2990 ಪ್ಯಾಕೆಟ್ ತಂಬಾಕು ಉತ್ಪನ್ನ ಸಹಿತ ಓರ್ವ ಸೆರೆ

ಉಪ್ಪಳ: ಗೋಣಿಚೀಲದಲ್ಲಿ ತುಂಬಿಸಿ ಮಾರಾಟಕ್ಕೆ ಕೊಂಡೊಯ್ಯುತ್ತಿದ್ದ ಭಾರೀ ಪ್ರಮಾಣದ ತಂಬಾಕು ಉತ್ಪನ್ನಗಳನ್ನು ವಶಪಡಿಸಿ ಓರ್ವನನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶ ನಿವಾಸಿಯೂ, ಪ್ರಸ್ತುತ  ಕುಂಜತ್ತೂರು ಮಾಸ್ಕೋಹಾಲ್ ಬಳಿ ವಾಸಿಸುವ ಭರತ್ ಸೋಂಕಾರ್ (30) ಎಂಬಾತನನ್ನು ಮಂಜೇಶ್ವರ ಎಸ್‌ಐ ಶಬರಿಕೃಷ್ಣ ಹಾಗೂ ತಂಡ ಬಂಧಿಸಿದೆ. ಬಂಧಿತನ ಕೈಯಿಂದ ವಿವಿಧ ರೀತಿಯ 2990  ಪ್ಯಾಕೆಟ್ ತಂಬಾಕು ಉತ್ಪನ್ನಗಳನ್ನು ವಶಪಡಿಸಲಾಗಿದೆ. ನಿನ್ನೆ ಮಧ್ಯಾಹ್ನ 1.15ರ ವೇಳೆ ಕುಂಜತ್ತೂರಿನಲ್ಲಿ ಎಸ್‌ಐ ಶಬರಿಕೃಷ್ಣನ್ ನೇತೃತ್ವದ ಪೊಲೀಸರು ಗಸ್ತು ನಡೆಸುತ್ತಿದ್ದಾಗ ಭರತ್ ಸೋಂಕಾರ್ ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದಾನೆ. …

ಮನೆಗೆ ಸಿಡಿಲಿನ ಆಘಾತ: ವ್ಯಾಪಕ ಹಾನಿ

ನೀರ್ಚಾಲು: ಸಿಡಿಲಿನ ಆಘಾತದಿಂದ ಮನೆಯ ವಿದ್ಯುತ್ ಉಪಕರಣಗಳು ಹಾನಿಗೀಡಾಗಿ ವ್ಯಾಪಕ ನಾಶನಷ್ಟ ಸಂಭವಿಸಿದೆ.  ಬಾಪಾಲಿಪೊನದ ಬಿ.ಎಂ. ಅಲಿಕುಂಞಿ ಎಂಬವರ ಮನೆಗೆ ಸಿಡಿಲು ಬಡಿದಿದೆ. ಇದರಿಂದ  ವಿದ್ಯುತ್ ವಯರಿಂಗ್, ಮೋಟಾರು, ವಾಷಿಂಗ್ ಮೆಶಿನ್ ಮೊದಲಾದ ಉಪಕರಣಗಳು ಹಾನಿಗೀಡಾಗಿವೆ.  ಮನೆಯ ಒಂದು ಬದಿಯ ಕಾಂಕ್ರೀಟ್ ತುಂಡಾಗಿ ಬಿದ್ದಿದೆ. ನಿನ್ನೆ ಸಂಜೆ ಸಿಡಿಲು ಬಡಿದಿದ್ದು ಮನೆ ಸಮೀಪದ ತೆಂಗಿನ ಮರಕ್ಕೂ ಹಾನಿಯುಂಟಾಗಿದೆ.  ಸಿಡಿಲಿನ ಸದ್ದು ಕೇಳಿ ಮನೆಯವರು ಹೊರಗೆ ಓಡಿದ್ದು ಇದರಿಂದ ಅಪಾಯದಿಂದ ಪಾರಾಗಿದ್ದಾರೆ.

ರಾಜ್ಯದ ಜನರ ಮನಸ್ಸಲ್ಲಿ ಪ್ರಧಾನ ವಿಪಕ್ಷ ಬಿಜೆಪಿ- ವಿ.ಕೆ. ಸಜೀವನ್

ಕಾಸರಗೋಡು: ವಿಧಾನಸಭಾ ಚುನಾವಣೆಯ ಬಳಿಕ ಜನರ ಮನಸ್ಸಲ್ಲಿ ಪ್ರಧಾನ ವಿಪಕ್ಷದ ಪಾತ್ರವನ್ನು ಬಿಜೆಪಿ ನಿರ್ವಹಿಸುತ್ತಿದೆ ಎಂದು ಬಿಜೆಪಿ ರಾಜ್ಯ ಸೆಲ್ ಕೋ-ಆರ್ಡಿನೇಟರ್ ವಿ.ಕೆ. ಸಜೀವನ್ ನುಡಿದರು. ಶಬರಿಮಲೆ ಚಿನ್ನ ದರೋಡೆ, ಸಿಎಂಆರ್‌ಎಲ್- ಎಕ್ಸಾಲಾಜಿಕ್ ಅವ್ಯವಹಾರ ಸಹಿತ ವಿವಿಧ ವಿಷಯಗಳನ್ನು ವಿಧಾನಸಭೆಯ ಹೊರಗೆ ಹಾಗೂ ಒಳಗೆ ಬಿಜೆಪಿ ಶಾಸಕರು ಮತ್ತೆ ಸಕ್ರಿಯಗೊಳಿಸಿರುವುದಾಗಿ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಪ್ರಶಿಕ್ಷಣ್ ಮಹಾ ಅಭಿಯಾನಕ್ಕೆ ಸಂಬಂಧಿಸಿ ನಡೆದ ಜಿಲ್ಲಾ ನಾಯಕತ್ವ ಸಭೆ ಉದ್ಘಾಟಿಸಿ ಅವರು ಹೇಳಿದರು. ಬಿಜೆಪಿಯ ಆಶಯ, ಇತಿಹಾಸ, ಕಾರ್ಯಯೋಜನೆ, ಉದ್ದೇಶ …

ಹಿರಿಯ ಬಡಗಿ ನಿಧನ

ಬಾಯಾರು: ಬಳ್ಳೂರು ನಿವಾಸಿ ವೆಂಕಟ್ರಮಣ ಆಚಾರ್ಯ (88) ನಿನ್ನೆ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಇವರು ಬಡಗಿ ಹಾಗೂ ಕೃಷಿಕರಾಗಿದ್ದರು. ಬಾಯಾರು ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಹಿರಿಯ ಸದಸ್ಯರಾಗಿದ್ದರು. ಮೃತರು ಪತ್ನಿ ಯಶೋದ, ಮಕ್ಕಳಾದ ವಿಕ್ರಮ, ಭುವನೇಶ್ವರಿ, ಸರೋಜಿನಿ, ಶಶಿಧರ, ತಾರಾನಾಥ, ವನಿತಾ, ಸೊಸೆಯಂದಿ ರಾದ ರೇಣುಕಾ, ಶ್ಯಾಮಲ, ಶೋಭ, ಅಳಿಯಂದಿರಾದ ಲತೇಶ, ಪುಷ್ಪಾಕರ, ವಿನೋದ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಓರ್ವ ಸಹೋದರ ದಾಮೋದರ ಆಚಾರ್ಯ, ಸಹೋದರಿಯರಾದ ಪಾರ್ವತಿ, ಚಂದ್ರಾವತಿ ಈ ಹಿಂದೆ …

ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯೇರಿಕೆ ವಿರುದ್ಧ ಸಿಐಟಿಯುನಿಂದ ಹೊಸಂಗಡಿ ಅಂಚೆಕಚೇರಿ ಮುಂದೆ ಧರಣಿ

ಮಂಜೇಶ್ವರ: ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಗೆದುರಾಗಿ ಹೊಸಂಗಡಿ ಪೋಸ್ಟ್ ಆಫೀಸ್ ಮುಂದೆ ಸಿ.ಐ.ಟಿ.ಯು ಧರಣಿ ನಡೆಸಿದೆ. ಸಿ.ಐ.ಟಿ.ಯು ಜಿಲ್ಲಾ ಉಪಾಧ್ಯಕ್ಷೆ ಬೇಬಿ ಶೆಟ್ಟಿ ಉದ್ಘಾಟಿಸಿ ಕೇಂದ್ರ ಸರಕಾರ ಪಶ್ಚಿಮ ಏಷ್ಯಾ ಯುದ್ದದ ಕಾರಣ ನೀಡಿ ಬಂಡವಾಳ ಶಾಹಿಗಳಿಗೆ ದೇಶದ ಬಡಜನತೆಯನ್ನೂ ಕೊಳ್ಳೆ ಒಡೆಯಲು ಲೈಸೆನ್ಸ್ ಕೊಟ್ಟಂತಾಗಿದೆ. ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಪೆಟ್ರೋಲ್ ಬೆಲೆ ಕಡಿಮೆ ಗೊಳಿಸಲು ಮುಂದಾಗಬೇಕು ಎಂದರು. ಚಂದ್ರ ನಾಯ್ಕ್ ಅಧ್ಯಕ್ಷತೆ ವಹಿಸಿದರು. ಸತೀಶ್ …

ರಸ್ತೆ ಮಧ್ಯೆ ಕೆಟ್ಟುಹೋದ ಲಾರಿ: ವಾಹನ ಸಂಚಾರ ಮೊಟಕುಗೊಂಡು ಪ್ರಯಾಣಿಕರಿಗೆ ಸಮಸ್ಯೆ

ಉಪ್ಪಳ: ಮರದ ದಿಮ್ಮಿ ಸಾಗಾಟದ ಲಾರಿಯೊಂದು ಬಾಯಾರು ಬಳಿಯ ಕೊಜಪೆಯಲ್ಲಿ ಕೆಟ್ಟು ಹೋಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ನಡೆದಿದೆ. ಮುಳಿಗದ್ದೆ-ಬೆರಿಪದವು ರಸ್ತೆಯ ಕೊಜಪೆ ಎಂಬಲ್ಲಿ ಇಕ್ಕಟ್ಟಾದ ಏರು ರಸ್ತೆಯಲ್ಲಿ ಬೆರಿಪದವು ಭಾಗದಿಂದ ಉಪ್ಪಳ ಭಾಗಕ್ಕೆ ಸಂಚರಿಸುತ್ತಿದ್ದ ಲಾರಿ ರಸ್ತೆ ಮಧ್ಯದಲ್ಲಿ ಕೆಟ್ಟು ಹೋಗಿತ್ತು. ಇದರಿಂದ ವಾಹನ ಸಂಚಾರಕ್ಕೆ ಹರಸಾಹಸ ಪಡಬೇಕಾ ಯಿತು.ಉಪ್ಪಳದಿಂದ ಪೆರ್ಲ, ಬೆರಿಪದವು, ಬಳ್ಳೂರು ಕಡೆಗಳಿಗೆ ಬಸ್‌ಗಳು ಬಾಯಾರು ಸೊಸೈಟಿ, ಕನಿಯಾಲ ಮೂಲಕ ಸುತ್ತು ಬಳಸಿ ಸಂಚಾರ ನಡೆಸಬೇಕಾದ ಅವಸ್ಥೆ ಉಂಟಾಗಿದೆ. ಇದರಿಂದ ಸಾರ್ವಜನಿಕರು …

ಎರಡೂವರೆ ವರ್ಷದ ಮಗುವಿನ ಚಿಕಿತ್ಸೆಗೆ ಸಹಾಯ: ಡಿವೈಎಫ್‌ಐಯಿಂದ  ಬಿರಿಯಾಣಿ ಚಾಲೆಂಜ್

ಕುಂಬಳೆ: ಗಂಭೀರ ಅಸೌಖ್ಯ ಬಾಧಿಸಿದ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ರಹೀಫ್ ಎಂಬ ಎರಡೂವರೆ ವರ್ಷದ ಮಗುವಿನ ಚಿಕಿತ್ಸೆ ಖರ್ಚಿಗೆ ಹಣ ಸಂಗ್ರಹಿಸುವ ಅಂಗವಾಗಿ ಡಿವೈಎಫ್‌ಐ ಪೆರ್ಮುದೆ ಟೌನ್ ಕಮಿಟಿ ಬಿರಿಯಾಣಿ ಚಾಲೆಂಜ್ ನಡೆಸಿತು. ಈ ಮೂಲಕ ಲಭಿಸುವ ಹಣವನ್ನು ಕಮಿಟಿ  ಪೆರ್ಮುದೆ ಟ್ರಸ್ಟ್ ಅಕೌಂಟ್‌ಗೆ ಹಸ್ತಾಂತರಿಸಲಾಗುವುದು. ಪೆರ್ಮುದೆ ನಿವಾಸಿ ರೌಫ್ ಎಂಬವರ ಪುತ್ರನಾದ ರಹೀಫ್‌ಗೆ ಗಂಭೀರ ಅಸೌಖ್ಯ ಬಾಧಿಸಿದ್ದು, ಕಳೆದ ಮೂರು ತಿಂಗಳಿಂದ ಬೆಂಗಳೂರಿನಲ್ಲಿ ಚಿಕಿತ್ಸೆಯಲ್ಲಿದ್ದಾನೆ. ಮುಂದಿನ ಚಿಕಿತ್ಸೆಗೆ ಇನ್ನು ಕೂಡಾ ಭಾರೀ ಮೊತ್ತ ಅಗತ್ಯವಿದೆ. ಆದ್ದರಿಂದ …

ಕೆವಿವಿಇಎಸ್ ನೀರ್ಚಾಲು ಘಟಕ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

ನೀರ್ಚಾಲು: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ನೀರ್ಚಾಲು ಘಟಕದ ದ್ವೈವಾರ್ಷಿಕ ಮಹಾಸಭೆ ಇತ್ತೀಚೆಗೆ ವ್ಯಾಪಾರಿ ಭವನದಲ್ಲಿ ನಡೆಯಿತು. ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾಧ್ಯಕ್ಷ ಅಹಮ್ಮದ್ ಶರೀಫ್, ಪ್ರಧಾನ ಕಾರ್ಯದರ್ಶಿ ಕೆ.ಜೆ. ಸಜಿ,ಕಾರ್ಯದರ್ಶಿ ದಾಮೋ ದರನ್ ಕುತ್ತಿಕ್ಕೋಲ್,  ಬದಿಯಡ್ಕ ವಲಯ ಸಂಚಾಲಕ ಕುಂಜಾರು ಮೊಹಮ್ಮದ್ ಹಾಜಿ ಮೊದಲಾದವರು ಭಾಗವಹಿಸಿ ದರು. ೨೦೨೬-೨೮ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಭಟ್ ಎಂ, ಪ್ರಧಾನ ಕಾರ್ಯದರ್ಶಿಯಾಗಿ ರವಿ ನೀರ್ಚಾಲು, ಕೋಶಾಧಿಕಾರಿಯಾಗಿ ಥೋಮಸ್ ಡಿ’ಸೋಜಾ …

ಬಿಎಂಎಸ್ ವರ್ಕಾಡಿ ಪಂಚಾಯತ್ ಸಮ್ಮೇಳನ

ಮಂಜೇಶ್ವರ: ಬಿಎಂಎಸ್ ವರ್ಕಾಡಿ ಪಂಚಾಯತ್ ಸಮ್ಮೇಳನ ಸುಂಕದಕಟ್ಟೆ ಬಿಜೆಪಿ ಕಾರ್ಯಾಲಯ ದಲ್ಲಿ ನಡೆಯಿತು. ಸಮಿತಿ ಅಧ್ಯಕ್ಷ ವನಿತಾ ಜೆ. ನಾÊಕ್‌ರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನವನ್ನು ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ ಉದ್ಘಾಟಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಯಶವಂತಿ ಬೆಜ್ಜ. ಪಂಚಾಯತ್ ಸದಸ್ಯರಾದ ಚಂದ್ರಶೇಖರ ವರ್ಕಾಡಿ, ತುಳಸಿ ವರ್ಕಾಡಿ, ರವಿ ಎಂ.ಕೆ. ಕೋಳ್ಯೂರು ಶುಭಾಶಂಸನೆಗೈದರು. ಜಿಲ್ಲಾ ಜೊತೆ ಕಾರ್ಯದರ್ಶಿ ಹರೀಶ್ ಕುದ್ರೆಪ್ಪಾಡಿ ಸಮಾರೂಪ ಭಾಷಣ ಮಾಡಿದರು. ನೂತನ ಸಮಿತಿ ರೂಪೀಕರಿಸಲಾಯಿತು. ಅಧ್ಯಕ್ಷರಾಗಿ ಸುನಿಲ್ ಬಟ್ಟೆಕಲ್ಲು, ಉಪಾಧ್ಯಕ್ಷರಾಗಿ …

ಪೆಟ್ರೋಲ್ ಬಂಕ್‌ನಲ್ಲಿ ಇಬ್ಬರ ಮೇಲೆ ಹಲ್ಲೆ: ಗ್ಲಾಸ್‌ಗೆ ಹಾನಿ

ಕುಂಬಳೆ: ಪೆಟ್ರೋಲ್ ಬಂಕ್‌ನಲ್ಲಿ ಬೈಕ್ ರೈಸ್ ಮಾಡಿದನ್ನು ಪ್ರಶ್ನಿಸಿದ ಇಬ್ಬರ ವಿರುದ್ಧ ಹಲ್ಲೆ ನಡೆಸಿ, ಹೆಲ್ಮೆಟ್ ನಿಂದ ಬಂಕ್‌ನ ಕಚೇರಿಯ ಗಾಜು ಒಡೆದು 5000 ರೂ. ನಷ್ಟ ಉಂಟುಮಾ ಡಿದ ದೂರಿನಂತೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಅದಕ್ಕೆ ಸಂಬಂಧಿಸಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕೊಪಾಡಿ ಕಡಪ್ಪುರ ನಿವಾಸಿ ಹಾಗೂ ಪ್ರಸ್ತುತ ಪೆಟ್ರೋಲ್ ಬಂಕ್‌ನ ಕಾರ್ಮಿಕರೂ ಆಗಿರುವ ಅನೂಪ್ (22) ಮತ್ತು ಕೊಪಾಡಿಯ ಕಿಶೋರ್ (20) ಎಂಬವರ ಮೇಲೆ ಹಲ್ಲೆ ನಡೆಸಲಾಗಿದ್ದು, ಇದರಂತೆ ಅನೂಪ್ ನೀಡಿದ ದೂರಿನಂತೆ …