ಹೃದಯಾಘಾತ ಯುವಕ ನಿಧನ

ಬಂದ್ಯೋಡು: ಅಡ್ಕ ಭಗವತೀನಗರ ನಿವಾಸಿ ದಿ| ಕುಂಞಿರಾಮ ಎಂಬವರ ಪುತ್ರ ಕೂಲಿ ಕಾರ್ಮಿಕ ಸುರೇಶ್ (48) ನಿಧನ ಹೊಂದಿದರು. ಹೃದಯಾಘಾತ ಮರಣಕ್ಕೆ ಕಾರಣವೆನ್ನಲಾಗಿದೆ. ಮೃತರು ತಾಯಿ ಯಮುನ, ಸಹೋದರ- ಸಹೋದರಿಯರಾದ ಗೀತ, ಶಶಿಕಲ, ಸಂತೋಷ್, ಸುಮಿತ್ರ, ಸುನಿಲ್, ಹರೀಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಬದಿಯಡ್ಕ, ಕಾಸರಗೋಡಿನಲ್ಲಿ  ಕಾಂಗ್ರೆಸ್‌ನಿಂದ ಹರ್ಷಾಚರಣೆ

ಬದಿಯಡ್ಕ: ಕೇರಳ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್‌ರನ್ನು ಆಯ್ಕೆ ಮಾಡಿರುವುದಕ್ಕೆ ಹರ್ಷ ಸೂಚಿಸಿ ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಬದಿಯಡ್ಕದಲ್ಲಿ  ಮೆರವಣಿಗೆ ನಡೆಸಲಾಯಿತು. ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ, ನೇತಾರರಾದ ಪಿ.ಜಿ. ಚಂದ್ರಹಾಸ ರೈ, ತಿರುಪತಿ ಕುಮಾರ್ ಭಟ್, ಶ್ರೀನಾಥ್ ಬದಿಯಡ್ಕ, ರಾಮ ಪಟ್ಟಾಜೆ, ನಾರಾಯಣ ಭಂಡಾರಿ, ಲೋಹಿತಾಕ್ಷ ಪಟ್ಟಾಜೆ, ಕುಮಾರನ್ ನಾಯರ್, ರಜನಿ, ರವಿ ಕುಂಟಾಲುಮೂಲೆ, ಕೃಷ್ಣ ಕುಮಾರ್ ಪಿ, ಗಿರೀಶ್, ನಿಜೀಶ್ ಪಟ್ಟಾಜೆ, ಉದಯ ಕುಂಟಾಲುಮೂಲೆ, ಸತೀಶ್ ಪೆರುಮುಂಡ, ಖಮರುದ್ದೀನ್, ವಿನ್ಸೆಂಟ್ …

ದತ್ತಿನಿಧಿ ಪ್ರಶಸ್ತಿ ಪ್ರದಾನ, ಕನ್ನಡ ಸಂಸ್ಕೃತಿ ಉತ್ಸವ ನಾಳೆ

ಪೈವಳಿಕೆ: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಇದರ ಜಂಟಿ ಆಶ್ರಯದಲ್ಲಿ ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಸಂಸ್ಕೃತಿ ಉತ್ಸವ ನಾಳೆ ಬೆಳಿಗ್ಗೆ ೯ರಿಂದ ಕುಡಾಲುಮೇರ್ಕಳ ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಲಿದೆ. ಬೆಳಿಗ್ಗೆ ೯ಕ್ಕೆ ಶೋಭಾಯಾತ್ರೆ ಆರಂಭಗೊಳ್ಳಲಿದ್ದು, ಪೈವಳಿಕೆ ಪಂ. ಅಧ್ಯಕ್ಷೆ ಬದರುನ್ನೀಸ ಸಲೀಂ, ಸೀತಾರಾಮ ಶೆಟ್ಟಿ ಭಂಡಾರಗುತ್ತು ಚಾಲನೆ ನೀಡುವರು. ಬಳಿಕ ಸುಗಮ …

ಅಸೌಖ್ಯ: ಚಿಕಿತ್ಸೆಯಲ್ಲಿದ್ದ ಮಹಿಳೆ ನಿಧನ

ಬದಿಯಡ್ಕ: ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಮಹಿಳೆ ಮೃತಪಟ್ಟರು. ಪೆರಡಾಲ ಪ್ರಶಾಂತಿ ನಿಲಯದ ಪ್ರೇಮಲತ (60) ನಿಧನ ಹೊಂದಿದವರು. ಇವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು, ಅಲ್ಲಿ ನಿಧನ ಸಂಭವಿಸಿದೆ. ಮೃತರು ಪತಿ ಕೃಷ್ಣಪ್ರಸಾದ್ ರೈ (ಪೆರಡಾಲ ಎಜ್ಯುಕೇಷನ್ ಸೊಸೈಟಿ ಮೆನೇಜಿಂಗ್ ಕಮಿಟಿ ಸದಸ್ಯ), ಪುತ್ರಿ ಪ್ರಜ್ಞ, ಅಳಿಯ ಪ್ರತಿವಿಂಧು, ಸಹೋದರರಾದ ಗಂಗಾಧರ್ ರೈ, ಲೋಕನಾಥ ಶೆಟ್ಟಿ, ಸುರೇಶ್ ರೈ, ಸಹೋದರಿಯರಾದ ಕೃಷ್ಣವೇಣಿ, ಬೇಬಿ, ಕಸ್ತೂರಿ, ಅನುರಾಧ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಲಾರಿ-ಬೈಕ್ ಢಿಕ್ಕಿ ಹೊಡೆದು ಬಿಬಿಎ ವಿದ್ಯಾರ್ಥಿ ಮೃತ್ಯು

ಕಾಸರಗೋಡು: ಲಾರಿ ಢಿಕ್ಕಿ ಹೊಡೆದು ಬೈಕ್ ಸವಾರನಾದ ವಿದ್ಯಾರ್ಥಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಉದುಮ ಕೋಟೆಕುನ್ನಿನ ನಸೀರ್- ರಸೀನಾ ದಂಪತಿ ಪುತ್ರ ಲುಕ್ಮಾನ್ (22) ಸಾವನ್ನಪ್ಪಿದ ದುರ್ದೈವಿ. ಮಂಗಳೂರಿನ ಶ್ರೀದೇವಿ ಕಾಲೇಜಿನ ಪ್ರಥಮ ವರ್ಷ ಬಿಬಿಎ ವಿದ್ಯಾರ್ಥಿಯಾಗಿರುವ ಲುಕ್ಮಾನ್ ಜಿಮ್‌ಗೆ ಹೋಗಿ ಬೈಕ್‌ನಲ್ಲಿ ನಿನ್ನೆ ರಾತ್ರಿ ಮನೆಗೆ ಹಿಂತಿರುಗುತ್ತಿದ್ದ ದಾರಿ ಮಧ್ಯೆ ಪಾಲಕುನ್ನು ಪೇಟೆಗೆ ತಲುಪಿ ದಾಗ ಕಾಸರಗೋಡು ಭಾಗದಿಂದ ಸರಕು ಹೇರಿಕೊಂಡು ಬರುತ್ತಿದ್ದ ಲಾರಿ ಬೈಕ್‌ಗೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಗಂಭೀರ …

ಯುವಕನನ್ನು ಕೊಠಡಿಯಲ್ಲಿ ಕೂಡಿ ಹಾಕಿ ಪಟಾಕಿ ಸ್ಫೋಟ: ಗಂಭೀರ ಗಾಯಗೊಂಡ ಯುವಕ ಚಿಕಿತ್ಸೆಯಲ್ಲಿ; ಸ್ನೇಹಿತನ ವಿರುದ್ಧ ಕೇಸು 

ಬದಿಯಡ್ಕ: ಯುವಕನನ್ನು ಕೊಠಡಿಯೊಳಗೆ ಕೂಡಿ ಹಾಕಿದ ಬಳಿಕ ಮಾಲೆ ಪಟಾಕಿ ಸ್ಫೋಟಿಸಿದ್ದು, ಇದರಿಂದ ಯುವಕ ಗಂಭೀರ ಗಾಯಗೊಂಡಿರುವುದಾಗಿ ದೂರಲಾಗಿದೆ. ಮಲ್ಲ ಚೋಕೆಮೂಲೆ ನಿವಾಸಿಯಾದ ಎಂ.ಅಭಿಲಾಷ್ (32) ಗಂಭೀರ ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ಘಟನೆಗೆ ಸಂಬಂಧಿಸಿ ಅಭಿಲಾಷ್ ನೀಡಿದ ದೂರಿನಂತೆ ಸ್ನೇಹಿತನಾದ ಮುಳ್ಳೇರಿಯದ ಪ್ರಣವ್ ಎಂಬಾತನ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ. ಎಪ್ರಿಲ್ 15ರಂದು ರಾತ್ರಿ 10 ಗಂಟೆಯಿಂದ 16ರಂದು ಬೆಳಿಗ್ಗೆ 8 ಗಂಟೆ ಮಧ್ಯೆ ಅಭಿಲಾಷ್‌ರನ್ನು ಮನೆಯೊಂದರ ಕೊಠಡಿಯೊಳಗೆ ಕೂಡಿ ಹಾಕಿದ …

ಕೃಷಿ ತೋಟದಲ್ಲಿ ಕಣಜದ ಹುಳು ದಾಳಿ: ಅಧ್ಯಾಪಕ ಮೃತ್ಯು; ನಾಲ್ವರು ಕಾರ್ಮಿಕರಿಗೆ ಗಾಯ

ಕಾಸರಗೋಡು: ಕೃಷಿ ತೋಟದ ಪೊದೆಗಳನ್ನು ಕಡಿಯುತ್ತಿದ್ದ ವೇಳೆ ಕಣಜದ ಹುಳುಗಳ   ದಾಳಿಗೊಳಗಾಗಿ ಅಧ್ಯಾಪಕ ಸಾವನ್ನಪ್ಪಿ ಹಲವರು ಗಾಯಗೊಂಡ ಘಟನೆ ನಡೆದಿದೆ. ಪನತ್ತಡಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಕ ರಾಜಪುರಕ್ಕೆ ಸಮೀಪದ ಬಳಾಂತೋಡು ಚಾಮುಂಡಿಕುನ್ನು ನಿವಾಸಿ ಸಿ. ವಿಜಯ್ ಕುಮಾರ್ (56) ಸಾವನ್ನಪ್ಪಿದ ದುರ್ದೈವಿ. ಆ ವೇಳೆ ಇವರ ಜತೆಗಿದ್ದ ಕಾರ್ಮಿಕರಾದ ತುಂಬೋಡಿ ನಿವಾಸಿಗಳಾದ ನಂದಕುಮಾರ್ (41), ರಾಘವನ್ (70), ಕೇಶವನ್ (53) ಮತ್ತು  ಚಂದ್ರನ್ (50) ಎಂಬವರ ಮೇಲೂ ಕಣಜದ ಹುಳ ದಾಳಿ ನಡೆಸಿದ ಪರಿಣಾಮ …

ಎಸ್‌ಎಸ್‌ಎಲ್‌ಸಿ ಫಲಿತಾಂಶ ನಾಳೆ

 ತಿರುವನಂತಪುರ:  ಎಸ್‌ಎಸ್ ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ನಾಳೆ ಅಪರಾಹ್ನ 3 ಗಂಟೆಗೆ ಪ್ರಕಟಿಸಲಾಗುವುದು. ಏಕೀಕೃತ ಸೇವಾ ಪ್ಲಾಟ್‌ಫಾಂ ಆಗಿರುವ ‘ನಮ್ಮಡೆ ಕೇರಳಂ’ ಎಂಬ ಆಪ್‌ನಲ್ಲ್ಲೂ ಫಲಿತಾಂಶ ಲಭಿಸಲಿದೆ. ಇದರ ಹೊರತಾಗಿ www.results. kite.kerala.gov.in ಎಂಬ ಕ್ಲೌಡ್ ಆಧಾರಿತ ಪೋರ್ಟಲ್ ಮತ್ತು Saphalam KITE ಎಂಬ ಮೊಬೈಲ್ ಆಪ್‌ನಲ್ಲಿ ಫಲಿತಾಂಶ ಲಭಿಸಲಿದೆ. ಸಾಧಾರಣವಾಗಿ ಶಿಕ್ಷಣ ಸಚಿವರೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಿಸುತ್ತಿದ್ದು ಆದರೆ ಈ ಬಾರಿ ಹೊಸ ಸರಕಾರ ಇನ್ನೂ ಅಸ್ತಿತ್ವಕ್ಕೆ ಬಾರದಿರುವುದರಿಂದ ಪರೀಕ್ಷಾ ಫಲಿತಾಂಶ ಪ್ರಕಟಗೊ ಳ್ಳುವಲ್ಲಿ …

ನೀಟ್ ಪರೀಕ್ಷೆ ಅವ್ಯವಹಾರ ಪ್ರತಿಭಟಿಸಿ ಎಂಎಸ್‌ಎಫ್ ಮಾರ್ಚ್: 15 ಮಂದಿ ವಿರುದ್ಧ ಕೇಸು, ಮೂವರ ಸೆರೆ

ಕುಂಬಳೆ:  ನೀಟ್ ಯುಜಿ ಪರೀಕ್ಷೆಯಲ್ಲಿ ನಡೆದ ಅವ್ಯವಹಾ ರವನ್ನು ಪ್ರತಿಭಟಿಸಿ ಎಂಎಸ್‌ಎಫ್ ನೇತೃತ್ವದಲ್ಲಿ ನಿನ್ನೆ ಕುಂಬಳೆಯಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿ ಕುಂಬಳೆ ಪೊಲೀಸರು ೧೫ ಮಂದಿ ಎಂಎಸ್‌ಎಫ್ ಕಾರ್ಯ ಕರ್ತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪೈಕಿ ಬಂದ್ಯೋಡು ಖಾಲಿದ್ ಮಂಜಿಲ್‌ನ ಮುಹಮ್ಮದ್  ಸುರ್ಫಾರಾಝ್ (31), ಅಂಗಡಿಮೊಗರು  ಪಳ್ಳಿಕ್ಕೆರೆ ಹೌಸ್‌ನ ಸವಾದ್ ಎಂ.ಪಿ (33) ಮತ್ತು ವರ್ಕಾಡಿ ಧರ್ಮನಗರ ಹೌಸ್‌ನ ಮುಹಮ್ಮದ್ ಅನ್ಸಾರ್ ಡಿ (25) ಎಂಬವರನ್ನು ಪೊಲೀಸರು ಬಂಧಿಸಿ ದ್ದಾರೆ. ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ …

ಮದುವೆಗೆ ಕೆಲವೇ ನಿಮಿಷಗಳ ಮೊದಲು ನಾಪತ್ತೆಯಾದ ಮದುಮಗ ಅತ್ಯಾಚಾರ ಪ್ರಕರಣದಲ್ಲಿ ಸೆರೆ

ಕಾಸರಗೋಡು:  ಮದುವೆ ಮುಹೂರ್ತಕ್ಕೆ  ಕೇವಲ ನಿಮಿಷಗಳ ಮೊದಲು ನಾಪತ್ತೆಯಾದ ವರ  ಅತ್ಯಾಚಾರ ಪ್ರಕರಣದಲ್ಲಿ ಸೆರೆಗೀಡಾಗಿದ್ದಾನೆ. ಬಳಾಲ್ ಸಮೀಪದ ವಿಷ್ಣುನಾರಾಯಣನ್ (24) ಎಂಬಾತನನ್ನು ವೆಳ್ಳರಿಕುಂಡು ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ವಿಷ್ಣುನಾರಾಯಣನ್ ಹಾಗೂ  ವಧುವಾದ ೨೫ರ ಹರೆಯದ ಯುವತಿ ಈ ಹಿಂದೆ ಪ್ರೇಮದಲ್ಲಿದ್ದರು. ಅನಂತರ ಎರಡೂ ಮನೆಯವರು ಮಾತನಾಡಿ ಕೈಗೊಂಡ ನಿರ್ಧಾರದಂತೆ ಇವರ ಮದುವೆಯನ್ನು ಮೇ 10ರಂದು ಬಳಾಲ್ ಸಮೀಪದ ಕ್ಷೇತ್ರವೊಂದರಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಮದುವೆಗೆ ಸಿದ್ಧತೆಗಳೆಲ್ಲಾ ಪೂರ್ಣಗೊಂಡು ವಧು ಹಾಗೂ ಸಂಬಂಧಿಕರು …