ಉಪ್ಪಳ ನಿವಾಸಿ ದುಬಾಯಿಯಲ್ಲಿ ನಿಧನ
ಉಪ್ಪಳ: ಉಪ್ಪಳ ನಿವಾಸಿ ಯುವಕ ದುಬಾಯಿಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಉಪ್ಪಳ ಹಿದಾಯತ್ ಬಜಾರ್ ನಿವಾಸಿ ಅಬ್ದುಲ್ ರಹ್ಮಾನ್ ಎಂಬವರ ಪುತ್ರ ಮುಹಮ್ಮದ್ ರಫೀಕ್ (27) ಮೃತಪಟ್ಟ ಯುವಕನಾಗಿದ್ದಾರೆ. ಇವರು ದುಬಾಯಿಯ ಸೂಪರ್ ಮಾರ್ಕೆಟ್‌ನಲ್ಲಿ ಕೆಲಸ ನಿರ್ವಹಿಸು ತ್ತಿದ್ದರು. ಮೊನ್ನೆ ಸಂಜೆ ವಾಸಸ್ಥಳದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದ ಇವರನ್ನು ಅಲ್ಲಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಯಾಗದೆ ನಿನ್ನೆ ಸಂಜೆ ಮೃತಪಟ್ಟಿರು ವುದಾಗಿ ಮನೆಯವರಿಗೆ ಮಾಹಿತಿ ಲಭಿಸಿದೆ. ಕೆಎಂಸಿಸಿ ನೇತಾರರನ್ನು ಸಂಪರ್ಕಿಸಿ ಮೃತದೇಹವನ್ನು ಊರಿಗೆ ತರಲಿರುವ ಕ್ರಮ …