ಆಡಿಟೋರಿಯಂ ಮೆನೇಜರ್ ಬಾವಿಗೆ ಬಿದ್ದು ಮೃತ್ಯು
ಬೋವಿಕ್ಕಾನ: ಕಂಗಿನ ತೋಟಕ್ಕೆ ನೀರು ಹಾಯಿಸಲು ಹೋದ ವ್ಯಕ್ತಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಬೋವಿಕ್ಕಾನ ಸಮೀಪದ ಮುಂಡಕೈ ಕೆ.ಕೆ. ವಳಪ್ಪಿನ ಕೆ. ಚಂದ್ರನ್ (45) ಸಾವನ್ನಪ್ಪಿದ ದುರ್ದೈವಿ. ಇವರು ಇರಿಯಣ್ಣಿಯ ಕೈಲಾಸ್ ಆಡಿಟೋರಿ ಯಂನ ಮೆನೇಜರ್ ಆಗಿದ್ದರು. ಮೊನ್ನೆ ಸಂಜೆ ಅಲ್ಲಿನ ಕೆಲಸ ಮುಗಿಸಿ ಮನೆಗೆ ತೆರಳಿದ ಚಂದ್ರನ್ ತಮ್ಮ ಅಡಿಕೆ ತೋಟಕ್ಕೆ ನೀರು ಹಾಯಿಸಲೆಂದು ಹೋಗುವ ವೇಳೆ ಆವರಣವಿಲ್ಲದ ಬಾವಿಗೆ ಕಾಲು ಜಾರಿ ಬಿದ್ದಿದ್ದರೆನ್ನಲಾ ಗಿದೆ. ಬಾವಿಗೆ ಬಿದ್ದ ಶಬ್ದ ಕೇಳಿದ ಸಮೀಪ …