ನಗರಸಭೆ 4ನೇ ವಾರ್ಡ್ ಬಿಜೆಪಿ ಕುಟುಂಬ ಸಂಗಮ

ಕಾಸರಗೋಡು: ನಗರಸಭೆಯ 4ನೇ ವಾರ್ಡ್ ಬಿಜೆಪಿ ಕುಟುಂಬ ಸಂಗಮ ವನ್ನು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಉದ್ಘಾಟಿಸಿದರು. ಜನರಲ್ ಆಸ್ಪತ್ರೆ ಹಾಗೂ ನಗರದ ರಸ್ತೆಗಳು ರಾಜ್ಯ ದಲ್ಲಿಯೇ ಅತ್ಯಂತ ಕಳಪೆ ಮಟ್ಟದಲ್ಲಿರು ವುದು ಜಿಲ್ಲೆಯಲ್ಲಾಗಿದ್ದು, ಇದರ ಹೊಣೆಗಾರಿಕೆಯಿಂದ ಪಾರಾಗಲು ದಶಕಗಳಿಂದ ನಗರಸಭೆ ಹಾಗೂ ವಿಧಾನಮಂಡಲವನ್ನು ಪ್ರತಿನಿಧೀಕರಿ ಸುವ ಐಕ್ಯರಂಗಕ್ಕೆ ಸಾಧ್ಯವಿಲ್ಲವೆಂದು ಅಶ್ವಿನಿ ನುಡಿದರು. ನಗರಸಭಾ ವೆಸ್ಟ್ ಏರಿಯಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಅಧ್ಯಕ್ಷತೆ ವಹಿಸಿದರು. ಹಿರಿಯ ಮುಖಂಡರಾದ ಎ.ಟಿ. ನಾಯ್ಕ್, ನಾರಾಯಣನ್, ಮಂಡಲ ಅಧ್ಯಕ್ಷ, ವಾರ್ಡ್‌ನ ಅಭ್ಯರ್ಥಿ ಗುರುಪ್ರಸಾದ್ …

ಮಂಗಲ್ಪಾಡಿ, ಮಂಜೇಶ್ವರ ಪಂ.ನಿಂದ ವಿವಿಧ ಕಡೆ ಬೋಟಲ್ ಬೂತ್ ಸ್ಥಾಪನೆ

ಉಪ್ಪಳ: ತಂಪು ಪಾನೀಯ ಹಾಗೂ ನೀರನ್ನು ಕುಡಿದು ಬಾಟಲಿಯನ್ನು ಅಲ್ಲಲ್ಲಿ ಎಸೆಯು ವುದನ್ನು ತಡೆಗಟ್ಟುವ ಹಿನ್ನೆಲೆ ಯಲ್ಲಿ ಮಂಜೇಶ್ವರ ಹಾಗೂ ಮಂ ಗಲ್ಪಾಡಿ ಪಂಚಾಯತ್ ವತಿ ಯಿಂದ ಬೋಟಲ್ ಬೂತ್ ಸ್ಥಾಪಿಸಲಾಗಿದೆ. ಇನ್ನು ಸಾರ್ವ ಜನಿಕ ಸ್ಥಳದಲ್ಲಿ ಬಾಟಲಿ ಎಸೆ ಯದೆ ಸ್ವಚ್ಚತೆಯನ್ನು ಕಾಪಾಡಲು ಮಂಜೇಶ್ವರ ಪಂಚಾಯತ್‌ನಿAದ 5,22,600 ರೂಪಾಯಿ ವೆಚ್ಚದಲ್ಲಿ 25 ಕಡೆ ಬೋಟಲ್ ಬೂತ್‌ಗಳನ್ನು ಸ್ಥಾಪಿಸಲಾಗಿದೆ. ಹೊಸಂಗಡಿ ಪೇಟೆ, ಶಾಲಾ ಪರಿಸರ, ಬೀಚ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಇದನ್ನು ಇರಿಸಲಾಗಿದೆ. ಮಂಗಲ್ಪಾಡಿ ಪಂಚಾಯತ್‌ನಲ್ಲಿಯೂ ಉಪ್ಪಳ …

ಮನೆಯಂಗಳದಿಂದ ಕಳವುಗೈದ ಕಾರು: ಮಣ್ಣಾರ್‌ಕಾಡ್‌ನಲ್ಲಿ ಪತ್ತೆ; ಮೂವರ ಸೆರೆ

ಕಾಸರಗೋಡು: ಉಳಿಯತ್ತಡ್ಕ ಬಳಿಯ ಇಜ್ಜತ್‌ನಗರದ ಮೊಹಮ್ಮದ್ ಮುಸ್ತಫ ಎಂಬವರ ಮನೆ ಅಂಗಳದಿಂದ ಈ ತಿಂಗಳ ೧ರಂದು ರಾತ್ರಿ ಕಳವುಗೈದ ಟೊಯೋಟೊ ಗ್ಲಾನ್ಸರ್ ಕಾರನ್ನು ಪಾಲಕ್ಕಾಡ್‌ನ ಮಣ್ಣಾರ್‌ಕಾಡ್‌ನಲ್ಲಿ  ವಿದ್ಯಾನಗರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕಳನಾಡ್ ಮೇಲ್ಪರಂಬ ಕೆಜಿಎನ್ ಕ್ವಾರ್ಟರ್ಸ್ ನಿವಾಸಿ ರಂಜಾನ್ ಸುಲ್ತಾನ್ ಬಶೀರ್ (25), ಮೂಲತಃ ತಳಂಗರೆ ತೆರುವತ್ ನಿವಾಸಿ ಹಾಗೂ ಈಗ ಮೇಲ್ಪರಂಬದ ಕ್ವಾರ್ಟರ್ಸ್‌ವೊಂದರಲ್ಲಿ ವಾಸಿಸುತ್ತಿರುವ ಹಮ್ನಾಸ್ ಟಿ.ಎಚ್. (24), ಮತ್ತು ಪಾಲಕ್ಕಾಡ್ ಮಣ್ಣಾರ್‌ಕಾಡ್ …

ಎಮರ್ಜೆನ್ಸಿ ನಂಬ್ರಕ್ಕೆ ಕರೆಮಾಡಿ ಪೊಲೀಸರನ್ನು ಹಾದಿ ತಪ್ಪಿಸಿದ ಉಪ್ಪಳ ನಿವಾಸಿ ವಿರುದ್ಧ ಕೇಸು

ಉಪ್ಪಳ: ತುರ್ತು ಸಂದರ್ಭಗಳಲ್ಲಿ ಕರೆ ಮಾಡಲಿರುವ ಇಆರ್‌ಎಸ್‌ಎಸ್ ನಂಬ್ರಕ್ಕೆ ಕರೆ ಮಾಡಿ ಪೊಲೀಸರನ್ನು ಹಾದಿ ತಪ್ಪಿಸಿ  ಕರ್ತವ್ಯಕ್ಕೆ ತೊಂದರೆ ನೀಡಿರುವುದಾಗಿ ದೂರಲಾಗಿದೆ. ಮಂಜೇಶ್ವರ ಎಸ್‌ಐ ಎ.ವಿ. ರಾಧಾಕೃಷ್ಣನ್‌ರ ದೂರಿನಂತೆ ಉಪ್ಪಳ ನಿವಾಸಿ ಮುನೀರ್ ವಿರುದ್ಧ ಕೇಸು ದಾಖಲಿಸಲಾಗಿದೆ. ನಿನ್ನೆ ಮಧ್ಯಾಹ್ನ ೨ ಗಂಟೆಗೆ ಕೇಸಿಗೆ ಆಸ್ಪದವಾದ ಘಟನೆ ನಡೆದಿದೆ. ಮುನೀರ್ ಫೋನ್‌ನಿಂದ ಪೊಲೀಸರ ಇಆರ್‌ಎಸ್‌ಎಸ್ ನಂಬ್ರಕ್ಕೆ ಕರೆ ಮಾಡಿ ಉಪ್ಪಳ ಕೆಎಸ್‌ಇಬಿಯ ಮುಂಭಾಗದಲ್ಲಿ ಸಂಚಾರ ತಡೆ ಉಂಟಾಗುವ ರೀತಿಯಲ್ಲಿ ಕಾರನ್ನು ನಿಲ್ಲಿಸಲಾಗಿದೆ ಎಂದು ತಿಳಿಸಿದ್ದನು. ಈ ಹಿನ್ನೆಲೆಯಲ್ಲಿ …

ಲೈಂಗಿಕ ಕಿರುಕುಳ ಪ್ರಕರಣ: ರಾಹುಲ್ ಮಾಂಕೂಟತ್ತಿಲ್‌ಗೆ ಇನ್ನು ಶರಣಾಗತಿಯೇ ದಾರಿ

ತಿರುವನಂತಪುರ: ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಬಳಿಕ ಬಲವಂತವಾಗಿ ಆಕೆಯ ಗರ್ಭಪಾತ ನಡೆಸಿದ ಪ್ರಕರಣದ ಆರೋಪಿಯಾ ಗಿರುವ ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ಯನ್ನು ತಿರುವನಂತಪುರ ಜಿಲ್ಲಾ ಸೆಶನ್ಸ್ ನ್ಯಾಯಾಲಯ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ರಾಹುಲ್‌ಗೆ ತನಿಖಾ ತಂಡದ ಮುಂದೆ ನೇರವಾಗಿ ಶರಣಾ ಗುವುದಲ್ಲದೆ ಬೇರೆ ದಾರಿ ಇಲ್ಲದಂತಾಗಿದೆ. ಇದೇ ಸಂದರ್ಭದಲ್ಲಿ ರಾಹುಲ್‌ನ ಪ್ರಾಥಮಿಕ ಸದಸ್ಯತನವನ್ನು ರದ್ದುಪಡಿಸಿ ಕಾಂಗ್ರೆಸ್ ನೇತೃತ್ವ ಅವರನ್ನು ಪಕ್ಷದಿಂದಲೇ ಉಚ್ಛಾಟಿಸಿದೆ. ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ …

ಬಾಲಕಿಗೆ ಕಾರಿನಲ್ಲಿ ಕಿರುಕುಳ: ಆರೋಪಿ ಸೆರೆ

ಕಾಸರಗೋಡು: 13ರ ಹರೆಯದ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದು ಕಿರುಕುಳ ನೀಡಿದ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ. ಪರಪ್ಪ ಕ್ಲಾಯಿಕೋಡ್‌ನ ರಸಾಕ್ (60) ಎಂಬಾತನನ್ನು ವೆಳ್ಳರಿಕುಂಡ್ ಎಸ್‌ಐ ಸಿ. ಸುಮೇಶ್ ಬಾಬು ಬಂಧಿಸಿದ್ದಾರೆ. ಮದ್ರಸದಿಂದ ಮನೆಗೆ ಮರಳುತ್ತಿದ್ದ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದು ರಸಾಕ್ ಕಿರುಕುಳ ನೀಡಿರುವುದಾಗಿ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ.

ಲೀಗ್ ಅಭ್ಯರ್ಥಿಯ ಪೋಸ್ಟರ್ ನಾಶ: ಕೇಸು ದಾಖಲು

ಕಾಸರಗೋಡು: ಮೊಗ್ರಾಲ್ ಪುತ್ತೂರಿನಲ್ಲಿ ಮುಸ್ಲಿಂ ಲೀಗ್ ಅಭ್ಯರ್ಥಿಯ ಚುನಾವಣಾ ಪ್ರಚಾರ ಪೋಸ್ಟರ್‌ಗಳನ್ನು ಹರಿದು ನಾಶಗೊಳಿಸಿರುವುದಾಗಿ ದೂರಲಾಗಿದೆ.  ಈ ಬಗ್ಗೆ ಅಬ್ದುಲ್ ಖಾದರ್ ಕಡವತ್ ಎಂಬವರು ನೀಡಿದ ದೂರಿನಂತೆ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಗಲಭೆ ಸೃಷ್ಟಿಸಲು ಯತ್ನಿಸಲಾಯಿತೆಂಬ ಆರೋಪದಂತೆ ಕೇಸು ದಾಖಲಿಸಲಾಗಿದೆ. ಮೊಗ್ರಾಲ್ ಪುತ್ತೂರು ಪಂಚಾಯತ್ ೧ನೇ ವಾರ್ಡ್‌ನ ಮುಸ್ಲಿಂ ಲೀಗ್ ಅಭ್ಯರ್ಥಿ ಧರ್ಮಪಾಲನ್ ದಾರಿಲ್ಲತ್ ಎಂಬವರ ಚುನಾವಣಾ ಪ್ರಚಾರಾರ್ಥ ಮೊಗರಿನಲ್ಲಿರುವ ಮನೆ ಹಿತ್ತಿಲುಗಳಲ್ಲಿ ಸ್ಥಾಪಿಸಿದ್ದ ಪೋಸ್ಟರ್‌ಗಳನ್ನು ನಾಶಗೊಳಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಚೆರ್ಕಳದಲ್ಲಿ ಸರ್ವೀಸ್ ರಸ್ತೆ ದುರಸ್ತಿ ವಿಳಂಬಗತಿಯಲ್ಲಿ: ಸಂಚಾರಕ್ಕೆ ತೊಂದರೆ

ಕಾಸರಗೋಡು: ತಲಪಾಡಿ-ಚೆಂಗಳ ರೀಚ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ಸರ್ವೀಸ್ ರಸ್ತೆಗಳ ಕೆಲಸಗಳು ಅಂತಿಮ ಹಂತದಲ್ಲಿದೆಯೆಂದು ನಿರ್ಮಾಣ ಕಂಪೆನಿ ಅಧಿಕಾರಿಗಳು ಹಕ್ಕು ಮಂಡಿಸುತ್ತಿದ್ದರೂ ಚೆರ್ಕಳದಲ್ಲಿ ಸರ್ವೀಸ್ ರಸ್ತೆಗಳ ನಿರ್ಮಾಣ ಈಗಲೂ  ವಿಳಂಬಗತಿಯಲ್ಲೇ ಸಾಗುತ್ತಿದೆ. ಚೆಂಗಳದಿಂದ ಚೆರ್ಕಳದವರೆಗಿರುವ ಸರ್ವೀಸ್ ರಸ್ತೆಯ ನಿರ್ಮಾಣದಲ್ಲಿ ನಿಧಾನಗತಿ ಕಂಡುಬರುತ್ತಿದ್ದು, ಇದರಿಂದರಿಂದಾಗಿ ಇಲ್ಲಿ ಸಂಚಾರ ಸಮಸ್ಯೆ, ಕಾಲ್ನಡೆಗೆ ಪ್ರಯಾಣಿಕರಿಗೆ ತೊಂದರೆ ಮುಂದುವರಿಯುತ್ತಿದೆ. ಸರ್ವೀಸ್ ರಸ್ತೆ ನಿರ್ಮಾಣ ನಿಧಾನಗತಿಯಲ್ಲಿರುವಂತೆಯೇ ಅಗಲ ಕಿರಿದಾದ ಈ ರಸ್ತೆಯಲ್ಲಿ ದ್ವಿಮುಖ ಸಂಚಾರ ಏರ್ಪಡಿಸಿರುವುದು ಪ್ರಯಾಣಿಕರಿಗೆ ಹಾಗೂ ವಾಹನಗಳಿಗೆ ಅವಳಿ ಸಂಕಷ್ಟ ತಂದಿತ್ತಿದೆ. …

ಶಾಲೆಗೆ ತೆರಳುತ್ತಿದ್ದ 9ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಕೆಎಸ್‌ಆರ್‌ಟಿಸಿ ನಿರ್ವಾಹಕನಿಗೆ 5 ವರ್ಷ ಸಜೆ

ತಿರುವನಂತಪುರ: ಶಾಲೆಗೆ ತೆರಳುತ್ತಿದ್ದ 9ನೇ ತರಗತಿ ವಿದ್ಯಾರ್ಥಿನಿ ವಿರುದ್ಧ ಲೈಂಗಿಕ ಅತಿಕ್ರಮಣ ನಡೆಸಿರುವುದಾಗಿ ನೀಡಿದ ದೂರಿನಂತೆ ಕೆಎಸ್‌ಆರ್‌ಟಿಸಿ ನಿರ್ವಾಹಕನಿಗೆ ನ್ಯಾಯಾಲಯ ೫ ವರ್ಷದ ಸಜೆ ಹಾಗೂ 25,೦೦೦ ರೂ. ದಂಡ ಶಿಕ್ಷೆ ವಿಧಿಸಿದೆ. ತಿರುವನಂತಪುರ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಎಂ.ಪಿ. ಶಿಬು ಈ ಶಿಕ್ಷೆ ಘೋಷಿಸಿದ್ದಾರೆ. ವೆಂಬಾಯ ವೇಟಿನಾಡ್ ರಾಜ್‌ಭವನ್ ನಿವಾಸಿ ಸತ್ಯರಾಜ್ (53)ನಿಗೆ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ. 2023 ಆಗಸ್ಟ್ 4ರಂದು ಘಟನೆ ನಡೆದಿತ್ತು. ಶಾಲೆಗೆ ತೆರಳಲು ಬಸ್ಸೇರಿದ ೧೪ರ ಹರೆಯದ ಬಾಲಕಿಯನ್ನು ನಿರ್ವಾಹಕ …

ಕುಂಬಳೆ ಪಂ. ಕೊಡ್ಯಮ್ಮೆಯಲ್ಲೂ ಜಿದ್ದಾಜಿದ್ದಿನ ಹೋರಾಟ

ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್ 9ನೇ ವಾರ್ಡ್ ಆಗಿರುವ ಕೊಡ್ಯಮ್ಮೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಜಿದ್ದಾಜಿದ್ದಿನ ಹೋರಾಟ ಕಂಡು ಬಂದಿದೆ. ಮುಸ್ಲಿಂ ಲೀಗ್ ಅಭ್ಯರ್ಥಿ ಹಾಗೂ ಸ್ವತಂತ್ರ ಅಭ್ಯರ್ಥಿ ಮಧ್ಯೆ ಹಣಾಹಣಿ ನಡೆಯುತ್ತಿದೆ. ಇವರ ಹೊರತು ಸಿಪಿಎಂ ಹಾಗೂ ಬಿಜೆಪಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮುಸ್ಲಿಂ ಲೀಗ್‌ನಿಂದ ಅಬ್ಬಾಸ್ ಸ್ಪರ್ಧಿಸುತ್ತಿದ್ದಾರೆ. ಸಾರ್ವಜನಿಕ ರಂಗದಲ್ಲಿ ಹಾಗೂ ಅಧ್ಯಾಪನದಲ್ಲಿ ಪರಿಣಿತರಾದ ಇವರು ಹಲವು ಕಾಲದಿಂದ ಲೀಗ್‌ನ ಸಕ್ರಿಯ ಕಾರ್ಯ ಕರ್ತನಾಗಿ ದುಡಿಯುತ್ತಿದ್ದಾರೆ. ಇದರಿಂದ ಪರಂಪರಾಗತ ಲೀಗ್ ಮತಗಳು ಇವರಿಗೆ ಅನುಕೂಲವಾಗಲಿದೆ …