್ನು ತಾನು ಕೊಲೆಗೈದಿರು ವುದಾಗಿ  ನಿವೇದ್ಯ ಹೇಳಿಕೆ ನೀಡಿದ್ದಾಳೆ. ಹೆಚ್ಚು ಕಲಿಯಲು ಆಗ್ರಹಿಸಿದ್ದೆ. ಮಕ್ಕಳಿ ರುವುದರಿಂದ ಅದು  …

ಪೋಕ್ಸೋ: ಜೀವಪರ್ಯಂತ ಶಿಕ್ಷೆಗೊಳಗಾದ ಆರೋಪಿಗೆ ಇನ್ನೊಂದು ಪ್ರಕರಣದಲ್ಲಿ 46 ವರ್ಷ ಸಜೆ

ಕಾಸರಗೋಡು: ಪೋಕ್ಸೋ ಪ್ರಕರಣವೊಂದರಲ್ಲಿ ಜೀವಪರ್ಯಂತ ಶಿಕ್ಷೆಗೊಳಗಾದ ಆರೋಪಿಗೆ ಅದೇ ರೀತಿಯ ಇನ್ನೊಂದು ಪೋಕ್ಸೋ ಪ್ರಕರಣದಲ್ಲಿ  ನ್ಯಾಯಾಲಯ ೪೬ ವರ್ಷಗಳ ಕಠಿಣ ಸಜೆ ಹಾಗೂ 62,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಹೊಸದುರ್ಗ ಪೂಜಾಂವಿ ನಿವಾಸಿ ಪಿ.ಎ. ಸಲೀಂ (37) ಎಂಬಾತನಿಗೆ ಹೊಸದುರ್ಗ ಕ್ಷಿಪ್ರ ವಿಶೇಷ ನ್ಯಾಯಾಲಯದ ನ್ಯಾಯಾ ಧೀಶರಾದ ಪಿ.ಎಂ. ಸುರೇಶ್ ಅವರು ವಿವಿಧ ಸೆಕ್ಷನ್‌ಗಳಲ್ಲಾಗಿ ಈ ಶಿಕ್ಷೆ ವಿಧಿಸಿದ್ದಾರೆ. ಈತ ಮೂಲತಃ ಕೊಡಗು ನಾಪೊಕ್ಲು ನಿವಾಸಿಯಾಗಿದ್ದಾನೆ. ಜುಲ್ಮಾನೆ ಪಾವತಿಸಿದಲ್ಲಿ ಆರೋಪಿ 1 ವರ್ಷ 2 …