ಲಕ್ಷ್ಮೀನಾರಾಯಣ ಭಟ್‌ನಿಧನ

ಕಾಸರಗೋಡು: ಪಯ್ಯನ್ನೂರು ಪುರಚ್ಚೇರಿಯಲ್ಲಿ ವಾಸಿಸುತ್ತಿದ್ದ ಲಕ್ಷ್ಮೀ ನಾರಾಯಣ ಭಟ್ (77) ನಿಧನ ಹೊಂದಿದರು. ಮೃತರು ಪತ್ನಿ ತೆಕ್ಕಿಲೆ ಮಠತ್ತಿಲ್‌ನ ಶಾಂತ ಕುಮಾರಿ,  ಮಕ್ಕಳಾದ  ರಶ್ಮಿ (ಶ್ರೀ ಪುಷ್ಪಕ ಬ್ರಾಹ್ಮಣ ಸೇವಾ ಸಂಘ ಕಾಸರಗೋಡು ಶಾಖೆ ಸದಸ್ಯೆ), ಹರಿಗೋವಿಂದ್, ಅಳಿಯ ಕೃಷ್ಣ ಪ್ರಸಾದ್ ಕಾಸರಗೋಡು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಶ್ರೀ ಪುಷ್ಪಕ ಬ್ರಾಹ್ಮಣ ಸೇವಾ ಸಂಘ ಕಾಸರಗೋಡು ಶಾಖೆ ಸಂತಾಪ ಸೂಚಿಸಿದೆ.

ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಹೊಸದುರ್ಗ: ನೀಲೇಶ್ವರ ಪಟ್ಟೇನದಲ್ಲಿ ಹೋಟೆಲ್ ನಡೆಸುತ್ತಿದ್ದ ವ್ಯಕ್ತಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಟ್ಟೇನ ವರಪ್ರಾತ್ ಕೃಷ್ಣನ್ ನಾಯರ್ (74) ಮೃತಪಟ್ಟವರು.  ಇಲ್ಲಿನ ಬ್ಲೋಕ್ ಕಚೇರಿಯ ಲಿಂಕ್ ರಸ್ತೆ ಬದಿ ಹೋಟೆಲ್ ನಡೆಸುತ್ತಿದ್ದರು. ನೀಲೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ಮಹಜರು ನಡೆಸಿದ್ದು, ಮೃತದೇಹವನ್ನು ಕಾಞಂ ಗಾಡ್ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ. ಮೃತರು ಪತ್ನಿ ಕೆ.ವಿ. ಜಾನಕಿ, ಮಕ್ಕಳಾದ ಕೆ.ವಿ. ಮಿನಿ ಶ್ಯಾಮಲ, ಕೆ.ವಿ. ಬಿಂದು, ಅಳಿಯಂದಿ ರಾದ ಭಾಸ್ಕರನ್, ರವೀಂದ್ರನ್ ಹಾಗೂ ಅಪಾರ ಬಂಧು …

ಕಿದೂರಿನಲ್ಲಿ ಕೋಳಿ ಅಂಕ : ಮೂವರ ಸೆರೆ; ಹಣ, ಕೋಳಿಗಳ ವಶ

ಕುಂಬಳೆ:  ಕಿದೂರು ಶ್ರೀ ಮಹಾದೇವ ಕ್ಷೇತ್ರ ಸಮೀಪದ  ಹಿತ್ತಿಲಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಕುಂಬಳೆ ಪೊಲೀಸರು ದಾಳಿ ನಡೆಸಿ ಮೂರು ಮಂದಿಯನ್ನು ಬಂಧಿಸಿದ್ದಾರೆ. ಅವರ ಕೈಯಿಂದ 2 ಕೋಳಿಗಳನ್ನು  ಹಾಗೂ ೧೦೩೦ ರೂಪಾಯಿ ವಶಪಡಿಸಲಾಗಿದೆ.  ಬೇಳ ಚೌಕಾರಿನ ಅಕ್ಷಯ್ (34), ಕಿದೂರು ಶಾಲೆ ಬಳಿಯ ಜನಾರ್ದನ (35), ಮೀಯಪದವು ಅಡ್ಕತ್ತಗುರಿ ಯ ಗಂಗಾಧರ ಮೂಲ್ಯ (63) ಎಂಬಿವರನ್ನು ಕುಂಬಳೆ ಎಸ್‌ಐ ಕೆ.ಪಿ. ಗಣೇಶನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.  ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯ ಹಿನ್ನೆಲೆಯಲ್ಲಿ  …

ಪೆರಿಂಗಡಿಯಲ್ಲಿ ಕಡಲ್ಕೊರೆತ ಮುಂದುವರಿಕೆ ರಸ್ತೆ, ಮೈದಾನ ಸಮುದ್ರಪಾಲು ಭೀತಿ

ಉಪ್ಪಳ: ಮಂಗಲ್ಪಾಡಿ ಪಂಚಾ ಯತ್ ವ್ಯಾಪ್ತಿಯ ಪೆರಿಂಗಡಿಯಲ್ಲಿ ಕಳೆದ ಒಂದು ವಾರದಿಂದ ಕಡಲ್ಕೊ ರೆತ ಮುಂದುವರಿಯುತ್ತಿದ್ದು, ಇಲ್ಲಿನ ರಸ್ತೆ, ಮೈದಾನ ಸಮುದ್ರ ಪಾಲಾಗಿದೆ. ಹಲವಾರು ಕುಟುಂಬಗಳು ಆತಂಕದಲ್ಲಿದೆ. ಈ ಪರಿಸರದಲ್ಲಿ ಕಡಲ್ಕೊರೆತವನ್ನು ತಡೆಯಲು ವರ್ಷಗಳ ಹಿಂದೆ ನಿರ್ಮಿಸಿದ ಮರಳು ಚೀಲ ಕೂಡ ಸಮುದ್ರಪಾಲಾಗುತ್ತಿದೆ. ಇದೇ ರೀತಿ ಮುಂದುವರಿದಲ್ಲಿ ಮನೆಗಳು ನೀರು ಪಾಲಾಗುವ ಸಾಧ್ಯತೆ ಇದ್ದು ತಡೆಗೋಡೆ ನಿರ್ಮಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ. ಪೆರಿಂಗಡಿ- ಮುಟ್ಟಂಗೇಟ್ ಸಮುದ್ರ ತೀರ ರಸ್ತೆ ಕಳೆದ ವರ್ಷ ಸಮುದ್ರಪಾಲಾಗಿ ಈಗ ವಾಹನ ಸಂಚಾರ ಮೊಟಕುಗೊಂಡಿದೆ.

ಪಿಲಿಕ್ಕೋಡ್ ಉಪ ಚುನಾವಣೆ: ಎಡರಂಗ ಅಭ್ಯರ್ಥಿಗೆ ಜಯ

ಕಾಸರಗೋಡು: ಪಿಲಿಕ್ಕೋಡ್ ಪಂಚಾಯತ್ ದ್ವಿತೀಯ ವಾರ್ಡ್‌ಗೆ  ನಡೆದ ಉಪ ಚುನಾವಣೆಯಲ್ಲಿ ಎಡರಂಗದ ಅಭ್ಯರ್ಥಿ 297 ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ. ಮತದಾನದಲ್ಲಿ 81.13 ಶೇ. ಮಂದಿ ಭಾಗವಹಿಸಿದ್ದರು. ಒಟ್ಟು 903 ಮಂದಿ ಮತ ಚಲಾಯಿಸಿದ್ದು, ಐಕ್ಯರಂಗದ ಅಭ್ಯರ್ಥಿ ಕೆ. ಸಂಧ್ಯಾ 294 ಮತ, ಬಿಜೆಪಿ ಅಭ್ಯರ್ಥಿ ಉಮಾದೇವಿ 18 ಮತ ಗಳಿಸಿದ್ದಾರೆ. ಈ ಬಾರಿ ಬಿಜೆಪಿಗೆ ಮತ ಕಡಿಮೆ ಲಭಿಸಿದೆ. ಕಳೆದ ವರ್ಷ 60 ಮತಗಳು ಲಭಿಸಿತ್ತು.

ವಿಧಾನಸಭೆಯಲ್ಲಿ ರೌದ್ರತಾಂಡವ ಪ್ರಕರಣ ವಿಚಾರಣೆ ನ.3ರಿಂದ

ತಿರುವನಂತಪುರ: ಪ್ರಜಾತಂತ್ರದ ದೇಗುಲವೆಂದೇ  ವಿಶ್ಲೇಷಿಸಲಾಗುವ ವಿಧಾನಸಭೆ ಯಲ್ಲಿ 11 ವರ್ಷಗಳ ಹಿಂದೆ ನಡೆದ ರಾಜ್ಯವನ್ನು ಬೆಚ್ಚಿಬೀಳಿಸಿದ   ರೌದ್ರತಾಂಡವ  ಪ್ರಕರಣದ ವಿಚಾರಣೆ ನ.೩ರಿಂದ ತಿರುವನಂತಪುರ ಚೀಫ್ ಜ್ಯುಡೀಶಿಯಲ್ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಆರಂಭಗೊಳ್ಳಲಿದೆ. ಇದು ಸಿಪಿಎಂನ್ನು ತೀವ್ರ ಸಂಕಷ್ಟದಲ್ಲಿ ಸಿಲುಕಿಸುವಂತೆ ಮಾಡಿದೆ. ಈ ಪ್ರಕರಣದಲ್ಲಿ ಮಾಜಿ ಸಚಿವರುಗಳಾದ ವಿ. ಶಿವನ್ ಕುಟ್ಟಿ, ಕೆ.ಟಿ. ಜಲೀಲ್, ಅಂದು ಎಡರಂಗ ಸಂಚಾಲಕರಾಗಿದ್ದ ಮಾಜಿ ಸಚಿವ ಇ.ಪಿ. ಜಯರಾಜನ್, ಮಾಜಿ ಶಾಸಕರಾದ  ಕೆ. ಅಜಿತ್, ಕೆ. ಕುಂಞಹಮ್ಮದ್, ಸಿ.ಕೆ. ಸದಾಶಿವನ್ ಮೊದಲಾದವರು ಈ ಪ್ರಕರಣದಲ್ಲಿ …

ಮೈಸೂರಿನಿಂದ ಎಡನೀರಿಗೆ ಹಿಂತಿರುಗುತ್ತಿದ್ದ ಯುವತಿ ನಾಪತ್ತೆ

ಕಾಸರಗೋಡು:  ಎಡನೀರಿನಿಂದ ಮೈಸೂರಿಗೆ ಹೋಗಿ ಅಲ್ಲಿಂದ ಬಸ್ಸಿನಲ್ಲಿ ಹಿಂತಿರುಗುತ್ತಿದ್ದ ಮೈಸೂರು ನಿವಾಸಿಯಾಗಿರುವ ಯುವತಿ ನಾಪತ್ತೆಯಾದ ಬಗ್ಗೆ ವಿದ್ಯಾನಗರ ಪೊಲೀಸರಿಗೆ ದೂರು ನೀಡಲಾಗಿದೆ.  ಮೈಸೂರು ಹಣಗೋಡು ಹೋಬಳಿ ಹರಿಣಹಳ್ಳಿ ನಿವಾಸಿ ಹಾಗೂ ಇತ್ತೀಚೆಗಿನಿಂದ ಪಾಡಿ ಗ್ರಾಮದ ಮೇಲಿನ ಎಡನೀರಿನ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ದಿ| ಮಂಜುನಾಥ ಎಂಬವರ ಪುತ್ರಿ ನಿರ್ಮಲ (18) ನಾಪತ್ತೆಯಾದ ಯುವತಿ. ಈ ಬಗ್ಗೆ ಆಕೆಯ ಅಜ್ಜ ಶರವಣ ಎಂಬವರು ನೀಡಿದ ದೂರಿನಂತೆ ವಿದ್ಯಾನಗರ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಎಡನೀರಿನಿಂದ ಮೈಸೂರಿಗೆ ಹೋಗಿದ್ದ …

ಪೆರ್ಲ ಪೇಟೆಯಲ್ಲಿ ಹಾಡಹಗಲೇ ಅಂಗಡಿಯಿಂದ 7 ಸಾವಿರ ರೂ. ಕಳವು

ಪೆರ್ಲ:  ಪೆರ್ಲ ಪೇಟೆಯಲ್ಲಿ ನಿನ್ನೆ ಹಾಡಹಗಲೇ  ಅಂಗಡಿಯೊಂದರಿಂದ ವ್ಯಕ್ತಿಯೋರ್ವ 7 ಸಾವಿರ ರೂಪಾಯಿ ಕಳವುಗೈದ ಘಟನೆ  ವರದಿಯಾಗಿದೆ.  ಕೆಳಗಿನ ಪೇಟೆಯ ಬಜಕೂಡ್ಲು ರಸ್ತೆ ಸಮೀಪವಿರುವ ಅಂಗಡಿಯಿಂದ ಹಣ ಕಳವು ನಡೆದಿದೆ. ಅಂಗಡಿಯ ಮಾಲಕ  ಸಮೀಪದ ಬೇರೊಂದು ಅಂಗಡಿಗೆ ತೆರಳಿ ಅಲ್ಪ ಹೊತ್ತಿನಲ್ಲೇ ಮರಳಿದ್ದು  ಈ ವೇಳೆ  ಡ್ರಾವರ್‌ನಲ್ಲಿದ್ದ 7 ಸಾವಿರ ರೂಪಾಯಿ ನಾಪತ್ತೆಯಾ ಗಿತ್ತು. ಇದರಿಂದ ಸಮೀಪದ ಸಿಸಿ ಟಿವಿ ಪರಿಶೀಲಿಸಿದಾಗ  ಪ್ಯಾಂಟ್, ಶರ್ಟ್ ಧರಿಸಿರುವ  ವ್ಯಕ್ತಿಯೋರ್ವ ಅಂಗಡಿಗೆ ನುಗ್ಗಿ ಡ್ರಾವರ್‌ನಿಂದ ಹಣ ತೆಗೆದು ಪರಾರಿಯಾಗುವ ದೃಶ್ಯ …

ಹಲ್ಲೆ ಭಯದಿಂದ ಮದ್ರಸ ವಿದ್ಯಾರ್ಥಿನಿ ರೈಲು ಹತ್ತಿ ಪರಾರಿ ಘಟನೆ : ಬೇಕಲ ಠಾಣೆಯಲ್ಲಿ ಹಾಜರಾದ ಉಸ್ತಾದ್‌ಗೆ ತಾಕೀತು

ಕಾಸರಗೋಡು: ಪಾಠವನ್ನು ಕಲಿಯದ ಹೆಸರಲ್ಲಿ 12ರ ಹರೆಯದ ಮದ್ರಸ ವಿದ್ಯಾರ್ಥಿನಿಯನ್ನು ಕ್ರೂರವಾಗಿ ಹಲ್ಲೆಗೈದು ಬೆದರಿಸಿದ ಉಸ್ತಾದ್ ಬೇಕಲ ಪೊಲೀಸ್ ಠಾಣೆಗೆ ಹಾಜರಾಗಿದ್ದು, ಪೊಲೀಸರು ತಾಕೀತು ನೀಡಿ ಬಿಡುಗಡೆಗೊಳಿಸಿದರು. ಮಲಪ್ಪುರಂ ನಿವಾಸಿ ಹಾಗೂ ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಮದ್ರಸ ಅಧ್ಯಾಪಕನಾದ ಯುವಕ ನಿನ್ನೆ ಮಧ್ಯಾಹ್ನ ಠಾಣೆಗೆ ತಲುಪಿದ್ದಾರೆ. ಈತನ ವಿರುದ್ಧ ಬಾಲಕಿ ಅಥವಾ ಮನೆ ಮಂದಿ ದೂರು ನೀಡದ ಹಿನ್ನೆಲೆಯಲ್ಲಿ ತಾಕೀತು ನೀಡಿ ಬಿಡುಗಡೆಗೊಳಿಸಲಾಗಿದೆ. ಪೊಲೀಸ್ ಕ್ರಮಕ್ಕೆ ವಿದೇಯನಾದ ಹಿನ್ನೆಲೆಯಲ್ಲಿ ಉಸ್ತಾದ್‌ನನ್ನು ಮದ್ರಸ ಸಮಿತಿ ಕೆಲಸದಿಂದ ಅಮಾನತುಗೊಳಿಸಿದೆ. …

ಕುಂಬಳೆ ಪೇಟೆಯಲ್ಲಿ ಬೀದಿ ನಾಯಿಗಳ ಉಪಟಳ

ಕುಂಬಳೆ: ಕುಂಬಳೆ ಪೇಟೆಯಲ್ಲಿ ಬೀದಿ ನಾಯಿಗಳು ತುಂಬಿಕೊಂಡಿದ್ದು, ಇದರಿಂದ  ಜನರಿಗೆ ನಡೆದಾಡಲಾಗದ ಸ್ಥಿತಿ ಉಂಟಾಗಿದೆ.  ಕಾಸರಗೋಡು-ಮಂಗಳೂರು ಭಾಗಕ್ಕೆ ತೆರಳುವ ಬಸ್ ವೈಟಿಂಗ್ ಶೆಡ್ ಸಮೀಪ  ಸಹಿತ ಪೇಟೆಯ ವಿವಿಧೆಡೆ ಹಲವು ನಾಯಿಗಳು  ಬೀಡುಬಿಟ್ಟಿವೆ. ಇದರಿಂದ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಬಸ್ ಪ್ರಯಾಣಿಕರಿಗೆ ನಡೆದಾಡಲು ಭಯ ಪಡಬೇಕಾದ ಸ್ಥಿತಿ ಉಂಟಾಗಿದೆ.  ಕುಂಬಳೆ ಪೇಟೆಯಲ್ಲಿ ಕಳೆದ ಹಲವು ಕಾಲದಿಂದ ಬೀದಿ ನಾಯಿಗಳು ತುಂಬಿಕೊಂಡು  ಜನರಿಗೆ ಆತಂಕ ಸೃಷ್ಟಿಸುತ್ತಿದ್ದು ಈಗಾಗಲೇ ಹಲವು ಮಂದಿಗೆ   ಕಡಿತವುಂಟಾಗಿದೆ. ಬೀದಿ ನಾಯಿಗಳ ಉಪಟಳಕ್ಕೆ ಪರಿಹಾರ ಕಾಣಬೇ …